ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಗಿ | ಮೂವರು ಸಾಧಕಿಯರಿಗೆ ಗೌಡಾ ಪದವಿ ಪ್ರದಾನ
ಮಹಿಳಾ ವಿವಿ 17ನೇ ಘಟಿಕೋತ್ಸವ ಇಂದು
ವಿಕ ಸುದ್ದಿಲೋಕ ವಿಜಯಪುರ
‘‘ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ 17ನೇ ಘಟಿಕೋತ್ಸವ ಏ. 21ರಂದು ಬೆಳಗ್ಗೆ 11.30ಕ್ಕೆ ವಿವಿಯ ಜ್ಞಾನಶಕ್ತಿ ಆವರಣದಲ್ಲಿನಡೆಯಲಿದೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪಾಲ್ಗೊಳ್ಳಲಿದ್ದಾರೆ,’’ ಎಂದು ಕುಲಪತಿ ಡಾ.ವಿಜಯಾ ಕೋರಿಶೆಟ್ಟಿ ಹೇಳಿದರು.
ನಗರದ ವಿಶ್ವವಿದ್ಯಾಲಯದ ಸಿಂಡಿಕೇಟ್ ಹಾಲ್ ನಲ್ಲಿಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿಅವರು ಮಾತನಾಡಿದರು.
‘‘ಘಟಿಕೋತ್ಸವದಲ್ಲಿ13,441 ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿನಿಯರು ಪದವಿ ಪಡೆಯಲು ಅರ್ಹರಾಗಿರುತ್ತಾರೆ. 86 ವಿದ್ಯಾರ್ಥಿನಿಯರಿಗೆ ಪಿಎಚ್ ಡಿ ಪದವಿ ಪ್ರದಾನ ಮಾಡಲಾಗುವುದು. ಜಾನಪದ ಕ್ಷೇತ್ರದಲ್ಲಿಸಾಧನೆ ಮಾಡಿದ ಧಾರವಾಡದ ಪಾರ್ವತೆವ್ವ ಸಿದ್ದಪ್ಪ ಹೊಂಗಲ…, ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದ ಸಾಧನೆಗೆ ಕಲಬುರಗಿಯ ಡಾ.ಸಂಗೀತಾ ಎನ್ .ಕಟ್ಟಿಮನಿ ಮತ್ತು ಉದ್ಯಮ ಮತ್ತು ಸಾಮಾಜಿಕ ಸೇವಾ ಕ್ಷೇತ್ರದಲ್ಲಿಸಾಧನೆ ಮಾಡಿದ ಬಾಗಲಕೋಟೆ ಜಿಲ್ಲೆಯ ಆಶಾದೇವಿ ಜಗದೀಶ ಗುಡಗುಂಟಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುತ್ತದೆ. ಮುಂಬಯಿನ ಎಸ್ ಎನ್ ಡಿಟಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಉಜ್ವಲಾ ಚಕ್ರದೇವ್ ಅವರು ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ ಘಟಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ,’’ ಎಂದರು.
---
70 ವಿದ್ಯಾರ್ಥಿನಿಯರಿಗೆ ಚಿನ್ನದ ಪದಕ
‘‘70 ವಿದ್ಯಾರ್ಥಿನಿಯರಿಗೆ 58 ಚಿನ್ನದ ಪದಕ, 12 ನಗದು ಪಾರಿತೋಷಕ ಪದಕಗಳನ್ನು ಪ್ರದಾನ ಮಾಡಲಾಗುವುದು. ಘಟಿಕೋತ್ಸವವನ್ನು ವಿವಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಅಕ್ಕ ಟಿವಿ ಯುಟ್ಯೂಬ್ ನ್ಯೂಸ್ ಮೂಲಕ ಲೈವ್ ಕವರೇಜ್ ಮಾಡಲಾಗುವುದು,’’ ಎಂದರು.
ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ.ಬಿ.ಎಲ….ಲಕ್ಕಣ್ಣವರ, ಆರ್ಥಿಕ ಅಧಿಕಾರಿ ರಾಮಣ್ಣ ಅಥಣಿ, ಘಟಿಕೋತ್ಸವ ಸಂಯೋಜನಾಧಿಕಾರಿ ಪ್ರೊ.ರಾಜಕುಮಾರ ಮಾಲಿ ಪಾಟೀಲ…, ಮಾಧ್ಯಮ ಸಮಿತಿ ಅಧ್ಯಕ್ಷ ಪೊ›.ಓಂಕಾರ ಕಾಕಡೆ ಹಾಗೂ ಸಂಯೋಜಕಿ ಡಾ.ತಹಮೀನಾ ಕೋಲಾರ, ಸಂದೀಪ್ ನಾಯಕ್ ಇದ್ದರು.
ಪೋಟೊ ವಿಸಿ ಕೊರಿಶೆಟ್ಟಿ,
ಗೌಡಾ ಪದವಿ ಪಡೆದ ಕಟ್ಟಿಮನಿ, ಗುಡಗುಂಟಿ, ಹೊಂಗಲ್
---
ಉದ್ಯಮಿ ಆಶಾದೇವಿ
ಗೌರವ ಡಾಕ್ಟರೇಟ್ ಗೆ ಭಾಜನರಾದ ಆಶಾದೇವಿ ಜಗದೀಶ ಗುಡಗುಂಟಿ ಅವರು 1961ರಲ್ಲಿಮುಧೋಳದಲ್ಲಿಜನಿಸಿದ್ದಾರೆ. ಉದ್ಯಮ ಕ್ಷೇತ್ರ ಹಾಗೂ ಮಹಿಳಾ ಸಬಲೀಕರಣದಲ್ಲಿಮುಂಚೂಣಿಯಲ್ಲಿದ್ದಾರೆ. ಸದ್ಯ ಅವರು ಗುಡಗುಂಟಿ ಶುಗರ್ಸ್ ಆ್ಯಂಡ್ ಬಯೋ ಎನರ್ಜಿ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಲ್ಲಿನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜತೆಗೆ ಪ್ರಭುಲಿಂಗೇಶ್ವರ ಶಿಕ್ಷಣ ಸಂಸ್ಥೆ, ಪ್ರಭುಲಿಂಗೇಶ್ವರ ಸೌಹಾರ್ದ ಪತ್ತಿನ ಸಹಕಾರ ಸಂಘ, ಇ®್ನÜರ್ ವೀಲ್ ಕ್ಲಬ್ ಜಮಖಂಡಿ ಹಾಗೂ ರಾಣಿ ಚನ್ನಮ್ಮ ಮಹಿಳಾ ಮಂಡಳದ ಅಧ್ಯಕ್ಷೆಯಾಗಿ ಹಾಗೂ ಹಲವು ಸಮಾಜ ಮುಖಿ ಕಾರ್ಯ ನಿರ್ವಹಿಸುತ್ತಿದ್ದಾರೆ.
---
ಜಾನಪದ ಕ್ಷೇತ್ರದ ಜ್ಞಾನ ಭಮಡಾರ
ಪಾರ್ವತೆವ್ವ ಸಿದ್ದಪ್ಪ ಹೊಂಗಲ್ ಅವರ ಜಾನಪದ ಸಾಹಿತ್ಯ, ಸಂಗೀತ ಮತ್ತು ಸಂಸ್ಕೃತಿ ಕ್ಷೇತ್ರದ ಸೇವೆ ಪರಿಗಣಿಸಿ ವಿವಿ ಅವರಿಗೆ ಗೌಡಾ ಪದವಿ ನೀಡಿ ಗೌರವಿಸಲಿದೆ. ಪಾರ್ವತೆವ್ವ ಅವರು 1980ರ ದಶಕದಲ್ಲಿಯೇ ಬೆಂಗಳೂರು ಆಕಾಶವಾಣಿ ಕೇಂದ್ರಕ್ಕೆ ಹೋಗಿ ತಮ್ಮ ಜಾನಪದ ಹಾಡುಗಳನ್ನು ಹಾಡಿ ಬಂದಿದ್ದರು. 550ಕ್ಕೂ ಹೆಚ್ಚು ಹಾಡುಗಳನ್ನು ಕಂಠಪಾಠ ಮಾಡಿಕೊಂಡಿದ್ದಾರೆ. ಕೃಷಿ ಹಾಗೂ ಬಡ ಕುಟುಂಬದಲ್ಲಿಬೆಳೆದ ಅವರು ಜಾನಪದ ಕ್ಷೇತ್ರದ ಜ್ಞಾನ ಭಂಡಾರವಾಗಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಲಭಿಸಿವೆ.
---
ಶಿಕ್ಷಣ ತಜ್ಞೆ ಕಟ್ಟಿಮನಿ
ಸಂಗೀತಾ ಎನ್ . ಕಟ್ಟಿಮನಿ ಅವರು ಮಹಿಳಾ ಸಬಲೀಕರಣ, ಗ್ರಾಮೀಣ ಉದ್ಯಮಶೀಲತೆ ಮತ್ತು ಅಪೌಷ್ಟಿಕತೆ ಕುರಿತು ಜಾಗೃತಿ ಹಾಗೂ ಹಿಂದುಳಿದ ವರ್ಗಗಳಿಗೆ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶಿಕ್ಷಣ ತಜ್ಞೆ ಹಾಗೂ ಸಾರ್ವಜನಿಕ ನೀತಿ ನಿರೂಪಕರೂ ಆಗಿದ್ದಾರೆ. ಸಂಗೀತಾ ಅವರು 1962ರಲ್ಲಿಬೀದರ್ ಜಿಲ್ಲೆಯಲ್ಲಿಜನಿಸಿದರು. ಅರ್ಥಶಾಸ್ತ್ರ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಹಾಗೂ ಮಾನವ ಸಂಪನ್ಮೂಲ ನಿರ್ವಹಣೆಯಲ್ಲಿಯೂ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಶಿಕ್ಷಣ ಮತ್ತು ಸಾಮಾಜಿಕ ಸೇವೆಯಲ್ಲಿತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

