ಗುರುಗಳನ್ನು ಸ್ಮರಿಸುವ ಸ್ನೇಹಮಿಲನ

Contributed byragh.pkn@gmail.com|Vijaya Karnataka

ಕೋಲಾರ ತಾಲೂಕಿನ ಸುಗಟೂರಿನ ಸಬರಮತಿ ಪ್ರೌಢಶಾಲೆಯಲ್ಲಿ 2000-01ನೇ ಸಾಲಿನ ಹಳೆಯ ವಿದ್ಯಾರ್ಥಿಗಳು ತಮ್ಮ ಗುರುಗಳನ್ನು ಸ್ಮರಿಸಲು ಸ್ನೇಹಮಿಲನ ಹಾಗೂ ಗುರುವಂದನೆ ಕಾರ್ಯಕ್ರಮ ಆಯೋಜಿಸಿದ್ದರು. 24 ವರ್ಷಗಳ ಬಳಿಕವೂ ಶಿಕ್ಷಕರ ಋುಣ ತೀರಿಸಲು ವಿದ್ಯಾರ್ಥಿಗಳು ಮುಂದಾಗಿದ್ದು, ಶಾಲೆಯ ಮಕ್ಕಳಿಗೆ ಆದರ್ಶವಾಗಿದೆ. ಈ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.

warm reunion honoring teachers by alumni

ಗುರುಗಳನ್ನು ಸ್ಮರಿಸುವ ಸ್ನೇಹಮಿಲನ

ಹಳೆ ವಿದ್ಯಾರ್ಥಿಗಳಿಂದ ಸಬರಮತಿ ಪ್ರೌಢಶಾಲೆಯಲ್ಲಿಗುರುವಂದನೆ ಕಾರ ್ಯಕ್ರಮ

ವಿಕ ಸುದ್ದಿಲೋಕ ಕೋಲಾರ

ಅಕ್ಷರ ಕಲಿಸಿದ ಗುರುವನ್ನು ಮರೆಯದೆ 24 ವರ್ಷಗಳ ನಂತರವೂ ಸ್ಮರಿಸುವ ಕೆಲಸಕ್ಕೆ ಮುಂದಾಗಿರುವ ಹಳೆ ವಿದ್ಯಾರ್ಥಿಗಳ ಕಾರ್ಯ ಶಾಲೆಯ ಮಕ್ಕಳಿಗೆ ಆದರ್ಶವಾಗಿದೆ ಎಂದು ತಾಲೂಕಿನ ಸುಗಟೂರು ಸಬರಮತಿ ಪ್ರೌಢಶಾಲೆ ಆಡಳಿತಾಧಿಕಾರಿ ಬಿ.ವೆಂಕಟೇಶ್ ಹರ್ಷ ವ್ಯಕ್ತಪಡಿಸಿದರು.

ಶಾಲೆಯ ಆವರಣದಲ್ಲಿ2000-01ನೇ ಸಾಲಿನಲ್ಲಿಎಸ್ಸೆಸ್ಸೆಲ್ಸಿ ಮುಗಿಸಿದ್ದ ನೂರಾರು ವಿದ್ಯಾರ್ಥಿಗಳು ಒಟ್ಟುಗೂಡಿ ನಮ್ಮ ಶಾಲೆ ನಮ್ಮ ಹೆಮ್ಮೆ ಕಾರ್ಯಕ್ರಮದಡಿ ಗುರುಗಳನ್ನು ಸ್ಮರಿಸುವ ಸ್ನೇಹಮಿಲನ ಹಾಗೂ ಗುರುವಂದನೆ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.

3 ವರ್ಷಗಳ ಕಾಲ ಮಕ್ಕಳಿಗೆ ನೀಡಿದ ನೈತಿಕ ಶಿಕ್ಷಣದಿಂದಲೇ ಇಂದು ಹಳೆ ವಿದ್ಯಾರ್ಥಿಗಳು ಮತ್ತೆ ಶಾಲೆಯತ್ತ ಬಂದು ಅಕ್ಷರ ಕಲಿಸಿದ ಗುರುಗಳ ಋುಣ ತೀರಿಸುವ ಕೆಲಸ ಮಾಡುತ್ತಿದ್ದಾರೆ. ಶಾಲೆಗಳನ್ನು ಮುನ್ನಡೆಸುವುದ ಕಷ್ಟದ ಕೆಲಸವಾಗಿದೆ. ಇಂತಹ ಸಂದರ್ಭದಲ್ಲೂ54 ವರ್ಷ ಶಾಲೆಯನ್ನು ಮುನ್ನಡೆಸಿದ್ದು, ಇಂದು 1800 ಮಕ್ಕಳು ಓದುತ್ತಿದ್ದಾರೆ ಎಂದರು.

ನಿವೃತ್ತ ಶಿಕ್ಷಕರಾದ ಜಿ.ನಂಜುಂಡಪ್ಪ, ಎನ್ .ಶ್ರೀನಿವಾಸರೆಡ್ಡಿ, ದಾನಪ್ರಕಾಶ್ ಮತ್ತಿತರರು ಮಾತನಾಡಿ, ನಿವೃತ್ತರಾದ ನಂತರವೂ 20 ವರ್ಷಗಳ ಹಿಂದಿನ ಶಿಷ್ಯರು ಸ್ಮರಿಸಿ ಕರೆದಿರುವುದು ಅತಿ ಹೆಚ್ಚು ಸಂತಸ ಉಂಟು ಮಾಡಿದೆ ಎಂದು ತಿಳಿಸಿದರು.

ಹಳೆ ವಿದ್ಯಾರ್ಥಿಗಳಾದ ಶ್ಯಾಮಲ, ರಾಮಾಂಜಿ, ಕಮಲ,ಉಮಾಶಂಕರ್ , ಸುಭಾಷ್ ಚಂದ್ರಬೋಸ್ , ಮತ್ತಿತರರು ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದು, ಸ್ಪರ್ಧಾತ್ಮಕ ಯುಗದಲ್ಲಿಯಾರಲ್ಲಿಶ್ರಮ, ಕನಸು, ಪ್ರಯತ್ನ ಇರುತ್ತದೆಯೋ ಅವರು ಮಾತ್ರ ಬೆಳೆಯುತ್ತಾರೆ. ಎಸ್ಸೆಸ್ಸೆಲ್ಸಿ ಟರ್ನಿಂಗ್ ಪಾಯಿಂಟ್ ಆಗಿದ್ದು, ಇಲ್ಲೇ ನಿಮ್ಮ ಮುಂದಿನ ಭವಿಷ್ಯದ ಹಾದಿ ನಿರ್ಧಾರವಾಗುತ್ತದೆ ಎಂದರು.

ಇದೇ ಸಂದರ್ಭದಲ್ಲಿಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿಅತಿ ಹೆಚ್ಚು ಅಂಕ ಗಳಿಸಿದ ಶಾಲೆಯ ನಾಲ್ವರು ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಇದೇ ಸಂದರ್ಭದಲ್ಲಿಶಾಲೆಯ ಕೊಠಡಿಗಳಿಗೆ ಕಿಟಕಿಗಳನ್ನು ಕೊಡುಗೆಯಾಗಿ ನೀಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

ಕಾರ್ಯಕ್ರಮದಲ್ಲಿಶಿಕ್ಷಕರಾದ ಪಿ.ಎಂ.ನಾರಾಯಣಸ್ವಾಮಿ, ಎಸ್ .ಆರ್ .ಮೋಹನ್ , ಎನ್ .ಶ್ರೀರಾಮರೆಡ್ಡಿ, ಸಿ.ನಾರಾಯಣಸ್ವಾಮಿ, ಕೆಂಚೇಗೌಡ, ವಿಶ್ವನಾಥ್ , ನಾರಾಯಣಸ್ವಾಮಿ, ನಾಗಭೂಷಣ್ , ಅನಂತಪದ್ಮನಾಭ್ , ಎಚ್ .ನಾರಾಯಣಸ್ವಾಮಿ, ಆರ್ .ವೆಂಕಟೇಶ್ , ಸಿ.ವೆಂಕಟೇಶಪ್ಪ, ಬಾಲಕೃಷ್ಣ, ಕೆ.ವಿ.ರಾಜಣ್ಣ ಮತ್ತಿತರರಿದ್ದರು.

=

ಫೋಟೋಕ್ಯಾಪ್ಷನ್ ; ಕೋಲಾರ ತಾಲೂಕಿನ ಸುಗಟೂರಿನ ಸಬರಮತಿ ಪ್ರೌಢಶಾಲೆಯ ಆವರಣದಲ್ಲಿ2000-01 ಸಾಲಿನ ಹಳೆಯ ವಿದ್ಯಾರ್ಥಿಗಳು ತಮ್ಮ ಶಿಕ್ಷಕರಿಗೆ ಗುರುವಂದನೆ ಸಲ್ಲಿಸಿದರು. (28ಕೆಪಿಎಚ್ 3).