24ಕ್ಕೆ ರೈತ ಉತ್ಪಾದಕ ಸಂಸ್ಥೆಗಳ, ನವೋದ್ಯಮಗಳ ಸಮಾವೇಶ

Contributed byvenkatesh.narasappa@timesgroup.com|Vijaya Karnataka

ಕಲಬುರಗಿಯಲ್ಲಿ ಏ.24ರಂದು ರೈತ ಉತ್ಪಾದಕ ಸಂಸ್ಥೆಗಳು ಮತ್ತು ನವೋದ್ಯಮಗಳ ಸಮಾವೇಶ ನಡೆಯಲಿದೆ. ಬೆಂಗಳೂರು ಬಯೋ ಇನ್ನೊವೇಷನ್‌ ಕೇಂದ್ರವು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ, ಕೃಷಿ ಇಲಾಖೆ, ನಬಾರ್ಡ್‌ ಹಾಗೂ ಕೆ-ಟೆಕ್‌ ಸಹಯೋಗದೊಂದಿಗೆ ಈ ಕಾರ್ಯಕ್ರಮ ಆಯೋಜಿಸಿದೆ. ಕಲ್ಯಾಣ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಇಂತಹ ಕಾರ್ಯಕ್ರಮ ನಡೆಯಲಿದ್ದು, ತಜ್ಞರು ವಿವಿಧ ವಿಷಯಗಳ ಮೇಲೆ ಮಾತನಾಡಲಿದ್ದಾರೆ. ಬೆಸ್ಟ್‌ ಎಫ್‌ಪಿಒಗಳಿಗೆ ಸ್ಟಾರ್ಟ್‌ ಅಪ್‌ ಅವಾರ್ಡ್‌ ಸಹ ನೀಡಲಾಗುತ್ತಿದೆ.

farmers producer organizations and startups summit on august 24

24ಕ್ಕೆ ರೈತ ಉತ್ಪಾದಕ ಸಂಸ್ಥೆಗಳ, ನವೋದ್ಯಮಗಳ ಸಮಾವೇಶ

ವಿಕ ಸುದ್ದಿಲೋಕ ಕಲಬುರಗಿ

ಬೆಂಗಳೂರು ಬಯೋ ಇನ್ನೋವೇಷನ್ ಕೇಂದ್ರವು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ, ಕೃಷಿ ಇಲಾಖೆ, ನಬಾರ್ಡ್ ಹಾಗೂ ಕೆ-ಟೆಕ್ ಸಹಯೋಗದೊಂದಿಗೆ ಏ.24ರಂದು ಬೆಳಗ್ಗೆ 10 ಗಂಟೆಗೆ ನಗರದ ಜೆಸ್ಟ್ ಕ್ಲಬ್ ನಲ್ಲಿರೈತ ಉತ್ಪಾದಕ ಸಂಸ್ಥೆಗಳು ಮತ್ತು ನವೋದ್ಯಮಗಳ ಸಮಾವೇಶ - 2026 ಕಾರ್ಯಕ್ರಮ ಆಯೋಜಿಸಲಾಗಿದೆ.

ಕಲ್ಯಾಣ ಕರ್ನಾಟಕದಲ್ಲಿಪ್ರಾದೇಶಿಕ ಉಪಕ್ರಮ ಭಾಗವಾಗಿ ಇದೇ ಮೊದಲ ಬಾರಿಗೆ ರೈತ ಉತ್ಪಾದಕ ಸಂಸ್ಥೆಗಳು ಮತ್ತು ನವೋದ್ಯಮಿಗಳ ನಡುವಿನ ಇಮ್ಮರ್ಶನ್ ಕಾರ್ಯಕ್ರಮ ಇದಾಗಿದ್ದು, ಬೆಳಗ್ಗೆ 10 ರಿಂದ ಸಂಜೆ 4ಗಂಟೆವರೆಗೆ ನಡೆಯಲಿದೆ. ವಿವಿಧ ವಿಷಯಗಳ ಮೇಲೆ ತಜ್ಞರು ಮಾತನಾಡಲಿದ್ದಾರೆ. ಕೃಷಿ ಉತ್ಪನ್ನ ಖರೀದಿಗಿರುವ ಅವಕಾಶ, ಮಾರುಕಟ್ಟೆ ವಿಸ್ತರಣೆ, ನೆಟ್ ವರ್ಕ್ ಲಿಂಕೇಜ್ ಚೈನ್ , ಇಂಡಸ್ಟ್ರಿಗಳೊಂದಿಗೆ ಸಂವಾದ ನಡೆಯಲಿದೆ. ಇದಲ್ಲದೆ ಬೆಸ್ಟ್ ಎಫ್ ಪಿಒಗಳಿಗೆ ಸ್ಟಾರ್ಟ್ ಅಪ್ ಅವಾರ್ಡ್ ಸಹ ನೀಡಲಾಗುತ್ತಿದೆ.

ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಮತ್ತು ಐ.ಟಿ-ಬಿ.ಟಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಅರಣ್ಯ ಪರಿಸರ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ ಖಂಡ್ರೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವ ಎಸ್ .ಎಸ್ .ಮಲ್ಲಿಕಾರ್ಜುನ, ಬೆಂಗಳೂರು ಬಯೋ ಇನ್ನೊವೇಷನ್ಸ್ ಸೆಂಟರ್ ಉಪಾಧ್ಯಕ್ಷ (ಕಾರ್ಯಚರಣೆ) ಸಂತೋಷ ಎಸ್ , ವ್ಯವಸ್ಥಾಪಕ ನಿರ್ದೇಶಕ ಡಾ.ಮೊಹಮ್ಮದ ಆದಿಲ್ ಎ.ಎ., ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಕಾರ್ಯಕ್ರಮದಲ್ಲಿಭಾಗವಹಿಸಲಿದ್ದಾರೆ.