ನರಗುಂದ

Contributed bysubedarcb@gmail.com|Vijaya Karnataka

ನರಗುಂದ ವಿರಕ್ತಮಠದಲ್ಲಿ ಶ್ರೀ ಚನ್ನಬಸವ ಮಹಾಶಿವಯೋಗಿಗಳ ಪುಣ್ಯಸ್ಮರಣೋತ್ಸವ ಜರುಗಿತು. ಈ ಸಂದರ್ಭದಲ್ಲಿ ಕೆಪಿಸಿಸಿ ಮಾಧ್ಯಮ ವಕ್ತಾರ ಡಾ. ಸಂಗಮೇಶ ಕೊಳ್ಳಿಯವರ ಅವರು ಶ್ರೀಗಳ ಆದರ್ಶ ಜೀವನ ಕುರಿತು ಮಾತನಾಡಿದರು. ವಿರಕ್ತಮಠದ ಶಿವಕುಮಾರ ಸ್ವಾಮಿಗಳು ಸಾಮೂಹಿಕ ವಿವಾಹ ಏರ್ಪಡಿಸಿರುವುದು ಶ್ಲಾಘನೀಯ. ಮುಂಡರಗಿ, ಕಮತೇನಮಠದ ಸ್ವಾಮಿಗಳು ಸಹ ಉಪಸ್ಥಿತರಿದ್ದರು. ಹಾಸ್ಯ ಸಂಜೆ, ಸಂಗೀತ ಕಾರ್ಯಕ್ರಮಗಳು ನಡೆದವು.

nargunds channabasav mahashivayogis punya smaranotsav

20 ಎನ್ ಆರ್ ಡಿ-2

ಶ್ರೀ ಚನ್ನಬಸವ ಮಹಾಶಿವಯೋಗಿಗಳ ಪುಣ್ಯಸ್ಮರಣೋತ್ಸವ (ಕಿಕ್ಕರ್ )

ಸಂಸ್ಕಾರಯುತ ಜೀವನ ನಡೆಸಿ (ಹೆಡ್ )

ವಿಕ ಸುದ್ದಿಲೋಕ ನರಗುಂದ

ಇಲ್ಲಿನ ವಿರಕ್ತಮಠವು ಐತಿಹಾಸಿಕ ಮತ್ತು ಆಧ್ಯಾತ್ಮಿಕ ಹಿನ್ನೆಲೆ ಹೊಂದಿರುವ ಪುಣ್ಯ ಕ್ಷೇತ್ರ.ವಿರಕ್ತಮಠದ ಲಿಂ.ಚನ್ನಬಸವ ಮಹಾಶಿವಯೋಗಿಗಳು ನಾಡಿಗೆ ಆದರ್ಶದ ಬದುಕು ಕಟ್ಟಿಕೊಳ್ಳಲು ಶ್ರಮಿಸಿದರೆಂದು ಕೆಪಿಸಿಸಿ ಮಾಧ್ಯಮ ವಕ್ತಾರ ಡಾ. ಸಂಗಮೇಶ ಕೊಳ್ಳಿಯವರ ಹೇಳಿದರು.

ಸ್ಥಳೀಯ ವಿರಕ್ತಮಠದ ಚನ್ನಬಸವ ಮಹಾಶಿವಯೋಗಿಗಳ ಪುಣ್ಯಸ್ಮರಣೋತ್ಸವ ನಿಮಿತ್ತ ನಡೆದ ಜೀವನ ದರ್ಶನ ಪ್ರವಚನದಲ್ಲಿಹಮ್ಮಿಕೊಂಡ ಜಾನಪದೋತ್ಸವದಲ್ಲಿಮಾತನಾಡಿದರು. ವಿರಕ್ತಮಠದ ಈಗಿನ ಶಿವಕುಮಾರ ಸ್ವಾಮಿಗಳು ಪ್ರವಚನ ನಡೆಸುವ ಮೂಲಕ ಸಾಮೂಹಿಕ ವಿವಾಹ ಏರ್ಪಡಿಸುತ್ತಿರುವುದು ಸಂತಸದ ಸಂಗತಿ. ನಾವೆಲ್ಲಮಠಗಳು, ಗುರುಗಳು ನೀಡಿದ ಸಂಸ್ಕಾರದಂತೆ ಬದುಕಿ ಜೀವನದಲ್ಲಿಯಶಸ್ಸು ಪಡೆಯೋಣ ಎಂದರು.

ಮುಂಡರಗಿ ಶ್ರೀ ಮಲ್ಲಿಕಾಜುನ ಸ್ವಾಮಿಗಳು, ಕಮತೇನಮಠದ ಶಿವಕುಮಾರ ದೇವರು ಮಾತನಾಡಿದರು. ಮೂಲೇಗದ್ದಿಯ ಶ್ರೀ ಚನ್ನಬಸವ ಸ್ವಾಮಿಗಳು, ವಿರಕ್ತಮಠದ ಶಿವಕುಮಾರ ಸ್ವಾಮಿಗಳು, ಖಾನಾಪೂರ ಪ್ರಭುಲಿಂಗ ದೇವರು ಉಪಸ್ಥಿತರಿದ್ದರು.

ಬಿ.ಪ್ರಾಣೇಶ, ನರಸಿಂಹ ಜೋಶಿ, ಬಸವರಾಜ ಮಾಮನಿ ಅವರಿಂದ ಹಾಸ್ಯ ಸಂಜೆ ಕಾರ್ಯಕ್ರಮ ನಡೆಯಿತು. ಪೂಜಾ ವಿಭೂತಿಮಠ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು.

ನರಗುಂದ: ಫೋಟೋ ಶೀರ್ಷಿಕೆ) 20 ಎನ್ ಆರ್ ಡಿ-2 :

ನರಗುಂದ ವಿರಕ್ತಮಠದ ಚನ್ನಬಸವ ಮಹಾಶಿವಯೋಗಿಗಳ ಪುಣ್ಯಸ್ಮರಣೋತ್ಸವ ನಿಮಿತ್ತ ನಡೆದ ಜಾನಪದೋತ್ಸವದಲ್ಲಿಡಾ. ಸಂಗಮೇಶ ಕೊಳ್ಳಿಯವರ ಮಾತನಾಡಿದರು.