ಸ್ಪಿರಿಚುವಲ್ ಯೂನಿವರ್ಸಿಟಿ ನಿರ್ಮಾಣಕ್ಕೆ ಭೂಮಿಪೂಜೆ

Contributed bypaddu.thippasandara@gmail.com|Vijaya Karnataka

ಪಾಲನಹಳ್ಳಿ ಮಠದಲ್ಲಿ ಆಧ್ಯಾತ್ಮಿಕ ವಿಶ್ವವಿದ್ಯಾಲಯ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿತು. ನಾನಾ ಕಂಪನಿಗಳು ಮಠಕ್ಕೆ 50 ಸಾವಿರ ಕೋಟಿ ಹೂಡಿಕೆ ಮಾಡುತ್ತಿವೆ. ಶಿಕ್ಷಣ, ಆಯುರ್ವೇದ, ಗ್ರಾಮೀಣಾಭಿವೃದ್ಧಿ, ಸಸ್ಯಶಾಸ್ತ್ರ ಮತ್ತು ನದಿ ಜೋಡಣೆ ಕ್ಷೇತ್ರಗಳಲ್ಲಿ ಈ ಹೂಡಿಕೆ ಬಳಸಲಾಗುವುದು. ಭಾರತೀಯ ಸಂಪ್ರದಾಯದ ಮೌಲ್ಯಾಧಾರಿತ ಶಿಕ್ಷಣ, ಉತ್ತಮ ಆರೋಗ್ಯ ಸೇವೆ ಮತ್ತು ಉದ್ಯೋಗಾವಕಾಶ ಕಲ್ಪಿಸುವುದು ಇದರ ಉದ್ದೇಶವಾಗಿದೆ. ಇತರ 18 ಮಠಗಳ ಅಭಿವೃದ್ಧಿಗೂ ನೆರವು ನೀಡಲಾಗುವುದು.

50000 crore investment for spiritual university construction

ನಾನಾ ಕಂಪನಿಗಳಿಂದ ಪಾಲನಹಳ್ಳಿ ಮಠಕ್ಕೆ ಹಣ ಹೂಡಿಕೆ

ವಿಕ ಸುದ್ದಿಲೋಕ ಮಾಗಡಿ ಗ್ರಾಮಾಂತರ

ಸೋಲೂರು ಹೋಬಳಿಯ ಪಾಲನಹಳ್ಳಿಯ ಮಠಾಧ್ಯಕ್ಷ ಸಿದ್ದರಾಜ ಸ್ವಾಮೀಜಿಯವರು ನೇತೃತ್ವದಲ್ಲಿನಾನಾ ಕಂಪನಿಗಳ ಮೂಲಕ ಮಠಕ್ಕೆ 50 ಸಾವಿರ ಕೋಟಿ ಹೂಡಿಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಪಾಲನಹಳ್ಳಿ ಮಠದಲ್ಲಿಸುದ್ದಿಗಾರರೊಂದಿಗೆ ಮಾತನಾಡಿ, ಎಫ್ .ಎಸ್ .ಎಸ್ .ಟಿ, ಡಿ.ಎಸ್ . ಬಸ್ರೋನ್ ಕಂಪನಿಯವರ ಸಹಯೋಗದೊಂದಿಗೆ ಭಗವತಿದೇವಿ ಟೆಂಪಲ್ ಟ್ರಸ್ಟ್ ವತಿಯಿಂದ ಸುಮಾರು 50 ಸಾವಿರ ಕೋಟಿ ರೂಪಾಯಿಗಳ ಹೂಡಿಕೆಯನ್ನು ನಾನಾ ಯೋಜನೆಗಳಲ್ಲಿಮಾಡಲಾಗಿದ್ದು

ಈ ಹೂಡಿಕೆಯನ್ನು ಶಿಕ್ಷಣ , ಆಯುರ್ವೇದ, ಗ್ರಾಮೀಣಾಭಿವೃದ್ಧಿ, ಸ್ಪಿರಿಚುವಲ್ ಯೂನಿವರ್ಸಿಟಿ (ಅಧ್ಯಾತ್ಮಿಕ ವಿಶ್ವವಿದ್ಯಾಲಯ), ಸಸ್ಯಶಾಸ್ತ್ರ ಮತ್ತು ನದಿ ಜೋಡಣೆಯಂತಹ ಪ್ರಮುಖ ಕ್ಷೇತ್ರಗಳಲ್ಲಿಬಳಸಲಾಗುವುದು. ಭಾರತೀಯ ಸಂಪ್ರದಾಯದ ಮೌಲ್ಯಾಧಾರಿತ ಶಿಕ್ಷಣ, ಉತ್ತಮ ಆರೋಗ್ಯ ಸೇವೆ ಮತ್ತು ನಿರುದ್ಯೋಗಿಗಳಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವುದು. ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಕೇವಲ ತಮ್ಮ ಮಠ ಮಾತ್ರವಲ್ಲದೆ, ಇತರೆ 18 ಮಠಗಳಿಗೂ ನೆರವು ನೀಡಿ ಅವುಗಳ ಅಭಿವೃದ್ಧಿಗೆ ಪೂರಕ ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಭಾರತೀಯ ಧ್ಯಾನ ಪದ್ಧತಿ, ಸಾವಯವ ಕೃಷಿ ಮತ್ತು ಸನಾತನ ಸಂಪ್ರದಾಯದ ಉಳಿವಿಗೆ ಮಠವು ನಿರಂತರವಾಗಿ ಶ್ರಮಿಸಲಿದೆ ನಮೃತ ವಿದ್ಯಾ ಸಂಸ್ಥೆ 2012 ರಿಂದ ಮಠದ ವತಿಯಿಂದ ನಡೆಸಲ್ಪಡುತ್ತಿರುವ ಶಿಕ್ಷಣ ಸಂಸ್ಥೆ ಕೂಡ ಆಗಿದೆ. ಜತೆಗೆ ತರೀಕೆರೆಯ ಮಲ್ನಾಡು ವಿದ್ಯಾ ಸಂಸ್ಥೆಯನ್ನು ಅಧಿಕೃತವಾಗಿ ಪಾಲನಹಳ್ಳಿ ಮಠಕ್ಕೆ ಸಂಸ್ಥೆಯ ಮುಖ್ಯಸ್ಥರು ಸ್ವಾಮೀಜಿಗಳಿಗೆ ಹಸ್ತಾಂತರ ಮಾಡಲಾಯಿತು. ನಂತರ ನೂತನವಾಗಿ ಆದಿಜಾಂಬವ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟಿ್ರೕಸ್ ಕರ್ನಾಟಕ, ವಸಿಷ್ಠ ಅರುಂಧತಿ ಗುರುಕುಲ ನಿವಾಸ ಮತ್ತು ಗೋಶಾಲೆ ಇದೇ ವೇಳೆ ಸ್ವಾಮೀಜಿಗಳಿಂದ ಶಂಕುಸ್ಥಾಪನೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಸರಪಳಿ ಮಠದ ಬಸವಪ್ರಭು, ಅಬಕಾರಿ ಸಚಿವರಾದ ಆರ್ .ಬಿ. ತಿಮ್ಮಾಪುರ, ದುಬೈನ ವಿಜಯ್ ಕುಮಾರ್ , ಸೌತ್ ಅಫ್ರಿಕಾದ ಅಮಲ,ಫಿನ್ಲೆಂಡ್ ಮೂಲದ ತೋಮ ತಪಾನಿ, ರಾಜ್ಯ ಸರಕಾರದ ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯ ಅಧಿಕಾರಿ ಚಿರಂಜೀವಿ, ಮಾಜಿ ಶಾಸಕ ಎಂ.ಡಿ. ಲಕ್ಷ್ಮೀನಾರಾಯಣ, ಪದ್ಮಾ ನಾಗರಾಜ್ , ವಿಜಯ ಪದ್ಮನಾಭ, ಬಾಬುರಾವ್ ಮುಡಬಿ, ಗೋನಾಳ ಭೀಮಪ್ಪ, ಬಾಲಕೃಷ್ಣ, ವಕೀಲ ರಾಧಾ ದೊರೆರಾಜು, ಮಠದ ಕಾರ್ಯದರ್ಶಿ ಪವನ್ ಕುಮಾರ್ , ಬೆಳಗುಂಬ ವಿಶ್ವನಾಥ್ , ಕಲ್ಕರೆ ಶಿವಣ್ಣ, ಪಿ.ಮೂರ್ತಿ, ನಾಗರಾಜು, ಮಂಜೇಶ್ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.

21ಎಸ್ ಎಲ್ ಆರ್ 1 :

ಸೋಲೂರು ಹೋಬಳಿಯ ಪಾಲನಹಳ್ಳಿ ಮಠದ ವತಿಯಿಂದ ವಸಿಷ್ಠ ಅರುಂಧತಿ ಗುರುಕುಲ ನಿವಾಸ ಮತ್ತು ಗೋಶಾಲೆ ಮಠಾಧ್ಯಕ್ಷ ಸಿದ್ದರಾಜ ಸ್ವಾಮೀಜಿ ಭೂಮಿ ಪೂಜೆ ನೆರವೇರಿಸಿದರು.