ಪಾಕ್ ಮುನೀರ್ ‘ಡಬಲ್ ಗೇಮ್ ’ ಬಗ್ಗೆ ಎಚ್ಚರಿಕೆ

Contributed byvijay.cheelange@timesgroup.com|Vijaya Karnataka

ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್‌ ಇರಾನ್‌ಗೆ ಭೇಟಿ ನೀಡಿದ್ದಾರೆ. ಅಮೆರಿಕ ಮತ್ತು ಇರಾನ್‌ ನಡುವೆ ಉದ್ವಿಗ್ನತೆ ಹೆಚ್ಚಿರುವ ಸಮಯದಲ್ಲಿ ಈ ಭೇಟಿ ನಡೆದಿದೆ. ಮುನೀರ್‌ ಅವರು ಹಿಂದೆ ಇರಾನ್‌ ಸೇನಾ ನಾಯಕರೊಂದಿಗೆ ಸಂಬಂಧ ಹೊಂದಿದ್ದರು ಎಂದು ಅಮೆರಿಕ ಗುಪ್ತಚರ ಇಲಾಖೆ ತಿಳಿಸಿದೆ. ಈ ಹಿಂದೆ ಇರಾನ್‌ ನಾಯಕರು ಹಾಗೂ ಮುನೀರ್‌ ನಡುವೆ ನಿಕಟ ಸ್ನೇಹವಿತ್ತು ಎಂದು ವರದಿಯಾಗಿದೆ. ಅಮೆರಿಕ ಪಾಕಿಸ್ತಾನದ ಮೇಲೆ ನಂಬಿಕೆ ಇಡಬಾರದು ಎಂದು ಹೇಳಲಾಗಿದೆ.

pak army chief munir dark negotiations between america and iran

ಇಸ್ಲಾಮಾಬಾದ್ : ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ… ಮಾರ್ಷಲ್ ಅಸಿಮ್ ಮುನೀರ್ , ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಉಲ್ಬಣಗೊಂಡ ನಂತರ ಇರಾನ್ ಗೆ ಭೇಟಿ ನೀಡಿದ ಮೊದಲ ವಿದೇಶಿ ನಾಯಕರಾಗಿದ್ದಾರೆ. ಮುನೀರ್ , 2016 ಮತ್ತು 2017 ರಲ್ಲಿಪಾಕಿಸ್ತಾನದ ಮಿಲಿಟರಿ ಗುಪ್ತಚರ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾಗ, ಅವರು ಇರಾನ್ ಸೇನಾಪಡೆ ನಾಯಕರೊಂದಿಗೆ ಸಂಬಂಧವನ್ನು ಬೆಳೆಸಲು ಪ್ರಾರಂಭಿಸಿದರು ಎಂದು ಟ್ರಂಪ್ ಆಡಳಿತಕ್ಕೆ ಅಮೆರಿಕದ ಗುಪ್ತಚರ ಇಲಾಖೆ ಎಚ್ಚರಿಸಿದೆ.

ಇರಾನ್ ನ ಸೈನ್ಯ ಮತ್ತು ಅವರ ಗುಪ್ತಚರದೊಂದಿಗೆ ಸಂಬಂಧವನ್ನು ಹೊಂದಿದ್ದಾರೆ. ಮುನೀರ್ ಅವರು 2020 ರಲ್ಲಿಅಮೆರಿಕದ ದಾಳಿಯಲ್ಲಿಹತ್ಯೆಯಾದ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾಫ್ಸ್ ರ್ (ಐಆರ್ ಜಿಸಿ) ಮಾಜಿ ಮುಖ್ಯಸ್ಥ ಖಾಸಿಮ್ ಸೊಲೈಮಾನಿ ಮತ್ತು 2025 ರಲ್ಲಿಇಸ್ರೇಲಿ ದಾಳಿಯಲ್ಲಿಹತ್ಯೆಯಾದ ಕಮಾಂಡರ್ ಹೊಸೇನ್ ಸಲಾಮಿ ಅವರೊಂದಿಗೆ ನಿಕಟ ಸ್ನೇಹವನ್ನು ಹೊಂದಿದ್ದರು ಎಂದು ಅಮೆರಿಕ ಮಾಧ್ಯಮಗಳು ಕೂಡ ವರದಿ ಮಾಡಿವೆ. ‘‘ಟ್ರಂಪ್ ಪಾಕಿಸ್ತಾನಿಗಳನ್ನು ನಂಬಬಾರದು. ಪಾಕಿಸ್ತಾನವು ಅಫಘಾನಿಸ್ತಾನದಲ್ಲಿವಿಶ್ವಾಸಘಾತುಕ ‘ಮಿತ್ರ’ನಾಗಿದ್ದು, ನಮ್ಮ ಸ್ನೇಹಿತರಂತೆ ನಟಿಸುತ್ತಾ ತಾಲಿಬಾನ್ ಗೆ ಬೆಂಬಲ ನೀಡುತ್ತಿದೆ,’’ಎಂದು ಫೌಂಡೇಶನ್ ಫಾರ್ ಡಿಫೆನ್ಸ್ ಆಫ್ ಡೆಮಾಕ್ರಸೀಸ್ ನ ಹಿರಿಯ ಸಹೋದ್ಯೋಗಿ ಬಿಲ್ ರೊಗ್ಗಿಯೊ ತಿಳಿಸಿದ್ದಾರೆ.