ಅರಣ್ಯ ಪ್ರದೇಶಕ್ಕೆ ಕೈಗಾರಿಕಾ ತ್ಯಾಜ್ಯ ಕಂಟಕ

Contributed bymeghashree0610@gmail.com|Vijaya Karnataka

ದಾಬಸಪೇಟೆ ಸಮೀಪದ ಅರಣ್ಯ ಪ್ರದೇಶದಲ್ಲಿ ಕೈಗಾರಿಕಾ ತ್ಯಾಜ್ಯ ವಿಲೇವಾರಿ ಹೆಚ್ಚಾಗಿದೆ. ಇದರಿಂದ ಪರಿಸರ ಮತ್ತು ವನ್ಯಜೀವಿಗಳಿಗೆ ಅಪಾಯ ಎದುರಾಗಿದೆ. ಪ್ಲಾಸ್ಟಿಕ್, ವೈದ್ಯಕೀಯ ತ್ಯಾಜ್ಯ ಸೇರಿದಂತೆ ಹಲವು ತ್ಯಾಜ್ಯಗಳನ್ನು ಇಲ್ಲಿ ಸುರಿಯಲಾಗುತ್ತಿದೆ. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಒತ್ತಾಯ ಕೇಳಿಬರುತ್ತಿದೆ. ತ್ಯಾಜ್ಯ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಿದೆ. ಅರಣ್ಯ ಪ್ರದೇಶವನ್ನು ರಕ್ಷಿಸಲು ಕ್ರಮ ಅಗತ್ಯವಿದೆ.

industrial waste has overtaken the forest area

ಅರಣ್ಯ ಪ್ರದೇಶಕ್ಕೆ ಕೈಗಾರಿಕಾ ತ್ಯಾಜ್ಯ ಕಂಟಕ

ಪರಿಸರ , ಜೀವ ಸಂಕುಲದ ಮೇಲೆ ಪರಿಣಾಮ | ಸೂಕ್ತ ಕ್ರಮಕ್ಕೆ ಒತ್ತಾಯ

ಮೇಘನಾಶ್ರೀ ದಾಬಸಪೇಟೆ

ದಾಬಸಪೇಟೆಯಿಂದ ವೀರಸಾಗರ ರಸ್ತೆಗೆ ಹೊಂದಿಕೊಂಡಿರುವ ಅರಣ್ಯ ಪ್ರದೇಶದಲ್ಲಿಕೈಗಾರಿಕಾ ತ್ಯಾಜ್ಯವನ್ನು ಸುರಿಯುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಇದರಿಂದ ಪರಿಸರ ಹಾಗೂ ಜೀವ ಸಂಕುಲದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.

ಅರಣ್ಯ ಪ್ರದೇಶಗಳು ಪ್ರಕೃತಿಯ ಸಮತೋಲನವನ್ನು ಕಾಪಾಡುವಲ್ಲಿಪ್ರಮುಖ ಪಾತ್ರ ವಹಿಸಲಿವೆ. ಅರಣ್ಯ ಪ್ರದೇಶಕ್ಕೆ ಕೈಗಾರಿಕಾ ತ್ಯಾಜ್ಯ ಕಂಟಕವಾಗುತ್ತಿದೆಯಲ್ಲದೇ, ಪರಿಸರ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.

ಕೈಗಾರಿಕೆಯ ತ್ಯಾಜ್ಯ, ಪ್ಲಾಸ್ಟಿಕ್ , ಗೃಹತ್ಯಾಜ್ಯ, ವೈದ್ಯಕೀಯ ತ್ಯಾಜ್ಯ, ಮದ್ಯದ ಕವರ್ ಬಾಟಲ್ ಗಳು ಸೇರಿದಂತೆ ಹಲವು ತ್ಯಾಜ್ಯವನ್ನು ಅರಣ್ಯ ಪ್ರದೇಶಗಳಲ್ಲಿಸುರಿಯಲಾಗುತ್ತಿದೆ. ಇದು ಕಾಡು ಪ್ರಾಣಿಗಳ ಜೀವಕ್ಕೂ ಅಪಾಯ ಎದುರಾಗುವ ಸಾಧ್ಯತೆ ಹೆಚ್ಚಾಗಿದೆ.

ಅರಣ್ಯ ಪ್ರದೇಶದಲ್ಲಿತ್ಯಾಜ್ಯ ಹಾಕುವ ವ್ಯಕ್ತಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ, ತ್ಯಾಜ್ಯವನ್ನು ಅರಣ್ಯ ಪ್ರದೇಶಗಳಲ್ಲಿಹಾಕುವವರ ಮತ್ತು ಕೈಗಾರಿಕೆಯನ್ನು ಪತ್ತೆ, ಅದರ ಹಚ್ಚಿ ಮಾಲೀಕರಿಗೆ ದಂಡ ವಿಧಿಸುವುದು, ಸಾರ್ವಜನಿಕರಲ್ಲಿಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಿ, ತ್ಯಾಜ್ಯ ನಿರ್ವಹಣೆಗೆ ಸೂಕ್ತ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿಕ್ರಮ ವಹಿಸಬೇಕೆಂಬ ಒತ್ತಾಯ ವ್ಯಕ್ತವಾಗಿದೆ.

ಹತ್ತಾರು ಸಮಸ್ಯೆ:

ದಾಬಸಪೇಟೆ ಭಾಗದಲ್ಲಿಕೈಗಾರಿಕಾ ವಲಯ ಬೆಳೆಯುತ್ತಿದಂತೆ ಹತ್ತಾರು ಸಮಸ್ಯೆಗಳು ಎದುರಾಗುತ್ತಿವೆ. ಮುಖ್ಯವಾಗಿ ಕಸ, ಸ್ವಚ್ಛತೆ ಸಮಸ್ಯೆ, ವಾಹನದಟ್ಟಣೆ, ಕುಡಿಯುವ ನೀರಿನ ಸಮಸ್ಯೆ, ಚರಂಡಿ ನೀರು ರಸ್ತೆಯಲ್ಲಿಯೇ ಹರಿಯುವುದು, ಕಳ್ಳರ ಹಾವಳಿ ಸೇರಿದಂತೆ ಹತ್ತಾರು ಸಮಸ್ಯೆಗಳಿಂದ ಜನರಿಗೆ ಕಿರಿಕಿರಿಯಾಗುತ್ತಿದೆ.

ಕೈಗಾರಿಕಾ ತ್ಯಾಜ್ಯ ವಿಲೇವಾರಿಗೆ ಸೂಕ್ತ ಸ್ಥಳ ಇಲ್ಲ. ಕೈಗಾರಿಕಾ ತ್ಯಾಜ್ಯವನ್ನು ಎಲ್ಲೆಂದರಲ್ಲಿಸುರಿಯಲಾಗುತ್ತಿದೆ. ಕೆಲವು ಕಡೆ ಜನರು ಸ್ವಲ್ಪ ವಿರೋಧ ಮಾಡುತ್ತಿದ್ದಂತೆ ಅರಣ್ಯ ಪ್ರದೇಶದ ಕಡೆ ಮುಖ ಮಾಡಿದಂತಿದೆ ಈಗ ಅರಣ್ಯ ಭಾಗವೂ ಕಸ ಮಯವಾಗುವ ಆತಂಕ ಮೂಡಿದೆ.

ಕೊಟ್ .....

ಅರಣ್ಯ ಪ್ರದೇಶದಲ್ಲಿಯಾವುದೇ ಕಾರಣಕ್ಕೂ ತ್ಯಾಜ್ಯ ವಿಲೇವಾರಿಗೆ ಅವಕಾಶ ಇಲ್ಲ. ಒಂದು ವೇಳೆ ವಿಲೇವಾರಿ ಮಾಡಿದ್ದರೆ ತನಿಖೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ. ಅರಣ್ಯ ಪಾಲಕರು ಈ ಭಾಗದಲ್ಲಿನಿಗಾವಹಿಸಲು ಸೂಚಿಸಲಾಗುವುದು.

-ಮಂಜುನಾಥ್ , ಆರ್ ಎಫ್ ಒ

ಪೊಟೋ 5: ದಾಬಸಪೇಟೆ ವೀರಸಾಗರ ರಸ್ತೆಗೆ ಹೊಂದಿಕೊಂಡಿರುವ ಅರಣ್ಯ ಪ್ರದೇಶದಲ್ಲಿಕೈಗಾರಿಕಾ ತ್ಯಾಜ್ಯ ಸುರಿದಿರುವುದು.