ಬಸವೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ

Contributed bynagesh_crp9@yahoo.com|Vijaya Karnataka

ಚನ್ನರಾಯಪಟ್ಟಣ ತಾಲೂಕಿನ ಗಂಜಿಗೆರೆಯಲ್ಲಿ ಬಸವೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ಅದ್ದೂರಿಯಾಗಿ ನಡೆಯಿತು. ಬೆಳಿಗ್ಗೆಯಿಂದಲೇ ವಿಶೇಷ ಪೂಜೆ, ಅಲಂಕಾರ, ಅಭಿಷೇಕ ನಡೆಯಿತು. ಉತ್ಸವ ಮೂರ್ತಿಯ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿತು. ನಂತರ ದೇವರನ್ನು ರಥದಲ್ಲಿರಿಸಿ ಭಕ್ತರು ಹರ್ಷೋದ್ಘಾರಗಳೊಂದಿಗೆ ರಥ ಎಳೆದರು. ಶಾಸಕ ಸಿ.ಎನ್‌.ಬಾಲಕೃಷ್ಣ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.

basaveshwara swami brahmaratha utsav a glimpse of rural culture

ವಿಕ ಸುದ್ದಿಲೋಕ ಚನ್ನರಾಯಪಟ್ಟಣ

ತಾಲೂಕಿನ ನುಗ್ಗೇಹಳ್ಳಿ ಹೋಬಳಿ ಗಂಜಿಗೆರೆ ಗ್ರಾಮದ ಬಸವೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ಜರುಗಿತು.

ರಥೋತ್ಸವ ನಿಮಿತ್ತ ದೇವಾಲಯದಲ್ಲಿಇಡೀ ದಿನ ವಿವಿಧ ಧಾರ್ಮಿಕ ಆಚರಣೆಗಳು ಸಡಗರ ಸಂಭ್ರಮದಿಂದ ನಡೆಯಿತು. ಬೆಳಗಿನಿಂದಲೇ ದೇವರಿಗೆ ಅಭಿಷೇಕ, ಪೂಜೆ ಹಾಗೂ ವಿಶೇಷ ಅಲಂಕಾರ ಮಾಡಲಾಗಿತ್ತು. ಉತ್ಸವ ಮೂರ್ತಿಯ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿವೀರಭದ್ರನ ಕುಣಿತದೊಂದಿಗೆ ಸಾಗಿದ ನಂತರ ದೇವರನ್ನು ರಥದಲ್ಲಿರಿಸಿ ಹರ್ಷೋದ್ಘಾರಗಳ ನಡುವೆ ರಥವನ್ನು ಎಳೆಯಲಾಯಿತು.

ಪ್ರತಿವರ್ಷವೂ ಬಸವ ಜಯಂತಿಯಂದು ರಥೋತ್ಸವ ನಡೆಯುವುದು ಸಂಪ್ರದಾಯವಾಗಿದ್ದು, ಭಕ್ತಾದಿಗಳು ರಥ ಎಳೆಯುವ ವೇಳೆ ರಥಕ್ಕೆ ಬಾಳೆಹಣ್ಣು, ದವನ ಎಸೆದು ಭಕ್ತಿ ಸಮಪ್ರಿಸಿದರು.

ಶಾಸಕ ಸಿ.ಎನ್ .ಬಾಲಕೃಷ್ಣ ರಥೋತ್ಸವದಲ್ಲಿಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿದರು. ಗ್ರಾಮದ ಮುಖಂಡರಾದ ಗುರುಚನ್ನಬಸಪ್ಪ, ಕೆಂಪೇಗೌಡ, ಅಶೋಕ್ , ಚಂದ್ರೇಗೌಡ, ಗಿರೀಶ್ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.

ಚಿತ್ರ: ಎಚ್ ಎಸ್ ಎನ್ 21ಸಿಆರ್ ಪಿ1- ಚನ್ನರಾಯಪಟ್ಟಣ ತಾಲೂಕು ನುಗ್ಗೇಹಳ್ಳಿ ಹೋಬಳಿ ಗಂಜಿಗೆರೆಯಲ್ಲಿಬಸವೇಶ್ವರಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ನಡೆಯಿತು.