ಫ್ಲಯರ್ ಕೆಳಗೆ ರೈಟ್ ಗೆ ಹಾಕಿ ಲೀಡ್

Contributed bybabitha.salian@timesgroup.com|Vijaya Karnataka

ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿ, ನಟಿಸಿ, ನಿರ್ಮಿಸಿದ 'ಲವ್ ಮಾಕ್‌ಟೇಲ್‌ 3' ಸಿನಿಮಾ ಯಶಸ್ವಿಯಾಗಿದೆ. ಈ ಯಶಸ್ಸಿನ ಹಿಂದಿನ ಸೂತ್ರವನ್ನು ಅವರು ಹಂಚಿಕೊಂಡಿದ್ದಾರೆ. ಕಥೆ ಮತ್ತು ಬಜೆಟ್ ಹೊಂದಾಣಿಕೆಯಾದರೆ ಸಿನಿಮಾ ಗೆಲ್ಲುತ್ತದೆ ಎನ್ನುತ್ತಾರೆ. ಪ್ರೇಕ್ಷಕರನ್ನು ತಲುಪುವಂತೆ ಕಥೆ ಹೇಳುವುದು ನಿರ್ದೇಶಕನ ಜಾಣ್ಮೆ. ಹೊಸ ಚಿತ್ರಕ್ಕೆ ತಯಾರಿ ನಡೆಸುತ್ತಿದ್ದಾರೆ.

love mocktail 3 darling krishn shares the secret of success

ಡಾರ್ಲಿಂಗ್ ಡೈರೆಕ್ಷನ್ ಸಕ್ಸಸ್ ಸೂತ್ರ

-ಮತ್ತೊಂದು ನಿರ್ದೇಶನಕ್ಕೆ ತಯಾರಿ

ಇಂಟ್ರೊ

ಡಾರ್ಲಿಂಗ್ ಕೃಷ್ಣ ನಟಿಸಿ, ನಿರ್ದೇಶಿಸಿ, ನಿರ್ಮಿಸಿದ ‘ಲವ್ ಮಾಕ್ ಟೇಲ್ 3’ ಸಿನಿಮಾ ಜನರನ್ನು ಚಿತ್ರಮಂದಿರಕ್ಕೆ ಕರೆತರುವಲ್ಲಿಹಾಗೂ ಹೌಸ್ ಫುಲ್ ಪ್ರದರ್ಶನ ಕಾಣುವಲ್ಲಿಯಶಸ್ವಿಯಾಗಿದೆ. ಈ ಸಕ್ಸಸ್ ಸೂತ್ರವನ್ನು ಅವರಿಲ್ಲಿರಿವೀಲ್ ಮಾಡಿದ್ದಾರೆ.

ಕಿರಣ್ ಚಂದ್ರ

ಬಹುನಿರೀಕ್ಷಿತ ‘ಟಾಕ್ಸಿಕ್ ’ ಬಿಡುಗಡೆ ಮುಂದಕ್ಕೆ ಹೋದ ತಕ್ಷಣ ‘ಧುರಂಧರ್ -2’ ಎದುರು ತಮ್ಮ ಸೂಪರ್ ಹಿಟ್ ಫ್ರಾಂಚೈಸಿ ‘ಲವ್ ಮಾಕ್ ಟೇಲ್ -3’ ಸಿನಿಮಾವನ್ನು ತೆರೆಗೆ ತರಲು ನಿರ್ಧರಿಸಿದ ನಟ, ನಿರ್ದೇಶಕ ಡಾರ್ಲಿಂಗ್ ಕೃಷ್ಣ ಈಗ ಗೆಲುವಿನ ನಗೆ ಬೀರಿದ್ದಾರೆ. 30 ದಿನ ಕಳೆದ ಬಳಿಕವೂ ಬೆಂಗಳೂರಿನಲ್ಲೇ ಈ ಚಿತ್ರ 57 ಶೋಗಳನ್ನು ಹೊಂದಿದೆ. ವೀಕೆಂಡ್ ನಲ್ಲಿಈಗಲೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವ ಇದರ ನಿರ್ಮಾಣಕ್ಕೆ ಹಾಕಿದ ಬಂಡವಾಳದ ಸುಮಾರು 8 ಪಟ್ಟು ಮೊತ್ತವು ಗಳಿಕೆ ರೂಪದಲ್ಲಿವಾಪಸ್ಸಾಗಿದೆ. ಆದರೆ ಕಲೆಕ್ಷನ್ ಗಿಂತಲೂ ಜನರು ತಮಗೆ ನೀಡಿದ ಪ್ರೀತಿ ಮನತುಂಬಿಸಿದೆ ಎಂದಿದ್ದಾರೆ ಕೃಷ್ಣ.

ಗೆಲುವಿನ ಲೆಕ್ಕಾಚಾರ

ಸಿನಿಮಾದ ಸೋಲು ಗೆಲುವಿನ ಲೆಕ್ಕಾಚಾರವನ್ನು ಶುರು ಮಾಡುವ ಮುನ್ನವೇ ಯೋಚಿಸಬೇಕು ಎಂದಿರುವ ಅವರು, ‘ಸಿನಿಮಾಗಳು ಗೆಲ್ಲುತ್ತಿಲ್ಲಎನ್ನುವ ಸನ್ನಿವೇಶದಲ್ಲಿಅದರ ಬಜೆಟ್ ಮುಖ್ಯವಾಗುತ್ತದೆ. ನನಗೆ ನಮ್ಮ ಮಾರ್ಕೆಟ್ ನ ಅರಿವಿತ್ತು. ಅದಕ್ಕೆ ತಕ್ಕಂತೆ ಕಥೆ ಮಾಡಿದೆವು. ದೊಡ್ಡ ಬಜೆಟ್ ಕೇಳುವ ಕಥೆ ಮಾಡಿ ಬಳಿಕ ಅದು ಬಯಸುವ ಖರ್ಚಿಗಿಂತ ಕಡಿಮೆ ದುಡ್ಡಿನಲ್ಲಿಸಿನಿಮಾ ಮಾಡಬಾರದು. ಕಥೆ ಹಾಗೂ ಬಜೆಟ್ ಮೊದಲು ಪರಸ್ಪರ ಸಿಂಕ್ ಆಗಬೇಕು. ಹಾಕಿದ ಬಂಡವಾಳ ವಾಪಸ್ಸಾಗಬೇಕು ಎಂದರೆ ಮೊದಲನೆಯದಾಗಿ ಸಿನಿಮಾವನ್ನೇ ಅದ್ಭುತವಾಗಿ ಮಾಡಬೇಕು. ಇದಕ್ಕೆ ಸ್ಟ್ರಾಟಜಿ ಬೇಕಿಲ್ಲ. ಬದಲಾಗಿ ಕಥೆ, ಅದಕ್ಕೆ ತಕ್ಕಂಥ ಬಜೆಟ್ ಇವೆರಡು ಸಿಕ್ಕಿದ ನಂತರ ಅಷ್ಟೇ ಚೆನ್ನಾಗಿ ಸಿನಿಮಾ ಮಾಡಬೇಕಷ್ಟೆ’ ಎಂದು ಹೇಳಿದ್ದಾರೆ.

ನಿರ್ದೇಶಕನ ಜಾಣ್ಮೆ

ಒಂದು ಕಥೆಯನ್ನು ನಿರ್ದೇಶಕನಾಗಿ ಎಲ್ಲರಿಗೂ ಮೆಚ್ಚಿಸುವುದು ಕಷ್ಟ. ಆದರೆ ಹೆಚ್ಚಿನ ಜನರಿಗೆ ತಲುಪಿಸುವ ಪ್ರಯತ್ನವನ್ನು ಮಾಡಲೇಬೇಕು ಎಂದು ವಿವರಿಸಿರುವ ಡಾರ್ಲಿಂಗ್ ಕೃಷ್ಣ, ‘ಒಬ್ಬ ನಿರ್ದೇಶಕ ಸಮಾಜಕ್ಕೆ ಯಾವುದು ಸರಿ, ಯಾವುದು ತಪ್ಪು ಎನ್ನುವುದನ್ನು ತನ್ನ ದೃಷ್ಟಿಕೋನದಲ್ಲಿಹೇಳಿಕೊಂಡು ಹೋಗುತ್ತಾನೆ. ಅದರಂತೆ ‘ಲವ್ ಮಾಕ್ ಟೇಲ್ -3’ ಸಿನಿಮಾದ ಜಗ್ಗ ಪಾತ್ರವನ್ನು ಕಾಮಿಡಿಯಾಗಿ ಅಥವಾ ಯಾವುದೇ ರೀತಿಯಲ್ಲಿಹೇಳಬಹುದಿತ್ತು. ಆದರೆ ಅದು ಎಲ್ಲಾವರ್ಗದ ಜನರಿಗೂ ತಲುಪುವ ರೀತಿಯಲ್ಲಿಹೇಳುವುದೇ ಜಾಣ್ಮೆ. ಅದು ನಿರ್ದೇಶಕನ ಆಲೋಚನೆಯಲ್ಲಿಇರಬೇಕಾದ ಸೂಕ್ಷ್ಮತೆ’ ಎಂದಿದ್ದಾರೆ.

ಮುಂದಾಲೋಚನೆ ಮುಖ್ಯ

‘ಸಾರ್ವತ್ರಿಕವಾಗಿ ಎಲ್ಲರಿಗೂ ಇಷ್ಟವಾಗುವಂಥ ಒಂದು ಕಥೆ ಹೇಳಬೇಕಾಗುತ್ತದೆ. ಯಾವುದೇ ಪಾತ್ರ, ದೃಶ್ಯ ಇಷ್ಟು ಚೆನ್ನಾಗಿ ಜನರನ್ನು ತಲುಪುತ್ತದೆ ಎಂದು ನಾವು ಊಹೆ ಕೂಡ ಮಾಡಿರಲಿಲ್ಲಎಂದರೆ ಅದು ತಪ್ಪಾಗುತ್ತದೆ. ಯಾಕೆಂದರೆ ಎಲ್ಲವೂ ಅವರಿಗೆ ಇಷ್ಟವಾಗಲಿ ಎಂದೇ ಮಾಡಿರುತ್ತೇವೆ. ಅದು ವರ್ಕ್ ಆಗುತ್ತದೆ ಎಂಬ ಆತ್ಮವಿಶ್ವಾಸದಲ್ಲಿಯೇ ಅದನ್ನು ಸಿನಿಮಾದಲ್ಲಿಅಳವಡಿಸಿರುತ್ತೇವೆ. ಒಂದು ದೃಶ್ಯವನ್ನು ಬೆಂಗಳೂರಿಗರು ನೋಡುವ ವಿಧಾನ ಬೇರೆ, ಬೇರೆ ಊರಿನಲ್ಲಿರುವವರು ನೋಡುವ ರೀತಿ ಬೇರೆ. ಒಂದು ಪಾತ್ರ ಅಥವಾ ದೃಶ್ಯವನ್ನು ಜನರು ಸ್ವೀಕರಿಸುವ ವಿಧಾನ ಪ್ರಾಂತ್ಯವಾರು ಬೇರೆ ಬೇರೆಯಾಗಿರುತ್ತದೆ’ ಎಂದು ತಿಳಿಸಿದ್ದಾರೆ ಡಾರ್ಲಿಂಗ್ ಕೃಷ್ಣ.

ಬಾಕ್ಸ್

ಹೊಸ ಚಿತ್ರಕ್ಕೆ ತಯಾರಿ

ಲವ್ ಮಾಕ್ ಟೇಲ್ ಸಿನಿಮಾದ ಇನ್ನೊಂದು ಸೀಕ್ವೆಲ್ ಮಾಡುವ ಆಲೋಚನೆ ಇಲ್ಲಸದ್ಯಕ್ಕಿಲ್ಲಎಂದು ಸ್ಪಷ್ಟಪಡಿಸಿರುವ ಡಾರ್ಲಿಂಗ್ ಕೃಷ್ಣ, ‘ಈ ಚಿತ್ರ ಚೆನ್ನಾಗಿ ಓಡುತ್ತಿರುವುದರಿಂದ ಇದನ್ನು ಇನ್ನಷ್ಟು ಜನರಿಗೆ ತಲುಪಿಸುವ ಪ್ರಯತ್ನ ಮಾಡುತ್ತಿದ್ದೇವೆ. ‘ಲವ್ ಮಾಕ್ ಟೇಲ್ -3’ ಅನೌನ್ಸ್ ಮಾಡಿದಾಗಲೇ ಜನರು ಇದರಲ್ಲಿಕಥೆ ಮಾಡಲು ಏನಿದೆ ಎಂದೆಲ್ಲಾಕೊಂಕು ಮಾತನಾಡಿದ್ದರು. ಅದು ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿತ್ತು. ಈಗ ನನ್ನ ಬಳಿ ಒಂದಷ್ಟು ವಿಷಯಗಳಿವೆ. ಅವುಗಳಲ್ಲಿಜನರಿಗೆ ಹೇಳಬಹುದು ಎಂದು ಅನಿಸಿರುವುದರ ಬಗ್ಗೆ ಹೊಸ ಕಥೆ ಬರೆಯುತ್ತಿದ್ದೇನೆ. ‘ಲವ್ ಮಾಕ್ ಟೇಲ್ ’ನ ಬಿಸ್ನೆಸ್ ಗಳೆಲ್ಲವೂ ಮುಗಿದ ಮೇಲೆ ಹೊಸ ಚಿತ್ರದ ಕೆಲಸ ಶುರುವಾಗಲಿದೆ. ಸದ್ಯಕ್ಕೆ ನಾನು ನಟನೆಗಾಗಿ ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ’ ಎಂದಿದ್ದಾರೆ.