ಮಹಿಳಾ ನೌಕರರ ದಿನಾಚರಣೆ

Contributed byrmgvklvy@gmail.com|Vijaya Karnataka

ಹೊಳಲ್ಕೆರೆ ಪಟ್ಟಣದ ನೌಕರ ಭವನದಲ್ಲಿ ಮಹಿಳಾ ನೌಕರರ ದಿನಾಚರಣೆ ಹಾಗೂ ಸರಕಾರಿ ನೌಕರರ ದಿನಾಚರಣೆ ಕಾರ್ಯಕ್ರಮ ನಡೆಯಿತು. ನೌಕರಸ್ಥ ಮಹಿಳೆಯರು ತಮ್ಮ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ ಎಂದು ಹಿರಿಯ ಆರೋಗ್ಯ ಸಹಾಯಕಿ ಅನುಸೂಯ ಹೇಳಿದರು. ಕುಟುಂಬದ ಸಹಕಾರದಿಂದ ಮಹಿಳೆಯರು ಹೊರಬಂದು ಕೆಲಸ ಮಾಡಬೇಕು. ಆಗ ಸಮ ಸಮಾಜ ನಿರ್ಮಾಣವಾಗುತ್ತದೆ. ನೌಕರರ ಸಂಘದ ಪದಾಧಿಕಾರಿಗಳು ಹಾಗೂ ಮಹಿಳಾ ನೌಕರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

womens workers day celebration and womens responsibility

ಮಹಿಳಾ ನೌಕರರ ದಿನಾಚರಣೆ

---

ಹೊಳಲ್ಕೆರೆ: ನೌಕರಸ್ಥ ಮಹಿಳೆ ಜವಾಬ್ದಾರಿಯುತವಾಗಿ ನೌಕರಿ ನಿಭಾಯಿಸುವ ಜತೆ ಸಂಸಾರದ ಬಂಡಿಯನ್ನು ಕೂಡ ಎಳೆಯುವಂತ ಜವಾಧಿಬ್ದಾರಿ ಕೆಲಸವನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾಳೆ ಎಂದು ಹಿರಿಯ ಆರೋಗ್ಯ ಸಹಾಯಕಿ ಅನುಸೂಯ ಹೇಳಿದರು.

ಪಟ್ಟಣದ ನೌಕರ ಭವನದಲ್ಲಿಮಂಗಳವಾರ ಹಮ್ಮಿಕೊಂಡಿದ್ದ ಮಹಿಳಾ ನೌಕರರ ದಿನಾಚರಣೆ ಹಾಗೂ ಸರಕಾರಿ ನೌಕರರ ದಿನಾಚರಣೆ ಕಾರ್ಯಕ್ರಮದಲ್ಲಿಮಾತನಾಡಿದರು.

ಪ್ರತಿಯೊಬ್ಬ ಮಹಿಳೆ ಕೂಡ ತಮ್ಮ ಮನೆಯಿಂದ ಹೊರಬಂದು ಜವಾಬ್ದಾರಿ ಕೆಲಸವನ್ನು ಮಾಡಬೇಕಾದರೆ ಆ ಕುಟುಂಬದ ಸರ್ವ ಸದಸ್ಯರ ಸಹಕಾರ ಅಗತ್ಯ. ಅಂತಹ ಕೆಲಸವನ್ನು ಪ್ರತಿ ಕುಟುಂಬಗಳು ಮಾಡಬೇಕು. ಆಗ ಸಮ ಸಮಾಜ ನಿರ್ಮಾಣವಾಗುತ್ತದೆ ಎಂದರು.

ನೌಕರರ ಸಂಘದ ನಿರ್ದೇಶಕಿ ಖಾದರ್ ಬೀ, ನೌಕರರ ಸಂಘದ ಉಪಾಧ್ಯಕ್ಷ ಚಂದ್ರಶೇಖರ್ , ಕಸಾಪ ತಾಲೂಕು ಅಧ್ಯಕ್ಷ ಎನ್ . ಶಿವಮೂರ್ತಿ ಮಾತನಾಡಿದರು.

ನೌಕರರ ಸಂಘದ ತಾಲೂಕು ಅಧ್ಯಕ್ಷ ತಿಪ್ಪೇಶಪ್ಪ, ನಿರ್ದೇಶಕಿ ಆಶಾ, ಕಾರ್ಯದರ್ಶಿ ನಿಜಲಿಂಗಪ್ಪ, ಖಜಾಂಚಿ ಗಿರೀಶ್ , ರಾಜ್ಯ ಪರಿಷತ್ ಸದಸ್ಯ ಸಿದ್ರಾಮಪ್ಪ, ಚಂದ್ರಶೇಖರ್ ನಾಯ್ಕ…, ಶ್ರೀಧರ್ , ನೌಕರರ ಸಂಘದ ಎಲ್ಲಪದಾಧಿಕಾರಿಗಳು, ಮಹಿಳಾ ನೌಕರರು ಇದ್ದರು.

ಏ.21.ಹೆಚ….ಎಲ….ಕೆ.1

ಹೊಳಲ್ಕೆರೆ ಪಟ್ಟಣದ ನೌಕರ ಭವನದಲ್ಲಿಮಂಗಳವಾರ ಮಹಿಳಾ ನೌಕರರ ದಿನಾಚರಣೆ ಹಾಗೂ ಸರಕಾರಿ ನೌಕರರ ದಿನಾಚರಣೆ ಕಾರ್ಯಕ್ರಮ ನಡೆಯಿತು.