ಕಲ್ಯಾಣ ಕ್ರಾಂತಿ ಮೂಲಕ ಜಗತ್ತಿಗೆ ಮಾನವಧರ್ಮ ಪರಿಚಯಿಸಿದವರು ಬಸವಣ್ಣ
ವಿಕ ಸುದ್ದಿಲೋಕ ಚಿಂತಾಮಣಿ
12ನೇ ಶತಮಾನದಲ್ಲಿಬಸವಕಲ್ಯಾಣದಲ್ಲಿನಡೆದ ಕ್ರಾಂತಿಯು ಈ ಜಗತ್ತಿಗೆ ಮಾನವ ಧರ್ಮವೊಂದನ್ನು ಪರಿಚಯಿಸಿಕೊಟ್ಟಿದ್ದಲ್ಲದೆ, ಇಂದಿಗೂ ಅವರ ಚಿಂತನೆಗಳು ನಮ್ಮನ್ನು ಮನುಷ್ಯರನ್ನಾಗಿ ಉಳಿಸುವ ಮಹತ್ತರ ಕಾರ್ಯವನ್ನು ಮಾಡುತ್ತಿವೆ ಎಂದು ಹಾರಿಕಾ ಮಂಜುನಾಥ್ ಅಭಿಪ್ರಾಯಪಟ್ಟರು.
ನಗರದಲ್ಲಿಬಸವ ಬಳಗ ಮತ್ತು ತಾಲೂಕು ಅಖಿಲ ಭಾರತ ವೀರಶೈವ ಮಹಾಸಭಾ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವಗುರು ಬಸವ ಜಯಂತಿ ಕಾರ್ಯಕ್ರಮದಲ್ಲಿಮಾತನಾಡಿದ ಅವರು, ನಮ್ಮ ದೇಶವನ್ನು ಅರಬ್ಬರು, ಡಚ್ಚರು ಹಾಗೂ ಮೊಗಲರಂತಹ ಆಕ್ರಮಣಕಾರರು ದೇಶದ ಮೇಲೆ ಸತತ ದಾಳಿ ಮಾಡಿದರೂ, ಇಂದು 100 ಕೋಟಿಗೂ ಹೆಚ್ಚು ನಮ್ಮ ನೆಲಮೂಲದ ಆಚರಣೆಗಳು ಇಂದಿಗೂ ಜೀವಂತವಾಗಿ ಉಳಿದು ನಮ್ಮನ್ನು ಸಲುಹುತ್ತಿವೆ ಎಂದರೆ ಅದಕ್ಕೆ ಕಾರಣ ವಚನಕಾರರು. ಅವರ ವಚನಗಳಲ್ಲಿರುವ ಜನಪರ, ಜೀವಪರವಾದ ಆಲೋಚನೆಗಳು. ಅಂದು ಕಲ್ಯಾಣಕ್ಕೆ ಬೆಂಕಿ ಬಿದ್ದಾಗ ಶರಣರು ಮುತ್ತು-ರತ್ನಗಳ ಆಸೆಗೆ ಬೀಳದೆ ಅದಕ್ಕಿಂತಲೂ ಬೆಲೆ ಬಾಳುವ, ಬೆಲೆಕಟ್ಟಲಾಗದ ಸಂಪತ್ತಾಗಿರುವ ಮನುಕುಲದ ಆಸ್ತಿಯಾದ ವಚನ ಸಾಹಿತ್ಯವನ್ನು ರಕ್ಷಿಸಿದರು. ಮಡಿವಾಳ ಮಾಚಿದೇವ, ನೀಲಾಂಬಿಕೆ, ಗಂಗಾಂಬಿಕೆ, ಅಂಬಿಗರ ಚೌಡಯ್ಯ ಸೇರಿದಂತೆ ನೂರಾರು ಶರಣರು ತಾಳೆಗರಿಗಳ ಗಂಟುಮೂಟೆ ಕಟ್ಟಿಕೊಂಡು ದಿಕ್ಕು ದಿಕ್ಕುಗಳಿಗೆ ಹೋಗಿ ವಚನಗಳನ್ನು ಉಳಿಸಿಕೊಟ್ಟಿದ್ದಾರೆ ಎಂದು ಅವರು ಸ್ಮರಿಸಿದರು.
ಶರಣ ಚನ್ನಬಸವಣ್ಣನವರು ಸಹ್ಯಾದ್ರಿ ಅರಣ್ಯದಲ್ಲಿತಪಸ್ಸು ಮಾಡಿ, ಮುಂದಿನ ಪೀಳಿಗೆಗಾಗಿ ಈ ವಚನ ಪರಂಪರೆಯನ್ನು ಮಠಾಧೀಶರ ಕೈಗೆ ಒಪ್ಪಿಸಿದರು. ಕರ್ನಾಟಕದ ನೆಲದಲ್ಲಿಹುಟ್ಟಿದ ಈ ವಚನ ಸಂಸ್ಕೃತಿಯಿಂದ ಮಾತ್ರ ಮನುಕುಲದ ಸಾಕ್ಷಾತ್ಕಾರ ಸಾಧ್ಯ ಎಂಬ ಸತ್ಯ ಅಂದಿನವರಿಗೆ ತಿಳಿದಿತ್ತು. ಆಧುನಿಕ ಕಾಲದಲ್ಲಿಸಿದ್ಧಗಂಗಾ ಶ್ರೀಗಳಂತಹ ಮಹಾಪುರುಷರು ಮನೆಮನೆಗೆ ತೆರಳಿ ಸಂಸ್ಕಾರದ ಭಿಕ್ಷೆ ಬೇಡುವ ಮೂಲಕ ಈ ಪರಂಪರೆಯನ್ನು ಮುಂದುವರಿಸಿದರು ಎಂದು ಶ್ಲಾಘಿಘಿಸಿದರು.
ಸಭಾ ಕಾರ್ಯಕ್ರಮಕ್ಕೂ ಮುನ್ನ ಬಸವಣ್ಣನವರ ಸ್ತಬ್ದಚಿತ್ರದ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿಅತ್ಯಂತ ಅದ್ಧೂರಿಯಾಗಿ ನಡೆಯಿತು. ಭಕ್ತರಹಳ್ಳಿಯ ಭವ್ಯ ವೀರಗಾಸೆ ತಂಡದ ಕಲಾ ಪ್ರದರ್ಶನ ಮೆರವಣಿಗೆಗೆ ವಿಶೇಷ ಕಳೆ ನೀಡಿತ್ತಲ್ಲದೆ, ನೂರಾರು ಭಕ್ತರು ಮೆರವಣಿಗೆಯಲ್ಲಿಉತ್ಸಾಹದಿಂದ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿಮಂಜುನಾಥ್ , ಸುರೇಶ್ , ನಿವೃತ್ತ ಶಿಕ್ಷಕ ನಟರಾಜ್ , ಸಿದ್ಧಲಿಂಗಸ್ವಾಮಿ, ರಾಜಶೇಖರ ಯಾಗಂಟಿ, ಶಿಕ್ಷಕ ಆರ್ .ಮಂಜುನಾಥ್ , ಮಣಿಕಂಠ, ಮಂಜುನಾಥ್ , ಪ್ರದೀಪ್ , ಆರಾಧ್ಯ, ಎಸ್ ಎಫ್ ಎಸ್ ಸುರೇಶ್ , ಜ್ಯೋತಿಮಂಜುನಾಥ್ , ಲಲಿತ ಶಿವಶಂಕರ್ , ಶ್ರಾವ್ಯ, ಅಂಬಿಕ, ಬಸವ ಬಳಗದ ಪದಾಧಿಕಾರಿಗಳು ಹಾಗೂ ವೀರಶೈವ ಮಹಾಸಭಾ ಸಮುದಾಯದ ಪ್ರಮುಖರು, ಮುಖಂಡರು ಉಪಸ್ಥಿತರಿದ್ದರು.
21ಸಿಎ???ವೈವಿ1
ಚಿಂತಾಮಣಿ ನಗರದಲ್ಲಿಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿಹಾರಿಕಾ ಮಂಜುನಾಥ್ ಮಾತನಾಡಿದರು.

