ಮಾಡಾವು: ಶ್ರೀ ಶಂಕರ ವೇದ ಶಿಬಿರ ಉದ್ಘಾಟನೆ

Contributed bysudhakara.kannadamoole@timesofindia.com|Vijaya Karnataka

ಮಡಾವಿನಲ್ಲಿ ಶ್ರೀ ಶಂಕರ ವೇದ ಶಿಬಿರ ಆರಂಭವಾಗಿದೆ. ಶಾಲಾ ಮಕ್ಕಳಿಗೆ ಬೇಸಿಗೆ ರಜೆಯಲ್ಲಿ ವೇದ ಮಂತ್ರ, ಸೂಕ್ತ, ಪೂಜೆ ಹಾಗೂ ಶ್ಲೋಕಗಳನ್ನು ಕಲಿಸಲಾಗುತ್ತಿದೆ. ಈ ವರ್ಷ 4ನೇ ವರ್ಷದ ವಿದ್ಯಾರ್ಥಿಗಳಿಗೆ ನವಗ್ರಹ ಮಂತ್ರ, ಗಣಪತಿ ಹವನದ ಬಗ್ಗೆ ವಿಶೇಷ ತರಬೇತಿ ನೀಡಲಾಗುತ್ತಿದೆ. ಗುರುಗಳಾದ ಶ್ರೀರಾಮ ಶಾಸ್ತ್ರಿ ಮತ್ತು ಶ್ರೀಹರಿ ಭಟ್‌ ಅವರು ಸಹಕರಿಸುತ್ತಿದ್ದಾರೆ. ಶಿಬಿರವು 4 ವರ್ಷಗಳಿಂದ ನಡೆಯುತ್ತಿದೆ.

shri shankar veda camp news of the auspicious inauguration

ವಿಕ ಸುದ್ದಿಲೋಕ ಪುತ್ತೂರು

ತಾಲೂಕಿನ ಕೆಯ್ಯೂರು ಗ್ರಾಮದ ಮಾಡಾವಿನಲ್ಲಿಶಂಕರ ವೇದ ಶಿಬಿರದ ತರಗತಿ ಉದ್ಘಾಟನೆಗೊಂಡಿದೆ.

ಶ್ರುತಿ ನವೀನ ಶಂಕರ ಮಳಿ ದೀಪ ಬೆಳಗಿದರು. ಪ್ರಧಾನ ಪ್ರಿನ್ಸಿಪಾಲ್ ವೇದಮೂರ್ತಿ ಗಣೇಶ ಭಟ್ ಮಾಡಾವು ಗುರುವಂದನೆ ನೆರವೇರಿಸಿದರು. ಗುರು ಶ್ರೀರಾಮ ಶಾಸ್ತ್ರಿ ಕುರಿಯತ್ತಡ್ಕ ಅಧ್ಯಕ್ಷತೆ ವಹಿಸಿದ್ದರು. ಪಾಲ್ತಾಡಿ ಘಟಕದ ಗುರಿಕಾರ ಸುರೇಶ ಭಟ್ ಅಂಕತ್ತಡ್ಕ ಶುಭ ಹಾರೈಸಿದರು. ಅರ್ಚಕ ವೇ.ಮೂ. ಶ್ರೀನಿವಾಸ ಭಟ್ ಕೆಯ್ಯೂರು, ಜ್ಯೋತಿಷಿ ಶ್ರೀಪತಿ ಭಟ್ ಕೆಯ್ಯೂರು, ವೇ.ಮೂ. ಬಾಲಸುಬ್ರಹ್ಮಣ್ಯ ಭಟ್ ಅತ್ರ್ಯಡ್ಕ, ಕೇಶವಮೂರ್ತಿ ಪಟ್ಟಾಜೆ ಉಪಸ್ಥಿತರಿದ್ದರು.

ವೇದಮೂರ್ತಿ ಗಣೇಶ ಭಟ್ ಮಾಡಾವು ನೇತೃತ್ವದಲ್ಲಿ4 ವರ್ಷಗಳಿಂದ ಶಾಲಾ ಮಕ್ಕಳಿಗೆ ಬೇಸಿಗೆ ರಜೆಯ ಅವಧಿಯಲ್ಲಿವೇದ ಶಿಬಿರ ನಡೆಯುತ್ತಿದೆ. ನಿತ್ಯೋಪಯುಕ್ತ ಮಂತ್ರಗಳು, ಸೂಕ್ತಗಳು, ಪಂಚಾಯತನ ಪೂಜೆ ಹಾಗೂ ಶ್ಲೋಕಗಳನ್ನು ಬೋಧಿಸಲಾಗುತ್ತಿದೆ. ಶ್ರೀರಾಮ ಶಾಸ್ತಿ್ರ ಹಾಗೂ ಶ್ರೀಹರಿ ಭಟ್ ಗುರುಗಳಾಗಿ ಸಹಕರಿಸುತ್ತಿದ್ದಾರೆ. ಈ ವರ್ಷ 4ನೇ ವರ್ಷದ ವಿದ್ಯಾರ್ಥಿಗಳಿಗೆ ನವಗ್ರಹ ಮಂತ್ರ, ಇತರೆ ಸೂಕ್ತಗಳು ಹಾಗೂ ಗಣಪತಿ ಹವನದ ಕುರಿತು ವಿಶೇಷ ತರಬೇತಿ ನೀಡಲಾಗುತ್ತಿದೆ ಎಂದು ಸಂಸ್ಥೆ ತಿಳಿಸಿದೆ.

ಫೋಟೋ: 21ಪಿ-ವೇದ

ಮಾಡಾವಿನಲ್ಲಿಶ್ರೀ ಶಂಕರ ವೇದ ಶಿಬಿರ ನಡೆಯುತ್ತಿದೆ.