ಜಪಾನ್ ರಕ್ಷಣಾ ನೀತಿ ಬದಲಾವಣೆ
ಮಾರಕ ಶಸ್ತಾಸ್ತ್ರಗಳ ರಫ್ತಿನ ಮೇಲಿದ್ದ ನಿಷೇಧ ತೆರವು
ಜಪಾನ್ ತನ್ನ ರಕ್ಷಣಾ ನೀತಿಯಲ್ಲಿಮಹತ್ವದ ಬದಲಾವಣೆ ತಂದಿದ್ದು, ಮಾರಕ ಶಸ್ತಾಸ್ತ್ರಗಳ ರಫ್ತಿನ ಮೇಲಿದ್ದ ನಿಷೇಧವನ್ನು ಮಂಗಳವಾರ ಅಧಿಕೃತವಾಗಿ ತೆರವುಗೊಳಿಸಿದೆ.
ಎರಡನೇ ಮಹಾಯುದ್ಧದ ನಂತರ ಜಪಾನ್ ಪಾಲಿಸಿಕೊಂಡು ಬಂದಿದ್ದ ಶಾಂತಿಪ್ರಿಯ (Pa್ಚಜ್ಛಿಜಿsಠಿ) ನೀತಿಯನ್ನು ಬದಿಗೊತ್ತಿ, ಇದೀಗ ಫೈಟರ್ ಜೆಟ್ ಗಳು, ಕ್ಷಿಪಣಿಗಳು ಮತ್ತು ಯುದ್ಧನೌಕೆಗಳ ರಫ್ತಿಗೆ ಅನುಮತಿ ನೀಡಲಾಗಿದೆ.
ಚೀನಾ ಮತ್ತು ಉತ್ತರ ಕೊರಿಯಾದಿಂದ ಎದುರಾಗುತ್ತಿರುವ ಭದ್ರತಾ ಸವಾಲುಗಳನ್ನು ಎದುರಿಸಲು ಮತ್ತು ತನ್ನ ದೇಶದ ರಕ್ಷಣಾ ಉದ್ಯಮವನ್ನು ಬಲಪಡಿಸಲು ಪ್ರಧಾನಿ ಸನಾಯೆ ಟಕೈಚಿ ಅವರ ಸರಕಾರ ಈ ನಿರ್ಧಾರ ಕೈಗೊಂಡಿದೆ.
ಸದ್ಯಕ್ಕೆ ಜಪಾನ್ ನೊಂದಿಗೆ ರಕ್ಷಣಾ ಒಪ್ಪಂದ ಮಾಡಿಕೊಂಡಿರುವ 17 ದೇಶಗಳಿಗೆ ಮಾತ್ರ ಈ ಶಸ್ತಾ್ರಸ್ತ್ರಗಳನ್ನು ರಫ್ತು ಮಾಡಲಾಗುವುದು. ಅಲ್ಲದೆ, ಪ್ರಸ್ತುತ ಯುದ್ಧದಲ್ಲಿತೊಡಗಿರುವ ರಾಷ್ಟ್ರಗಳಿಗೆ ಮಾರಕ ಆಯುಧಗಳನ್ನು ನೀಡುವುದಿಲ್ಲಎಂದು ಜಪಾನ್ ಸ್ಪಷ್ಟಪಡಿಸಿದೆ.
ಜಾಗತಿಕ ಪ್ರತಿಕ್ರಿಯೆ: ಆಸ್ಪ್ರೇಲಿಯಾ, ಫಿಲಿಪ್ಪೀನ್ಸ್ ಮತ್ತು ಯುರೋಪಿಯನ್ ರಾಷ್ಟ್ರಗಳು ಈ ನಿರ್ಧಾರವನ್ನು ಸ್ವಾಗತಿಸಿವೆ. ಈಗಾಗಲೇ ಆಸ್ಪ್ರೇಲಿಯಾವು ಜಪಾನ್ ನೊಂದಿಗೆ 6.5 ಬಿಲಿಯನ್ ಡಾಲರ್ ಮೌಲ್ಯದ ಯುದ್ಧನೌಕೆಗಳ ಒಪ್ಪಂದವನ್ನು ಮಾಡಿಕೊಂಡಿದೆ. ಆದರೆ, ಚೀನಾ ಈ ಕ್ರಮವನ್ನು ಟೀಕಿಸಿದೆ.
ಈ ಬದಲಾವಣೆಯು ಜಪಾನ್ ನ ಸಂವಿಧಾನವನ್ನು ಉಲ್ಲಂಘಿಘಿಸುತ್ತದೆ ಮತ್ತು ಜಾಗತಿಕ ಉದ್ವಿಗ್ನತೆಯನ್ನು ಹೆಚ್ಚಿಸುತ್ತದೆ ಎಂದು ಪ್ರತಿಪಕ್ಷ ಆತಂಕ ವ್ಯಕ್ತಪಡಿಸಿದೆ.
ಫೊಟೊ: ಜಪಾನ್
= = =
ಅಶ್ವಗಂಧ ಬಳಕೆಗೆ ಹೊಸ ಮಾರ್ಗಸೂಚಿ
ಆಹಾರ ಉತ್ಪನ್ನಗಳಲ್ಲಿಅಶ್ವಗಂಧದ ಬಳಕೆಗೆ ಸಂಬಂಧಿಸಿದಂತೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು (ಎಫ್ ಎಸ್ ಎಸ್ ಎಐ) ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ (ಆರೋಗ್ಯ ಪೂರಕಗಳು, ನ್ಯೂಟ್ರಾಸ್ಯುಟಿಕಲ್ಸ್ , ವಿಶೇಷ ಆಹಾರ ಬಳಕೆ ಮತ್ತು ವೈದ್ಯಕೀಯ ಉದ್ದೇಶಗಳ ಆಹಾರ) ನಿಯಮಗಳು 2016ರ ಅಡಿಯಲ್ಲಿಎಫ್ ಎಸ್ ಎಸ್ ಎಐ ಈ ಸ್ಪಷ್ಟನೆಯನ್ನು ನೀಡಿದೆ.
ಮಾರ್ಗಸೂಚಿಯ ಪ್ರಮುಖ ಅಂಶಗಳು
ನಿಯಮಾವಳಿಗಳ ಪ್ರಕಾರ, ಆರೋಗ್ಯ ಪೂರಕಗಳು ಮತ್ತು ನ್ಯೂಟ್ರಾಸ್ಯುಟಿಕಲ್ಸ್ ಗಳಲ್ಲಿಅಶ್ವಗಂಧದ ಬೇರುಗಳು ಮತ್ತು ಅವುಗಳ ಸಾರವನ್ನು ಮಾತ್ರ ಬಳಸಲು ಅನುಮತಿಯಿದೆ. ಕೆಲವು ತಯಾರಕರು ತಮ್ಮ ಉತ್ಪನ್ನಗಳಲ್ಲಿಅಶ್ವಗಂಧದ ಎಲೆಗಳನ್ನು ಬಳಸುತ್ತಿರುವುದು ಎಫ್ ಎಸ್ ಎಸ್ ಎಐ ಗಮನಕ್ಕೆ ಬಂದಿದೆ. ಆದರೆ, ಅಶ್ವಗಂಧದ ಎಲೆಗಳನ್ನು ಹಸಿ ರೂಪದಲ್ಲಿಅಥವಾ ಸಾರ ಅಥವಾ ಇನ್ನಾವುದೇ ರೂಪದಲ್ಲಿಬಳಸಲು ಅನುಮತಿಯಿಲ್ಲಎಂದು ಪ್ರಾಧಿಕಾರವು ಸ್ಪಷ್ಟಪಡಿಸಿದೆ.
ಇದಕ್ಕೂ ಮೊದಲು, ಆಯುಷ್ ಸಚಿವಾಲಯವು ಕೂಡ ಆಯುಷ್ ಔಷಧ ಮತ್ತು ಉತ್ಪನ್ನ ತಯಾರಕರು ಕೇವಲ ಅಶ್ವಗಂಧದ ಬೇರುಗಳನ್ನು ಮಾತ್ರ ಬಳಸಬೇಕು ಮತ್ತು ಎಲೆಗಳನ್ನು ಯಾವುದೇ ರೂಪದಲ್ಲಿಬಳಸಬಾರದು ಎಂದು ಸೂಚಿಸಿತ್ತು.
ಫೊಟೊ; ಅಶ್ವಗಂಧ

