ಚರಂಡಿ ಕಾಮಗಾರಿ ಅಪೂರ್ಣ, ಹೂಳೆತ್ತುವ ಕೆಲಸವೂ ಬಾಕಿ
ನಿಶಾ ಇರುವೈಲು
ಘ್ಕಿ್ಛಛಿಛಿdಚಿa್ಚkvkಞ್ಞಜಃಜಞaಜ್ಝಿ.್ಚಟಞ
ಮಳೆಗಾಲ ಸಮೀಪಿಸುತ್ತಿದ್ದರೂ ಕೈಕಂಬ ಪೇಟೆಯಲ್ಲಿಚರಂಡಿ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಕೆಲವೆಡೆ ಕಾಮಗಾರಿ ನಡೆಯುತ್ತಿದ್ದರೆ, ಅನೇಕ ಭಾಗಗಳಲ್ಲಿಯಾವುದೇ ಕೆಲಸ ಆರಂಭವಾಗಿಲ್ಲ. ಪರಿಣಾಮ ಮಳೆಗಾಲದಲ್ಲಿಕೈಕಂಬ ಪೇಟೆಯಲ್ಲಿಕೃತಕ ನೆರೆ ಸೃಷ್ಟಿಯಾಗುವ ಭೀತಿ ಎದುರಾಗಿದೆ.
ಇತ್ತೀಚೆಗೆ ಸುರಿದ ಮಳೆಯಿಂದ ಪೇಟೆಯ ಮೀನು ಮಾರುಕಟ್ಟೆ ಸಮೀಪ ನೀರು ನಿಂತು ದುರ್ವಾಸನೆ ಬೀರುತ್ತಿದೆ. ಇದರಿಂದ ಸಾರ್ವಜನಿಕರು ಮೂಗು ಮುಚ್ಚಿ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.ಇನ್ನು ಚರಂಡಿ ಹೂಳೆತ್ತುವ ಕಾರ್ಯವೂ ಬಾಕಿ ಇದ್ದು, ಮಳೆಗಾಲದಲ್ಲಿನೀರು ರಸ್ತೆಯಲ್ಲೇ ಹರಿಯುವ ಸಾಧ್ಯತೆ ಇದೆ.
ರಸ್ತೆ ಕಾಮಗಾರಿಯೂ ಪೂರ್ಣಗೊಂಡಿಲ್ಲ:
ಕೈಕಂಬ ಪೇಟೆಯನ್ನು ಸುತ್ತಮುತ್ತಲಿನ ಸುಮಾರು 28 ಹಳ್ಳಿಗಳು ಅವಲಂಬಿಸಿವೆ. ಆದರೆ ನೀರು ಸರಿಯಾಗಿ ಹರಿಯಲು ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ. ಇಲ್ಲಿಮೇಲ್ಸೇತುವೆ ಕಾಮಗಾರಿ ನಡೆಯುತ್ತಿದ್ದು, ಇನ್ನೂ ಪೂರ್ಣಗೊಂಡಿಲ್ಲ. ಈ ಕಾಮಗಾರಿ ಪೂರ್ಣಗೊಳ್ಳಲು ಇನ್ನೂ ಒಂದು ವರ್ಷ ಬೇಕಾಗಬಹುದು. ಆದರೆ ಅದಕ್ಕೂ ಮುನ್ನವೇ ಚರಂಡಿ ವ್ಯವಸ್ಥೆ ಹಾಗೂ ಹೂಳೆತ್ತುವ ಕಾರ್ಯ ತುರ್ತಾಗಿ ಕೈಗೊಳ್ಳಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.
ಜನಪ್ರತಿನಿಧಿಗಳ ನಿರ್ಲಕ್ಷ್ಯ:
ಕೈಕಂಬ ವ್ಯಾಪ್ತಿಯಲ್ಲಿನಾಲ್ಕು ಪಂಚಾಯಿತಿಗಳಿದ್ದರೂ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಈ ಸಮಸ್ಯೆಗಳನ್ನು ಕಡೆಗಣಿಸುತ್ತಿದ್ದಾರೆ ಎಂಬ ಆರೋಪವಿದೆ. ಮಳೆಗಾಲದಲ್ಲಿಚರಂಡಿ ನೀರು ರಸ್ತೆಯಲ್ಲೇ ನಿಂತರೆ ಪಾದಚಾರಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸಬೇಕಾಗುತ್ತದೆ. ಮೂಡುಬಿದಿರೆ, ಮಂಗಳೂರು, ಬಜ್ಪೆ, ಕಟೀಲು ಸಂಪರ್ಕದ ಪ್ರಮುಖ ರಸ್ತೆಯಾಗಿರುವುದರಿಂದ ವಾಹನ ಸಂಚಾರವೂ ಅಧಿಕವಾಗಿದೆ. ಇದರಿಂದ ನೀರು ಚಿಮ್ಮಿ ಪ್ರಯಾಣಿಕರಿಗೆ ಇನ್ನಷ್ಟು ತೊಂದರೆ ಉಂಟಾಗಲಿದೆ.
ಮುಚ್ಚೂರು ಅಂಡರ್ ಪಾಸ್ ನಿಂದ ಕೈಕಂಬ ವರೆಗೆ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಮಣ್ಣು ಅಗೆತದಿಂದ ಧೂಳು ಹೆಚ್ಚಾಗಿದೆ. ಇದು ಸಾರ್ವಜನಿಕರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ಮುಚ್ಚೂರು ಅಂಡರ್ ಪಾಸ್ ಹೈವೇಯಲ್ಲಿಮಳೆಗಾಲದಲ್ಲಿತಡೆಗೋಡೆ ಕುಸಿದು ಮಣ್ಣು ರಸ್ತೆಗೆ ಬೀಳುವ ಆತಂಕವನ್ನೂ ವಾಹನ ಸವಾರರು ವ್ಯಕ್ತಪಡಿಸಿದ್ದಾರೆ.
ಕೋಟ್
ತಿಂಗಳೊಳಗೆ ಚರಂಡಿ ಕಾಮಗಾರಿ ಹಾಗೂ ಹೂಳೆತ್ತುವ ಕಾರ್ಯವನ್ನು ಪೂರ್ಣಗೊಳಿಸಿ ಮಳೆ ನೀರು ಸರಾಗವಾಗಿ ಹರಿಯುವಂತೆ ಕ್ರಮ ಕೈಗೊಳ್ಳುತ್ತೇವೆ. ಕಾರ್ಮಿಕರ ಕೊರತೆ ಇದ್ದರೂ ಹೊರರಾಜ್ಯಗಳಿಂದ ಕಾರ್ಮಿಕರನ್ನು ಕರೆಸಿ ಕೆಲಸ ವೇಗಗೊಳಿಸಲಾಗುತ್ತಿದೆ. ಭೂ ಸಮಸ್ಯೆಗಳು ವಿಳಂಬಕ್ಕೆ ಕಾರಣವಾಗಿದ್ದು, ಇದೀಗ ಬಗೆಹರಿದಿದೆ.
- ನಾಗಬಾಬು, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಎಂಜಿನಿಯರ್

