ಹಳೆ ವಿದ್ಯಾರ್ಥಿಗಳ ಸಮ್ಮಿಲನ

Contributed byjohn.dsouza@timesofindia.com|Vijaya Karnataka

ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 2010ರ ಎಚ್‌ಇಪಿಎಸ್‌ ವಿಭಾಗದ ಹಳೆಯ ವಿದ್ಯಾರ್ಥಿಗಳು 16 ವರ್ಷಗಳ ಬಳಿಕ ಒಟ್ಟುಗೂಡಿದರು. ಗುರುಗಳಿಗೆ ಗೌರವ ಸಲ್ಲಿಸಿದರು. ನಿವೃತ್ತ ಪ್ರಿನ್ಸಿಪಾಲ್‌ ಆರ್‌.ಬಿ. ನಾಯಕ್‌ ಕಾರ್ಯಕ್ರಮ ಉದ್ಘಾಟಿಸಿದರು. ಸಾಮಾಜಿಕ ಜಾಲತಾಣಗಳ ಮೂಲಕ ಇಂತಹ ಕಾರ್ಯಕ್ರಮ ಆಯೋಜಿಸಬಹುದು ಎಂದು ಬ್ಯಾಚ್‌ ಸಾಬೀತುಪಡಿಸಿದೆ. ಹಳೆಯ ವಿದ್ಯಾರ್ಥಿಗಳು, ಉಪನ್ಯಾಸಕರು, ಪ್ರಿನ್ಸಿಪಾಲ್‌ ಉಪಸ್ಥಿತರಿದ್ದರು.

friendship reunion stories of alumni and women empowerment

ಕುಂದಾಪುರ: ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ2010ರ ಎಚ್ ಇಪಿಎಸ್ ವಿಭಾಗದ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ ಜರುಗಿತು. ಹದಿನಾರು ವರ್ಷಗಳ ನಂತರ ಒಟ್ಟುಗೂಡಿದ ಹಳೆಯ ವಿದ್ಯಾರ್ಥಿಗಳು ತಮ್ಮ ಗುರುಗಳನ್ನು ಗೌರವಿಸುವ ಮೂಲಕ ವಿಶೇಷ ಕ್ಷಣಕ್ಕೆ ಸಾಕ್ಷಿಯಾದರು.

ನಿವೃತ್ತ ಪ್ರಿನ್ಸಿಪಾಲ್ ಆರ್ .ಬಿ. ನಾಯಕ್ ಮಾತನಾಡಿ, ಸಧಿರಧಿಕಾಧಿರಿ ಕಾಲೇಜುಗಳಲ್ಲಿವಿದ್ಯಾರ್ಥಿಗಳ ಸಂಖ್ಯೆ ಇತ್ತೀಚೆಗೆ ಕಡಿಮೆಯಾಗುತ್ತಿರುವುದು ವಿ ಷಾದನೀಯ. ನೂರಾರು ವರ್ಷಗಳ ಇತಿಹಾಸವಿರುವ ಈ ಸಂಸ್ಥೆಯಲ್ಲಿಇಂತಹ ಸ್ನೇಹ ಸಮ್ಮಿಲನವನ್ನು ಆಯೋಜಿಸುವ ಮೂಲಕ ವಿದ್ಯಾರ್ಥಿಗಳು ಮತ್ತೊಂದು ಇತಿಹಾಸ ನಿರ್ಮಿಸಿದ್ದಾರೆ ಎಂದರು.

ರಾಮಕೃಧಿಷ್ಣ ಬಿ.ಜಿ. ಅಧ್ಯಕ್ಷತೆ ವಹಿಸಿದ್ದ ಮಾತನಾಡಿ ಸಾಮಾಜಿಕ ಜಾಲತಾಣಗಳ ಸಹಾಯದಿಂದ ಇಂತಹ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಬಹುದು ಎಂಬುದನ್ನು 2010ರ ಬ್ಯಾಚ್ ಸಾಬೀತುಪಡಿಸಿದೆ ಎಂದರು.

ಇತಿಹಾಸ ಉಪನ್ಯಾಸಕಿ ಪೂರ್ಣಿಮಾ, ಸಮಾಜಶಾಸ್ತ್ರ ಉಪನ್ಯಾಸಕ ಪ್ರಕಾಶ್ ಶೆಟ್ಟಿ, ಆಂಗ್ಲಭಾಷಾ ಉಪನ್ಯಾಸಕ ರಾಜೀವ್ ನಾಯಕ್ , ಅರ್ಥಶಾಸ್ತ್ರ ಉಪನ್ಯಾಸಕ ಭುಜಂಗ ಶೆಟ್ಟಿ ಉಪಸ್ಥಿತರಿದ್ದರು. ಹಳೆ ವಿದ್ಯಾರ್ಥಿಗಳಾದ ಆಶ್ರಿತಾ, ಕಾರ್ತಿಕ್ ಮತ್ತು ಪ್ರವೀಣ್ ಕಾರ್ಯಕ್ರಮ ಸಂಯೋಜಿಸಿದ್ದರು. ಪ್ರವೀಣಾ ಕಾರ್ಯಕ್ರಮ ನಿರ್ವಹಿಸಿದರು. ಶುಭಾ ಸ್ವಾಗತಿಸಿದರು. ಕಾರ್ತಿಕ್ ಸೌಕೂರು ವಂದಿಸಿದರು.

ಪೋಟೊ//20ಕೆ-ಜೆಎನ್ ಆರ್ //. ನಿವೃತ್ತ ಪ್ರಿನ್ಸಿಪಾಲ್ ಆರ್ .ಬಿ. ನಾಯಕ್ ಕಾರ್ಯಕ್ರಮ ಉದ್ಘಾಟಿಸಿದರು.