ಸತೀಶ್ ಕುಮಾರ್ ಪುಂಡಿಕಾಯಿ ಕೊಣಾಜೆ
್ಛಛಿಛಿdಚಿa್ಚkvkಞ್ಞಜಃಜಞaಜ್ಝಿ.್ಚಟಞ
ಇಪ್ಪತ್ತೈದು ಮಹಿಷಾಸುರ, ಇಪ್ಪತೈದು ರಕ್ತಬೀಜರು, ಕಮಲದಲ್ಲಿಉದ್ಭವಗೊಳ್ಳುವ ಬ್ರಹ್ಮ, ಲಿಫ್ಟ್ ನಿಂದ ಇಳಿಯುವ ದೇವಿ...ಹೀಗೆ ಹತ್ತು ಹಲವು ಹೊಸತನಗಳ ಮೂಲಕ ಕೈರಂಗಳ ಪುಣ್ಯಕೋಟಿ ನಗರದ ಶಾರದಾ ಗಣಪತಿ ವಿದ್ಯಾಕೇಂದ್ರದ ವಿದ್ಯಾರ್ಥಿಗಳಿಂದ ಭಾನುವಾರ ರಾತ್ರಿ ಪ್ರದರ್ಶನಗೊಂಡ ‘ಶ್ರೀದೇವಿ ಮಹಾತ್ಮೆ’ ಜೋಡಾಟ ಯಕ್ಷಗಾನದಲ್ಲಿಹೊಸ ದಾಖಲೆ ನಿರ್ಮಿಸಿತು.
ಯಕ್ಷಗುರು ಕಟೀಲು ಮೇಳದ ಕಲಾವಿದರಾದ ಅಶ್ವಥ್ ಮಂಜನಾಡಿ ನಿರ್ದೇಶನದಲ್ಲಿಕಲಾಪೋಷಕ, ಶಾಲೆಯ ಸಂಚಾಲಕ ಟಿ.ಜಿ.ರಾಜಾರಾಮ್ ಭಟ್ ಅವರ ಜನ್ಮದಿನದ ಪ್ರಯುಕ್ತ ಅವರ ಆಶಯದಂತೆ ಈ ಜೋಡಾಟ ನಡೆದಿದ್ದು, ಸೇರಿದ್ದ ಸಾವಿರಾರು ಕಲಾಪ್ರೇಕ್ಷಕರನ್ನು ರಂಜಿಸಿತು.
ಶಾಲಾ ಮಕ್ಕಳನ್ನು ಬಳಸಿಕೊಂಡು ಮೊದಲ ಬಾರಿಗೆ ಜೋಡಾಟ ಪ್ರದರ್ಶನಗೊಂಡಿರುವುದೂ ದಾಖಲೆಯಾಗಿದೆ. ಹಿಮ್ಮೇಳದಲ್ಲಿಪ್ರಸಿದ್ಧ ಹಿಮ್ಮೇಳ ವಾದಕರಿದ್ದು, ವೇಷಧಾರಿಗಳಾಗಿ ಶಾರದಾ ಗಣಪತಿ ವಿದ್ಯಾಕೇಂದ್ರದ ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆ.
ಕೇವಲ ಒಂದು ಶಾಲೆಯ 50 ಮಕ್ಕಳನ್ನು ಬಳಸಿಕೊಂಡು ಪ್ರದರ್ಶನಗೊಂಡಿದ್ದೂ ಕೂಡ ದಾಖಲೆಯಾಗಿದೆ. ಗತ್ತಿನ ಪಾತ್ರಗಳು ಬರುವಾಗ ಸುಡುಮದ್ದು ಪ್ರದರ್ಶನವೂ ಸೇರಿದಂತೆ ಈ ಯಕ್ಷಗಾನ ವರ್ಣರಂಜಿತವಾಗಿ ಸುಂದರವಾಗಿ ಮೂಡಿಬಂತು.
8ರಿಂದ 18 ವರ್ಷದ ವಿದ್ಯಾರ್ಥಿಗಳು ಪಾತ್ರವರ್ಗದಲ್ಲಿದ್ದರು. ಪರೀಕ್ಷೆಯ ನಡುವೆಯೂ ಮಕ್ಕಳು, ಪೋಷಕರ ಸಹಕಾರದಿಂದ ಯಕ್ಷಗಾನ ಅಭ್ಯಾಸ ಮಾಡಿದ್ದರು. ಈ ಪ್ರದರ್ಶನವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದು, ಮಕ್ಕಳಿಗೂ ಖುಷಿ ಕೊಟ್ಟಿದೆ. ರಾತ್ರಿ 7 ಗಂಟೆಗೆ ಆರಂಭವಾದ ಯಕ್ಷಗಾನ 12 ಗಂಟೆಗೆ ಮಂಗಳ ಪದ ಹಾಡಲಾಯಿತು.
ಈ ಸಂದರ್ಭ ಕಲಾಪೋಷಕರು, ಕರ್ನಾಟಕ ಸರಕಾರದ ಮಾನವ ಹಕ್ಕುಗಳ ಆಯೋಗ ಅಧ್ಯಕ್ಷ ಟಿ.ಶ್ಯಾಮ್ ಭಟ್ ಉಪಸ್ಥಿತರಿದ್ದು, ಯಕ್ಷಗಾನ ವೀಕ್ಷಿಸಿ ಮಕ್ಕಳ ಉಮೇದುವಾರಿಕೆ ಕೊಂಡಾಡಿದರು. ಊರ ಪರವೂರ ಕಲಾರಸಿಕರು ಮತ್ತು ಮಕ್ಕಳ ಹೆತ್ತವರು ಜೋಡಾಟಕ್ಕೆ ಸಾಕ್ಷಿಯಾದರು.
ಕೋಟ್
ಮಕ್ಕಳಿಂದ ದಾಖಲೆ ರೂಪದಲ್ಲಿಪ್ರದರ್ಶನಗೊಂಡ, ಹಲವು ವರ್ಷಗಳ ಕಾಲ ನೆನಪಿನಲ್ಲಿಉಳಿಯುವಂತೆ ಮಾಡಿದ ‘ಶ್ರೀದೇವಿ ಮಹಾತ್ಮೆ’ ತುಂಬ ಖುಷಿ ಕೊಟ್ಟಿದೆ. ಯಾರಾದರೂ ಜೋಡಾಟ ಮಾಡುವುದಾದರೆ ಇದು ಅವರಿಗೆ ಮಾದರಿ ಮತ್ತು ಪ್ರೇರಣೆಯಾಗಲಿದೆ.
-ಶ್ರೀನಿವಾಸ ಭಟ್ ಸೇರಾಜೆ, ಹಿರಿಯ ಶಿಕ್ಷಕರು, ಶಾರದಾ ಗಣಪತಿ ವಿದ್ಯಾಕೇಂದ್ರ
ಫೊಟೋ 20ಉಳ್ಳಾಲ್ ಪುಣ್ಯಕೋಟಿ

