ವಿಶ್ವಕ್ಕೆ ಇಂದು ಬಸವಣ್ಣನೇ ಸಾಂಸ್ಕೃತಿಕ ನಾಯಕ

Contributed bybasavakumar096@gmail.com|Vijaya Karnataka

ಹುಲಸೂರ ಪಟ್ಟಣದಲ್ಲಿ 893ನೇ ಬಸವ ಜಯಂತಿ ಆಚರಿಸಲಾಯಿತು. ಅಲ್ಲಮ ಪ್ರಭು ಶೂನ್ಯ ಪೀಠ ಅನುಭವ ಮಂಟಪದಲ್ಲಿ ಬೈಕ್ ರ‍್ಯಾಲಿಗೆ ಚಾಲನೆ ನೀಡಲಾಯಿತು. ಬಸವಣ್ಣನವರು ವಿಶ್ವದ ಸಾಂಸ್ಕೃತಿಕ ನಾಯಕರಾಗಬೇಕು ಎಂದು ಶಿವಾನಂದ ಸ್ವಾಮೀಜಿ ಹೇಳಿದರು. ಬೈಕ್ ರ‍್ಯಾಲಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ಬಸವ ಜಯಂತಿ ಸಮಿತಿಯಿಂದ ಮಜ್ಜಿಗೆ ವ್ಯವಸ್ಥೆ ಮಾಡಲಾಯಿತು. ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

the cultural leader of the world is in the shadow of basavannas festival

ಚಿತ್ರ: ಹುಲಸೂರ ಪಟ್ಟಣದ ಅಲ್ಲಮ ಪ್ರಭು ಶೂನ್ಯ ಪೀಠ ಅನುಭವ ಮಂಟಪದಲ್ಲಿತಾಲ್ಲೂಕು ಆಡಳಿತದಿಂದ ಆಯೋಜಿಸಿದ ಬಸವ ಜಯಂತಿ ನಿಮಿತ್ತ ಬೈಕ್ ರಾರ ಯಲಿಗೆ ಪೂಜ್ಯರು ಚಾಲನೆ ನೀಡಿದರು.

ಚಿತ್ರ: ಹುಲಸೂರ ಹೊರವಲಯದ ಬೀದರ್ - ಲಾತೂರು ಮುಖ್ಯರಸ್ತೆಯ ಪಕ್ಕದ ಬಸವೇಶ್ವರ ಮೂರ್ತಿಗೆ ಭಕ್ತರು ಪೂಜೆ ಸಲ್ಲಿಸಿದರು.

ವಿಶ್ವಕ್ಕೆ ಇಂದು ಬಸವಣ್ಣನೇ ಸಾಂಸ್ಕೃತಿಕ ನಾಯಕ

ವಿಕ ಸುದ್ದಿಲೋಕ ಹುಲಸೂರ

ತಾಲೂಕು ಆಡಳಿತ ವತಿಯಿಂದ ಪ್ರಥಮ ಬಾರಿಗೆ 893ನೇ ಬಸವ ಜಯಂತಿ ಆಚರಿಸಲಾಯಿತು. ಪಟ್ಟಣದ ಜಗದ್ಗುರು ಅಲ್ಲಮ ಪ್ರಭು ಶೂನ್ಯ ಪೀಠ ಅನುಭವ ಮಂಟಪದ ಆವರಣದಲ್ಲಿಸೋಮವಾರ ನಡೆದ ಕಾರ್ಯಕ್ರಮದಲ್ಲಿಗುರು ಬಸವೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಶಿವಾನಂದ ಸ್ವಾಮೀಜಿ ಬೈಕ್ ರಾರ ಯಲಿಗೆ ಚಾಲನೆ ನೀಡಿ ಮಾತನಾಡಿದರು. ವಿಶ್ವಗುರು ಬಸವಣ್ಣ ಅವರು ಕರ್ನಾಟಕದ ಸಂಸ್ಕೃತಿಕ ನಾಯಕ ಮಾತ್ರವಲ್ಲದೆ, ವಿಶ್ವದ ಸಾಂಸ್ಕೃತಿಕ ನಾಯಕರಾಗಿ ಘೋಷಣೆಗೊಳ್ಳಬೇಕಾಗಿದೆ. ಇಂದಿನ ಸಮಾಜದಲ್ಲಿವಿವಿಧ ಧರ್ಮಗಳ ಗುರುಗಳು ತಮ್ಮ ಧರ್ಮವೇ ಶ್ರೇಷ್ಠವೆಂದು ಹೇಳಿಕೊಳ್ಳುವ ಸಂದರ್ಭದಲ್ಲಿ, ಬಸವಣ್ಣ ಅವರು ತಾವು ಎಲ್ಲರಿಗಿಂತ ಕಿರಿಯರು ಎಂದು ಹೇಳಿ ದಯವೇ ಧರ್ಮದ ಮೂಲ ಎಂದು ಸಂದೇಶ ಸಾರಿದ ಅಪರೂಪದ ಮಹನೀಯರು ಎಂದು ಹೇಳಿದರು.

ಅಲ್ಲಮ ಪ್ರಭು ಶೂನ್ಯ ಪೀಠದಿಂದ ಆರಂಭವಾದ ಬೈಕ್ ರಾರ ಯಲಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿಸಂಚರಿಸಿ ಗಾಂಧಿ ವೃತ್ತ, ಸಂತ ರಘುನಾಥ ಮಹಾರಾಜ ಸಂಸ್ಥಾನ ಮಠದ ಮುಂಭಾಗವಾಗಿ ಸಾಗಿದು, ಬೀದರ್ - ಲಾತೂರು ರಾಷ್ಟ್ರೀಯ ಹೆದ್ದಾರಿ ಪಕ್ಕದ ಬಸವೇಶ್ವರ ವೃತ್ತದವರೆಗೆ ತಲುಪಿತು.

ಈ ವೇಳೆ ಬಸವ ಜಯಂತಿ ಸಮಿತಿಯಿಂದ ಮಜ್ಜಿಗೆ ವ್ಯವಸ್ಥೆ ಮಾಡಲಾಯಿತು. ಈ ವೇಳೆ ತಹಸೀಲ್ದಾರ ಶಿವಾನಂದ ಮೇತ್ರೆ, ಜಿಪಂ ಮಾಜಿ ಉಪಾಧ್ಯಕ್ಷೆ ಲತಾ ಹಾರಕೂಡೆ, ಜಿಪಂ ಮಾಜಿ ಸದಸ್ಯ ಸುಧೀರ ಕಾಡಾದಿ, ಬಸವ ಕೇಂದ್ರ ಅಧ್ಯಕ್ಷ ಆಕಾಶ ಖಂಡಾಳೆ ಮಾತನಾಡಿದರು. ಬೈಕ್ ರಾರ ಯಲಿಯಲ್ಲಿಇಒ ಮಹಾದೇವ ಜಮ್ಮು, ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ಸಿದ್ರಾಮ ಕಾಮಣ್ಣಾ, ಗ್ರಾಪಂ ಪಿಡಿಒ ವಿನಯಕುಮಾರ, ವಿದ್ಯಾಸಾಗರ ಬನಸೂಡೆ,ಜಾಗತಿಕ ಲಿಂಗಾಯತ ಮಹಾಸಭೆ ತಾಲೂಕು ಘಟಕದ ಅಧ್ಯಕ್ಷ ಪ್ರವೀಣ ಕಾಡಾದಿ ,ಬಸವ ಕೇಂದ್ರ ತಾಲೂಕು ಅಧ್ಯಕ್ಷ ಆಕಾಶ ಖಂಡಾಳೆ, ವಚನ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ರಾಜಕುಮಾರ ತೊಂಡಾರೆ ,ಪ್ರವೀಣ ಕಾಡಾದಿ, ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ನಾಗರಾಜ ಹಾವಣ್ಣ, ಭೀಮಾಶಂಕರ ಅದೆಪ್ಪ, ದತ್ತು ರಾಘೊ. ತಾಪಂ ಮಾಜಿ ಸದಸ್ಯ ಗೋವಿಂದರಾವ ಸೋಮವಂಶಿ, ನಾಗರಾಜ ಕೋರೆ, ರಣಜಿತ್ ಗಾಯಕವಾಡ, ಸಂಜು ಭೂಸಾರೆ, ಸಂತೋಷ ಗಾಯಕವಾಡ, ಗುಲಾಮ ಬಡಾಯಿ, ಕಾಶಿನಾಥ ಕಲಾಲ,ಸುನೀಲ ಕಾಡಾದಿ,ಚಂದ್ರಶೇಖರ ಮಂಗಾ, ಜಗದೀಶ ದೆಟ್ನೆ, ಸಚಿನ ಕೌಟೆ ಸೇರಿ ಅನೇಕರಿದ್ದರು.