ವಿಕ ಸುದ್ದಿಲೋಕ ಬೆಂಗಳೂರು ‘ಪ್ರಾಡಾ ಮೇಡ್ ಇನ್ ಇಂಡಿಯಾ -
ಇನ್ ಸ್ಪೈಧಿರ್ಡ್ ಬೈ ಕೊಲ್ಲಾಪುರಿ ಚಪ್ಪಲ್ಸ್ ’ ಯೋಜನೆಯ ಭಾಗವಾಗಿ ಪ್ರಾಡಾ ಸಂಸ್ಥೆಯು ಲಿಡ್ಕರ್ - ಲಿಡ್ಕಾಮ್ ಸಹಯೋಗದಲ್ಲಿರೂಪಿಸಿದ ಕೊಲ್ಹಾಪುರಿ ಚಪ್ಪಲಿಗಳಿಂದ ಪ್ರೇರಿತವಾದ ಸೀಮಿತ ಆವೃತ್ತಿಯ ಪಾದರಕ್ಷೆಗಳನ್ನು ಬಿಡುಗಡೆ ಮಾಡಿದೆ. ಹೊಸ ಮಾದರಿಯ ಈ ಚಪ್ಪಲಿಗಳು ಜಾಗತಿಕವಾಗಿ 40 ಆಯ್ದ ಪ್ರಾಡಾ ಸ್ಟೋರ್ಸ್ ಹಾಗೂ P್ಟada.್ಚಟಞನಲ್ಲಿಲಭ್ಯ. ಸಾಂಪ್ರದಾಯಿಕ ಕೊಲ್ಲಾಪುರಿ ಚಪ್ಪಲಿಗಳನ್ನು ಪಾರಂಪರಿಕವಾಗಿ ತಯಾರಿಸುವ ಕರ್ನಾಟಕ ಮತ್ತು ಮಹಾರಾಷ್ಟ್ರ ಪ್ರದೇಶಗಳ ನುರಿತ ಚರ್ಮ ಕುಶಲಕರ್ಮಿಗಳು ಇವನ್ನು ತಧಿಯಾಧಿರಿಧಿಸಿಧಿದ್ದಾಧಿರೆ. ಸಾಂಪ್ರದಾಯಿಕ ತಂತ್ರಗಳನ್ನು ಪ್ರಾಡಾದ ಸಮಕಾಲೀನ ವಿನ್ಯಾಸ ಮತ್ತು ಪ್ರೀಮಿಯಂ ವಸ್ತುಗಳೊಂದಿಗೆ ಸಂಯೋಜಿಸಿ ಭಾರತೀಯ ಪರಂಪರೆ ಮತ್ತು ಆಧುನಿಕ ಐಷಾರಾಮಿ ವಿನ್ಯಾಸವಾಗಿ ಈ ಪಾದರಕ್ಷೆ ರೂಪಿಸಲಾಗಿದೆ. ಡಾ. ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ (ಲಿಡ್ಕರ್ ), ಮಹಾರಾಷ್ಟ್ರದ ಸಂತ ರೋಹಿದಾಸ್ ಲೆದರ್ ಇಂಡಸ್ಟ್ರೀಸ್ ಮತ್ತು ಚರ್ಮಕಾರ್ ಡೆವಲಪ್ ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ (ಲಿಡ್ಕಾಮ್ ) ಸಹಯೋಗದಲ್ಲಿಅಭಿವೃದ್ಧಿಪಡಿಸಲಾಗಿದೆ. ಸಮಕಾಲೀನ, ನವೀನ ವಿನ್ಯಾಸಗಳ ಕುರಿತು ನುರಿತ ಚರ್ಮಕುಶಲಕರ್ಮಿಗಳನ್ನು ಪ್ರೋತ್ಸಾಹಿಸುವುದು ಇದರ ಗುರಿಯಾಗಿದೆ. ಚರ್ಮ ಕುಶಲಕರ್ಮಿಗಳಿಗೆ ತರಬೇತಿ: ಕೊಲ್ಲಾಪುರಿ ಚಪ್ಪಲಿಗಳನ್ನು ಸಾಂಪ್ರದಾಯಿಕವಾಗಿ ತಯಾರಿಸುವ ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳ ತಲಾ ನಾಲ್ಕು ಜಿಲ್ಲೆಗಳ ಚರ್ಮ ಕುಶಲಕರ್ಮಿಗಳಿಗೆ ತರಬೇತಿ ಕಾರ್ಯಕ್ರಮದ ಯೋಜನೆ ಹಮ್ಮಿಕೊಳ್ಳಲಾಗಿದೆ. ತರಬೇತಿ ಆರು ತಿಂಗಳ ಅವಧಿಯ ಒಂದು ಬ್ಯಾಚ್ ನಂತೆ ಮೂರು ವರ್ಷಗಳ ಕಾಲ ರಚನಾತ್ಮಕವಾಗಿ ನಡೆಯಲಿದೆ. ಒಟ್ಟು 180 ಚರ್ಮ ಕುಶಲಕರ್ಮಿಗಳನ್ನು ತಲುಪುವ ಉದ್ದೇಶವನ್ನು ಹೊಂದಿದೆ. 18ರಿಂದ 45 ವರ್ಷ ವಯಸ್ಸಿನವರು ಅರ್ಜಿ ಸಲ್ಲಿಸಬಹುದು ಎಂದು ಪ್ರಾಡಾ ತಿಳಿಸಿದೆ. ಪ್ರಮುಖ ವಿನ್ಯಾಸ ಸಂಸ್ಥೆಗಳಾದ ಕರ್ನಾಟಕ ಚರ್ಮ ಮತ್ತು ಫ್ಯಾಷನ್ ತಂತ್ರಜ್ಞಾನ ಸಂಸ್ಥೆ (ಕೆಐಎಲ್ ಟಿ) ಮತ್ತು ರಾಷ್ಟ್ರೀಯ ಫ್ಯಾಷನ್ ತಂತ್ರಜ್ಞಾನ ಸಂಸ್ಥೆ (ಎನ್ ಐಎಫ್ ಟಿ) ಸಹಭಾಗಿತ್ವದಲ್ಲಿಈ ತರಬೇತಿ ಕೋರ್ಸ್ ನೀಡಲಾಗುತ್ತದೆ. ಚರ್ಮೋತ್ಪನ್ನ ತಯಾರಿಕೆಯಲ್ಲಿನ ವಿನ್ಯಾಸದ ಮೂಲಭೂತ ಅಂಶ, ಡಿಜಿಟಲ್ ಕೌಶಲ ಮತ್ತು ಮಾರುಕಟ್ಟೆ ಅಗತ್ಯಗಳ ತಿಳಿವಳಿಕೆ ನೀಡಲಾಗುವುದು. ಪ್ರಾಡಾ ಸಂಯೋಜಿತ ಮೊದಲ ಕಾರ್ಯಕ್ರಮವು ಈ ಬೇಸಿಗೆಯಲ್ಲಿಪ್ರಾರಂಭವಾಗುತ್ತದೆ. ಆರಂಭಿಕ 30 ಸೀಟುಗಳಿಗೆ ಕೆಐಎಲ್ ಟಿ ಹಾಗೂ ಎನ್ ಐಎಫ್ ಟಿ (ತಲಾ 15 ಅರ್ಜಿ) ಮೇ ತಿಂಗಳಲ್ಲಿಲಿಡ್ಕರ್ , ಲಿಡ್ಕಾಮ್ ಮತ್ತು ಪ್ರಾಡಾ ಸಂಸ್ಥೆಗಳ ವೆಬ್ ಸೈಟ್ ಗಳಲ್ಲಿಅಧಿರ್ಜಿಧಿಗಧಿಳನ್ನು ಆಧಿಹ್ವಾಧಿನಿಧಿಸಧಿಲಾಧಿಗುಧಿತ್ತಧಿದೆ. ಲಿಡ್ಕರ್ ವ್ಯವಸ್ಥಾಪಕ ನಿರ್ದೇಶಕಿ ಡಾ.ಕೆ.ಎಂ. ವಸುಂಧರಾ, ‘‘ಪ್ರಾಡಾ ಗ್ರೂಪ್ ನೊಂದಿಗಿನ ಈ ಸಹಭಾಗಿತ್ವ ಕರ್ನಾಟಕದ ಸಾಂಪ್ರದಾಯಿಕ ಚರ್ಮ ಕರಕುಶಲತೆಯನ್ನು ಜಾಗತಿಕ ಹಂತಕ್ಕೆ ಏರಿಸುವತ್ತ ಮಹತ್ವದ ಹೆಜ್ಜೆಯಾಗಿದೆ. ಜತೆಗೆ, ಸಿಎಸ್ ಆರ್ ಅನುದಾನದಲ್ಲಿಪ್ರಾಡಾ ಜವಾಬ್ದಾರಿಯುತ ಮತ್ತು ಸುಸ್ಥಿರ ಸಾಮಾಜಿಕ ಹೊಣೆಗಾರಿಕೆ ನಿಭಾಯಿಸುತ್ತಿದ್ದು, ಚರ್ಮ ಕುಶಲಕರ್ಮಿಗಳ ಕಲ್ಯಾಣಕ್ಕೆ ನೆರವಾಗಲಿದೆ,’ಧಿ’ ಎಂದರು. ಕೆಐಎಲ್ ಟಿ ನಿರ್ದೇಶಕ ಸಿದ್ದಲಿಂಗಪ್ಪ
ಬಿ. ಪೂಜಾರಿ, ‘‘ತರಬೇತಿಯಿಂದಾಗಿ ಚರ್ಮ ಕುಶಲ ಕರ್ಮಿಗಳಿಗೆ ಅಂತಾರಾಷ್ಟ್ರೀಯ ವಿನ್ಯಾಸದ ಅರಿವು, ಮಾರುಕಟ್ಟೆ ಬೇಡಿಕೆ ಮತ್ತು ಅತ್ಯಾಧುನಿಕ ತಂತ್ರಜ್ಞಾನ ಕಲಿಕೆಯ ಅವಕಾಶವನ್ನು ನೀಡುತ್ತದೆ,’’ ಎಂದರು. ಲಿಡ್ಕಾಮ್ ವ್ಯವಸ್ಥಾಪಕ ನಿರ್ದೇಶಕಿ ಪ್ರೇರಣಾ ದೇಶಭ್ರತರ್ , ಎನ್ ಐಎಫ್ ಟಿ ಮಹಾನಿರ್ದೇಶಕಿ ತನು ಕಶ್ಯಪ್ ಉಪಸ್ಥಿತರಿದ್ದರು.

