ಮಹಿಳಾ ಮೀಸಲಾತಿ ಮಸೂದೆಯ ಹಿಂದೆ ಬಿಜೆಪಿಯ ಹಿಡನ್ ಅಜೆಂಡಾ: ಕೆ.ಜಯಪ್ರಕಾಶ್ ಹೆಗ್ಡೆ

Contributed byjohn.dsouza@timesofindia.com|Vijaya Karnataka

ಮಹಿಳಾ ಮೀಸಲಾತಿ ಮಸೂದೆಯ ಹಿಂದೆ ಬಿಜೆಪಿಯ ಗುಪ್ತ ಅಜೆಂಡಾ ಇದೆ ಎಂದು ಮಾಜಿ ಸಂಸದ ಕೆ.ಜಯಪ್ರಕಾಶ್‌ ಹೆಗ್ಡೆ ಹೇಳಿದ್ದಾರೆ. ಮಹಿಳೆಯರ ಬಗ್ಗೆ ಕಾಳಜಿಗಿಂತ ಅಧಿಕಾರ ಸ್ಥಿರಗೊಳಿಸುವ ಲೆಕ್ಕಾಚಾರ ಸ್ಪಷ್ಟವಾಗಿದೆ. ನಿಜವಾದ ಬದ್ಧತೆ ಇದ್ದಿದ್ದರೆ, ಈಗಾಗಲೇ ಇರುವ ಕಾನೂನುಗಳನ್ನು ಜಾರಿಗೆ ತರುವ ಯೋಜನೆ ರೂಪಿಸಬೇಕಿತ್ತು. ರಾಜ್ಯ ಚುನಾವಣೆಗಳಲ್ಲೂ ಇದನ್ನು ಅಳವಡಿಸಬಹುದಾಗಿತ್ತು. ಆದರೆ ಅದನ್ನು ಕಡೆಗಣಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

hidden agenda behind bjps reservation bill k jayaprakash hegde

ಕುಂದಾಪುರ: 2023ರಲ್ಲಿ106ನೇ ಸಂವಿಧಾನ ತಿದ್ದುಪಡಿಯ ಮೂಲಕ ನಮ್ಮ ಸಂವಿಧಾನದಲ್ಲಿಈಗಾಗಲೇ ಅಂಕಿತಗೊಂಡಿರುವ ಮಹಿಳಾ ಮೀಸಲಾತಿ ಮಸೂದೆಯನ್ನು ಇದೀಗ ಬಿಜೆಪಿ ನೇತೃತ್ವದ ಎನ್ ಡಿಎ ಸರಕಾರವು ಮತ್ತೆ ಲೋಕಸಭೆಯ ಮುಂದೆ ತಂದಿರುವ ಹಿಂದೆ ಹಿಡನ್ ಅಜೆಂಡಾ ಇದೆ ಎಂದು ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಆರೋಪಿಸಿದ್ದಾರೆ.

ತರಾತುರಿಯಲ್ಲಿಮಸೂದೆ ತರುವ ಹಿಂದೆ ಮಹಿಳೆಯರ ಬಗ್ಗೆ ಇರುವ ನಿಜವಾದ ಕಾಳಜಿ ಕಾಣಿಸುವುದಿಲ್ಲ, ಬದಲಾಗಿ ದೇಶದಲ್ಲಿಬಿಜೆಪಿ ಅಧಿಕಾರವನ್ನು ಸ್ಥಿರಗೊಳಿಸುವ ಲೆಕ್ಕಾಚಾರದ ಪ್ರಯತ್ನವೇ ಸ್ಪಷ್ಟವಾಗಿದೆ. ಪ್ರಧಾನ ಮಂತ್ರಿ ಮೋದಿ ಮತ್ತು ಅವರ ಪಕ್ಷವು ಶಾಸನ ಮಂಡಳಿಗಳಲ್ಲಿಮಹಿಳೆಯರಿಗೆ ಮೂರನೇ ಒಂದು ಭಾಗ ಮೀಸಲಾತಿಯನ್ನು ನಿಜವಾಗಿಯೂ ಜಾರಿಗೆ ತರಲು ಬದ್ಧರಾಗಿದ್ದರೆ, ಈಗಾಗಲೇ ಕಾನೂನಿನಲ್ಲಿಇರುವ ವಿಧಿಗಳನ್ನು ಜಾರಿಗೆ ತರುವ ಸ್ಪಷ್ಟ ಯೋಜನೆಯನ್ನು ರೂಪಿಸಬೇಕಾಗಿತ್ತು ಹಾಗೂ ಪ್ರಸ್ತುತ ನಡೆಯುತ್ತಿರುವ ರಾಜ್ಯ ಚುನಾವಣೆಗಳನ್ನೇ ಈ ಮೀಸಲಾತಿಯ ಅಡಿಯಲ್ಲಿನಡೆಸಬಹುದಾಗಿತ್ತು. ಆದರೆ ಅದನ್ನು ಕಡೆಗಣಿಸಲಾಗಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿಆಗ್ರಹಿಸಿದ್ದಾರೆ.

ಪೋಟೊ//21ಕೆ-ಜೆಪಿಎಚ್ //. ಕೆ.ಜಯಪ್ರಕಾಶ್ ಹೆಗ್ಡೆ