26ರಂದು ಉಪ್ಪಿನಂಗಡಿಯಲ್ಲಿಶ್ರವಣ ತಪಾಸಣೆ ಶಿಬಿರ

Contributed bysiddiqneeraje@gmail.com|Vijaya Karnataka

ಉಪ್ಪಿನಂಗಡಿಯಲ್ಲಿ ಏ.26ರಂದು ಉಚಿತ ಶ್ರವಣ ತಪಾಸಣೆ ಶಿಬಿರ ನಡೆಯಲಿದೆ. ರೋಟರ್‌ ಕ್ಲಬ್‌ ಉಪ್ಪಿನಂಗಡಿ, ಪುತ್ತೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಟೀಮ್‌ ಈಶ್ವರ ಮಲ್ಪೆ ಸಹಯೋಗದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಕಿವಿ ಕೇಳಿಸಿಕೊಳ್ಳುವ ಸಮಸ್ಯೆಯಿಂದ ಬಳಲುವವರಿಗೆ ಶ್ರವಣ ಯಂತ್ರದ ವೆಚ್ಚದಲ್ಲಿ ಶೇ.40ರಷ್ಟು ಸಹಾಯಧನ ನೀಡಲಾಗುವುದು. ಶಿಬಿರದಲ್ಲಿ ಭಾಗವಹಿಸಲು ನೋಂದಣಿ ಕಡ್ಡಾಯವಾಗಿದೆ.

free hearing check up camp in uppinangady happening on 26th

ವಿಕ ಸುದ್ದಿಲೋಕ, ಉಪ್ಪಿನಂಗಡಿ

ರೋಟರಿ ಕ್ಲಬ್ ಉಪ್ಪಿನಂಗಡಿ ಮತ್ತು ಪುತ್ತೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿಟೀಮ್ ಈಶ್ವರ ಮಲ್ಪೆ ಸಹಯೋಗದೊಂದಿಗೆ ಏ.26ರಂದು ಉಪ್ಪಿನಂಗಡಿ ರೋಟರಿ ಸಮುದಾಯ ಭವನದಲ್ಲಿಶ್ರವಣ ಉಚಿತ ತಪಾಸಣೆ ಮತ್ತು ಶ್ರವಣ ಯಂತ್ರಕ್ಕೆ ಸಹಾಯಧನ ಹಾಗೂ ವಿತರಣೆ ಕಾರ ್ಯಕ್ರಮ ನಡೆಯಲಿದೆ.

ಶಿಬಿರದಲ್ಲಿಶ್ರವಣ ಸಮಸ್ಯೆಯಿಂದ (ಕಿವಿ ಕೇಳಿಸಿಕೊಳ್ಳುವ ಸಮಸ್ಯೆ) ಬಳಲುತ್ತಿರುವ ರೋಗಿಗಳಿಗೆ ಶ್ರವಣ ಯಂತ್ರಕ್ಕೆ ಆಗುವ ವೆಚ್ಚದ ಶೇ. 40 ಮೊತ್ತವನ್ನು ಟೀಮ್ ಈಶ್ವರ್ ಮಲ್ಪೆ ಸಂಸ್ಥೆ ಭರಿಸುತ್ತದೆ. ಶಿಬಿರದಲ್ಲಿಭಾಗವಹಿಸುವವರಿಗೆ ನೋಂದಣಿ ಕಡ್ಡಾಯವಾಗಿದೆ ಎಂದು ಸಂಸ್ಥೆ ಪತ್ರಿಕಾ ಪ್ರಕಟಣೆಯಲ್ಲಿತಿಳಿಸಿದೆ.