ಆದಾಯ ಮಿತಿ ಪರಿಗಣನೆ ಬೇಡ

Contributed bychandruhiremath06@gmail.com|Vijaya Karnataka

ಕರ್ನಾಟಕ ದಲಿತ ಜನಜಾಗೃತಿ ವೇದಿಕೆ ಅಧ್ಯಕ್ಷ ಮಲ್ಲಿಕಾರ್ಜುನ ಬಿ.ಶರ್ಮಾ ಅವರು ಸಂಧ್ಯಾ ಸುರಕ್ಷಾ ಪಿಂಚಣಿ ಹಾಗೂ ವಿಧವಾ ವೇತನದಲ್ಲಿ ಆದಾಯ ಮಿತಿ ಪರಿಗಣಿಸಬಾರದು ಎಂದು ಆಗ್ರಹಿಸಿದ್ದಾರೆ. ವೃದ್ಧರ ಆದಾಯ ಮಿತಿ ಪರಿಗಣಿಸುವುದು ಅವೈಜ್ಞಾನಿಕ ಎಂದಿದ್ದಾರೆ. ಅಂಬೇಡ್ಕರ್ ವಸತಿ ಯೋಜನೆ ಮೊತ್ತವನ್ನು 5 ಲಕ್ಷಕ್ಕೆ, ಎಸ್ಸಿ, ಎಸ್ಟಿ ಮಹಿಳೆಯರ ಮೇಲಿನ ದೌರ್ಜನ್ಯ ಪರಿಹಾರ ಮೊತ್ತವನ್ನು 3 ಲಕ್ಷಕ್ಕೆ ಏರಿಸಬೇಕು. ಉದ್ಯೋಗಿನಿ ಯೋಜನೆಯ ಸಬ್ಸಿಡಿ ಹಣ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

income limit violation necessary consideration for security plans

*ಚಿತ್ರ:ಮಲ್ಲಿಕಾರ್ಜುನ*

**

ಸಂಧ್ಯಾ ಸುರಕ್ಷಾ ಪಿಂಚಣಿ, ವಿಧವಾ ವೇತನದಲ್ಲಿಆದಾಯ ಮಿತಿ ಪರಿಗಣಿಸಬಾರದು (ಕಿಕ್ಕರ್ )

ಆದಾಯ ಮಿತಿ ಪರಿಗಣನೆ ಬೇಡ

ವಿಕ ಸುದ್ದಿಲೋಕ ಕಲಬುರಗಿ

ವೃದ್ಧರಿಗೆ ನೀಡುವ ಸಂಧ್ಯಾ ಸುರಕ್ಷಾ ಪಿಂಚಣಿ ಮತ್ತು ವಿಧವಾ ವೇತನದಲ್ಲಿಆದಾಯ ಮಿತಿ ಪರಿಗಣಿಸಬಾರದು ಎಂದು ಕರ್ನಾಟಕ ದಲಿತ ಜನಜಾಗೃತಿ ವೇದಿಕೆ ಅಧ್ಯಕ್ಷ ಮಲ್ಲಿಕಾರ್ಜುನ ಬಿ.ಶರ್ಮಾ ಆಗ್ರಹಿಸಿದರು.

ನಗರದ ಪತ್ರಿಕಾ ಭವನದಲ್ಲಿಮಂಗಳವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಸಂಧ್ಯಾ ಸುರಕ್ಷಾ ಯೋಜನೆಯಲ್ಲಿಆದಾಯ ಮಿತಿ 28 ಸಾವಿರ ಇರಬೇಕು. ಇಲ್ಲವಾದರೆ ಪಿಂಚಣಿ ರದ್ದು ಮಾಡುತ್ತೇವೆ ಎಂದು ಹೇಳಿದ್ದಾರೆ. ಇದು ಅವೈಜ್ಞಾನಿಕವಾಗಿದ್ದು ವೃದ್ಧರ ಆದಾಯ ಮಿತಿ ಪರಿಗಣಿಸಬಾರದು. ಹಾಗೆಯೇ ಅಂಬೇಡ್ಕರ್ ವಸತಿ ಯೋಜನೆಗಳ ಮೊತ್ತವನ್ನು 5 ಲಕ್ಷಕ್ಕೆ ಹಾಗೂ ಎಸ್ಸಿ,ಎಸ್ಟಿ ಮಹಿಳೆ ಮೇಲಿನ ದೌರ್ಜನ್ಯ ಪರಿಹಾರದ ಮೊತ್ತವನ್ನು 3 ಲಕ್ಷಕ್ಕೆ ಏರಿಸಬೇಕು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಉದ್ಯೋಗಿನಿ ಯೋಜನೆಯ ಸಬ್ಸಿಡಿ ಹಣ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.

ಮಹಾದೇವ ಬಿ.ಶರ್ಮಾ, ಭೀಮರಾವ ಸೂಗೂರ, ಜಯಶಂಕರ ಪತಾಳೆ, ಹರೀಶ ಕಂತೆಗೋಳ, ಶಿವಶರಣಪ್ಪ ಅಷ್ಟಗಿ ಇದ್ದರು.