ವಿಕ ಸುದ್ದಿಲೋಕ ಬಂಟ್ವಾಳ
ಬಂಟ್ವಾಳ ತಾಲೂಕಿನ ಕಾಡಬೆಟ್ಟು ಗ್ರಾಮದ ರಾಮಕ್ಕು ಅವರದ್ದು ಬಡ ಕುಟುಂಬ. ಇವರ ಮನೆ ಚಾವಣಿ ರಿಪೇರಿಗೆ ಹಣ ಹೊಂದಿಸಲಾಗದೆ ಕಷ್ಟ ಪಡುತ್ತಿದ್ದರು. ಇದನ್ನು ಗಮನಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಗ್ಗ ವಲಯದ ಶೌರ್ಯ ವಿಪತ್ತು ನಿರ್ವಹಣಾ ಘಟಕ ಸದಸ್ಯರು ಶ್ರಮದಾನದ ಮೂಲಕ ನೆರವಾದ ಘಟನೆ ನಡೆಯಿತು.
ಬಂಟ್ವಾಳ ತಾಲೂಕಿನ ಕಾಡಬೆಟ್ಟು ಗ್ರಾಮದ ರಾಮಕ್ಕು ಅವರ ಬೈರ್ಲಚ್ಚಿಲ್ ಮನೆಯ ಚಾವಣಿ ರಿಪೇರಿ ಊರವರ ಸಹಕಾರದೊಂದಿಗೆ ಯಶಸ್ವಿಯಾಯಿತು. ಪಂಚಾಯಿತಿ ಮಾಜಿ ಅಧ್ಯಕ್ಷ ಸುಜಿತ್ ಜೈನ್ , ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರಮೋದ್ ಕುಮಾರ್ ರೈ ಕಾಡಬೆಟ್ಟು, ಶೌರ್ಯ ತಂಡದ ಸದಸ್ಯರಾದ ಜನಾರ್ದನ್ ಸಲಕರಣೆ ನೀಡಿ ಸಹಕರಿಸಿದರು. ತಾಲೂಕು ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ರೊನಾಲ್ಡ್ ಡಿಸೋಜಾ ಊಟೋಪಹಾರ ನೀಡಿ ಸಹಕರಿಸಿದರು. ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಕೃಷಿ ಅಧಿಕಾರಿ ಭಾಸ್ಕರ್ ,ಮದ್ವ ಒಕ್ಕೂಟದ ಸೇವಪ್ರತಿನಿಧಿ ಸುಮಿತ್ರ ಉಪಸ್ಥಿತರಿದ್ದರು.
ಶ್ರಮದಾನ ಸೇವೆಯಲ್ಲಿಘಟಕ ಪ್ರತಿನಿಧಿ ಪ್ರವೀಣ್ , ಸಂಯೋಜಕಿ ರೇಖಾ ಪಿ. ಸದಸ್ಯರಾದ ಸಂಪತ್ ಶೆಟ್ಟಿ ರೋಹಿತ್ ಮಹಾಬಲ ರೈ ಅಶೋಕ ಹಾರೋದ್ದು ಮೋಹಾನಂದ, ಅಶೋಕ ಬೊಲ್ಮರ್ , ನಾರಾಯಣ ಪೂಜಾರಿ, ನಾರಾಯಣ ಶೆಟ್ಟಿ ಲಕ್ಷ್ಮಣ, ಜನಾರ್ದನ, ಶಶಿಕಲಾ, ಪವಿತ್ರ, ಧನುಪೂಜೆ ಶೌರ್ಯ ತಂಡ ಘಟಕದ ಸದಸ್ಯರಾದ ಗಣೇಶ್ ಆಚಾರ್ಯ, ದಿನೇಶ್ ಆಚಾರ್ಯ, ಪ್ರಶಾಂತ್ , ಪ್ರಮೋದ್ ಆಚಾರ್ಯ ಭಾಗವಹಿಸಿದ್ದರು.
ಚಿತ್ರ: 21ಬಿಎಚ್ ಶೌರ್ಯ
ಶೌರ್ಯ ವಿಪತ್ತು ಘಟಕದ ವತಿಯಿಂದ ಚಾವಣಿ ರಿಪೇರಿ
ಚಿತ್ರ: 21ಬಿಎಚ್ ಶ್ರಮದಾನ
ಶ್ರಮದಾನದಲ್ಲಿಭಾಗವಹಿಸಿದ ತಂಡದ ಸದಸ್ಯರು.

