ಹೊನ್ನಾಳಿ: ಅದ್ಧೂರಿ ಬಸವ ಜಯಂತಿ

Contributed bymhkhnl25@gmail.com|Vijaya Karnataka

ಹೊನ್ನಾಳಿ ಪಟ್ಟಣ ಹಾಗೂ ತಾಲೂಕಿನ ಹಳ್ಳಿಗಳಲ್ಲಿ ಬಸವ ಜಯಂತಿಯನ್ನು ಸಡಗರದಿಂದ ಆಚರಿಸಲಾಯಿತು. ದಿಡಗೂರು ಹರಳಹಳ್ಳಿ ಗ್ರಾಮದಲ್ಲಿ ಬಸವಣ್ಣನವರ ಭಾವಚಿತ್ರವನ್ನು ಟ್ರ್ಯಾಕ್ಟರ್‌ ಮೆರವಣಿಗೆ ಮಾಡಲಾಯಿತು. ರೈತರು ತಮ್ಮ ಎತ್ತುಗಳಿಗೆ ಅಲಂಕಾರ ಮಾಡಿ ಪೂಜೆ ಸಲ್ಲಿಸಿದರು. ಗ್ರಾಮಸ್ಥರು ಹಾಗೂ ದೇವಸ್ಥಾನ ಸಮಿತಿ ಸದಸ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

celebration a persons resurgence of basava jayanti

ಹೊನ್ನಾಳಿ : ಅದ್ಧೂರಿ ಬಸವ ಜಯಂತಿ

ಹೊನ್ನಾಳಿ: ಪಟ್ಟಣ ಸೇರಿದಂತೆ ತಾಲೂಕಿನ ನಾನಾ ಗ್ರಾಮಗಳಲ್ಲಿಸೋಮವಾರ ಜಗಜ್ಯೋತಿ ಬಸವೇಶ್ವರ ಜಯಂತಿ ಅದ್ಧೂರಿಯಾಗಿ ಆಚರಿಸಲಾಯಿತು.

ತಾಲೂಕಿನ ದಿಡಗೂರು ಹರಳಹಳ್ಳಿ ಗ್ರಾಮದಲ್ಲಿಬಸವೇಶ್ವರ ದೇವಸ್ಥಾನ ಸಮಿತಿ ಮತ್ತು ಗ್ರಾಮಸ್ಥರ ಸಹಯೋಗದಲ್ಲಿದೇವಸ್ಥಾನದ ಮುಂಭಾಗ ಬಸವಣ್ಣನವರ ಭಾವಚಿತ್ರವನ್ನು ಟ್ರ್ಯಾಕ್ಟರನಲ್ಲಿಇಟ್ಟು ಮೆರವಣಿಗೆ ಮಾಡಲಾಯಿತು. ಗ್ರಾಮದ ಅನ್ನದಾತರು ತಮ್ಮ ಎತ್ತುಗಳಿಗೆ ವಿಶೇಷ ಅಲಂಕಾರ ಮಾಡಿ, ಮನೆಯ ಒಳಗೆ ಎತ್ತುಗಳನ್ನು ಬರಮಾಡಿ ಕೊಂಡು ಪೂಜೆ ಸಲ್ಲಿಸಿದರು.

ಈ ವೇಳೆ ದೇವಸ್ಥಾನ ಸಮಿತಿಯ ಎಚ್ .ಎಸ್ . ಶಿವಮೂರ್ತಿ ಪಾಟೀಲ್ , ಮಲ್ಲೇಶಪ್ಪ, ಗ್ರಾಪಂ ಮಾಜಿ ಸದಸ್ಯ ವೀರೇಶ್ , ಎಚ್ .ಡಿ. ಪ್ರಕಾಶ್ , ಜಯಣ್ಣ, ಎಸ್ .ಸಿ. ಸಂತೋಷ, ತಿಮ್ಮಪ್ಪ ಬೆನಕಪ್ಪ, ಯೋಗೇಶ, ಹಿತ್ತಲಮನೆ ಕುಬೇರ್ , ಚನ್ನಪ್ಪ, ಗುಡ್ದಪ್ಪ ಪೂಜಾರ್ , ಅರ್ಚಕ ಹರೀಶ್ , ಯುವಕ ಮಂಡಳಿ ಸದಸ್ಯರು ದ್ದರು.

-----

21ಎಚ್ ಎನ್ ಎಲ್ 3

ಹೊನ್ನಾಳಿ ತಾಲೂಕಿನ ದಿಡಗೂರು ಹರಳಹಳ್ಳಿ ಗ್ರಾಮದ ಬಸವೇಶ್ವರ ದೇವಸ್ಥಾನದ ಮುಂಭಾಗ ಬಸವಣ್ಣನವರ ಭಾವಚಿತ್ರಕ್ಕೆ ಗ್ರಾಮದ ದೇವಸ್ಥಾನ ಸಮಿತಿ ಸದಸ್ಯರು, ಗ್ರಾಮಸ್ಥರು ಪುಷ್ಪಾರ್ಚನೆ ಮಾಡಿದರು.