ಗೌರಿಬಿದನೂರು ತಾಲೂಕಿನ ಕೆರೆಗಳಿಗೆ ವರ್ಷದಲ್ಲಿಎತ್ತಿನಹೊಳೆ | ಅಂತರ್ಜಲ ಅಭಿವೃದ್ಧಿಗೆ ಆದ್ಯತೆ | ಕೆ.ಎಚ್ , ಪುಟ್ಟಸ್ವಾಮಿಗೌಡ
ವಿಕ ಸೂಪರ್ ಸ್ಟಾರ್ ರೈತ ಕಾರ್ಯಕ್ರಮಕ್ಕೆ ಶುಭಾಶಯಗಳು..
ದೇವಿ ಮಂಜುನಾಥ್ ಗೌರಿಬಿದನೂರು
ಯಾರು ಎಷ್ಟೇ ಅಡೆತಡೆ ಸೃಷ್ಟಿಸಿದರೂ ಕ್ಷೇತ್ರದ ಅಭಿವೃದ್ಧಿಯನ್ನು ನಿರಂತರವಾಗಿ ಮಾಡುತ್ತೇನೆ, ಇದು ನನ್ನ ಆದ್ಯ ಕರ್ತವ್ಯ. 40 ಸಾವಿರ ಮತಗಳ ಅಂತರದಿಂದ ಕ್ಷೇತ್ರದ ಜನತೆ ನನ್ನನ್ನು ಶಾಸಕನಾಗಿ ಆಯ್ಕೆ ಮಾಡಿ, ಆಶೀರ್ವದಿಸಿದ್ದಾರೆ. ಅಭೂತಪೂರ್ವ ಗೆಲುವು ತಂದುಕೊಟ್ಟಿದ್ದಾರೆ. ಅವರ ಋುಣ ತೀರಿಸುತ್ತೇನೆ ಎಂದು ವಿಕ ವಿಶೇಷ ಸಂದರ್ಶನದಲ್ಲಿಶಾಸಕ ಕೆ.ಎಚ್ . ಪುಟ್ಟಸ್ವಾಮಿಗೌಡ ತಮ್ಮ ಮನದಾಳದ ಮಾತು ಹೊರಹಾಕಿದರು.
ಎತ್ತಿನಹೊಳೆ ನೀರು: ರಾಜ್ಯ ಸರಕಾರ ಎತ್ತಿನಹೊಳೆ ಯೋಜನೆಗೆ ಹೆಚ್ಚುವರಿಯಾಗಿ 3,700 ಕೋಟಿ ರೂ. ಅನುದಾನ ನೀಡಿದೆ ಇನ್ನೊಂದು ವರ್ಷದಲ್ಲಿತಾಲೂಕಿಗೆ ಎತ್ತಿನಹೊಳೆ ನೀರು ಹರಿಯಲಿದೆ, ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಲಾಗುವುದು, ಇದರಿಂದ ಕ್ಷೇತ್ರದ ಸಮಗ್ರ ಕೃಷಿಗೆ ಹೆಚ್ಚು ಸಹಕಾರಿಯಾಗುವ ಜತೆಗೆ ಕ್ಷೇತ್ರದ ಆರ್ಥಿಕ ಅಭಿವೃದ್ಧಿಯೂ ಆಗಲಿದೆ ಎಂದರು.
ಕ್ಷೇತ್ರದ ಶಾಸಕನಾಗಿ ಅಧಿಕಾರ ವಹಿಸಿಕೊಂಡ ಬಳಿಕ ಬಯಲು ಸೀಮೆ ತಾಲೂಕಿನಲ್ಲಿಕೃಷಿ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲು ನಿರ್ಧರಿಸಿದ್ದು, ಕೃಷಿ ಸಚಿವರಿಂದ ಹಾಗೂ ವಿವಿಧ ಇಲಾಖೆಗಳಿಂದ ಅನುದಾನ ತಂದು ಕೃಷಿ ಕ್ಷೇತ್ರಕ್ಕೆ ಅನುಕೂಲ ಕಲ್ಪಿಸಲಾಗುವುದು, ರೈತರ ಆರ್ಥಿಕ ಅಭಿವೃದ್ಧಿ ದೃಷ್ಟಿಯಿಂದ ಕೃಷಿಕರಿಗೆ ಅನುಕೂಲವಾಗುವ ಕಾರ್ಯಕ್ರಗಳಿಗೆ ಹೆಚ್ಚು ಒತ್ತು ನೀಡಲಾಗಿದೆ. ತಾಲೂಕಿನ ವಿವಿಧ ಗ್ರಾಮಗಳಲ್ಲಿ50 ರೈತ ಕುಟುಂಬಗಳಿಗೆ ಉಚಿತ ಕೊಳವೆಬಾವಿ ಕೊರೆದು ಪಂಪ್ ಮೋಟಾರ್ ಅಳವಡಿಸಿ ವಿದ್ಯುತ್ ಸಂಪರ್ಕ ಮಾಡಲು 3.5 ಕೋಟಿ ರೂ. ಅನುದಾನ ನೀಡಲಾಗಿದೆ ಎಂದರು.
ಕಳೆದ 2.5 ವರ್ಷಗಳಿಂದ ಕ್ಷೇತ್ರದಲ್ಲಿಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ , ಸಣ್ಣ ನೀರಾವರಿ ಇಲಾಖೆ, ಪರಿಶಿಷ್ಟ ಪಂಗಡಗಳ ಇಲಾಖೆ, ಕೃಷಿ, ತೋಟಗಾರಿಕೆ, ಜಲಸಂಪನ್ಮೂಲ ಇಲಾಖೆಗಳಿಂದ ಕೃಷಿ ಸಂಬಂದಿತ ವಿವಿಧ ಕಾಮಗಾರಿಗಳಿಗೆ 99.80 ಕೋಟಿ ರೂ. ಅನುದಾನ ವಿನಿಯೋಗಿಸಲಾಗಿದೆ ಎಂದರು.
ಬಾಕ್ಸ್ :
224 ಕೊಳವೆಬಾವಿಗಳು: ಸಣ್ಣ ನೀರಾವರಿ ಇಲಾಖೆ, ದೇವರಾಜು ಅರಸು ಅಭಿವೃದ್ಧಿ ನಿಗಮ, ಅಂಬೇಡ್ಕರ್ , ವಾಲ್ಮೀಕಿ ಅಭಿವೃದ್ಧಿ ನಿಗಮಗಳ ವತಿಯಿಂದ 11.6 ಕೋಟಿ ರೂ. ಅನುದಾನ ತಂದು ಬಡ ರೈತರಿಗೆ ಕೊಳವೆಬಾವಿ, ಪಂಪ್ ಮೋಟಾರ್ ಅಳವಡಿಸಿ ವಿದ್ಯುತ್ ಸಂಪರ್ಕ ಕೊಡಿಸಿ ನೀರು ಹರಿಸಲಾಗಿದೆ ಎಂದು ಶಾಸಕ ಕೆ.ಎಚ್ . ಪುಟ್ಟಸ್ವಾಮಿಗೌಡ ತಿಳಿಸಿದರು.
ಬಾಕ್ಸ್ :
ಟಿಸಿ ಅಳವಡಿಕೆಗೆ 11ಕೋಟಿ ರೂ.: ಕ್ಷೇತ್ರದಲ್ಲಿಟಿಸಿಗಳ ದುರಸ್ತಿ ಹಿನ್ನೆಲೆಯಲ್ಲಿ317 ಸ್ಥಳಗಳಲ್ಲಿವಿದ್ಯುತ್ ಸಾಮರ್ಥ್ಯ ಹೆಚ್ಚಿಸಲು ಹಾಗೂ ಹೊಸ ಟಿಸಿ ಅಳವಡಿಸಲು 11 ಕೋಟಿ ರೂ. ವಿನಿಯೋಗಿಸಲಾಗಿದೆ. ನಿರಂತರ ವಿದ್ಯುತ್ ಪೈಲಟ್ ಪ್ರಾಜೆಕ್ಟ್ ಅಡಿ, 255 ವಿದ್ಯುತ್ ಸಂಪರ್ಕ ರಹಿತ ತೋಟದ ಮನೆಗಳಿಗೆ ನಿರಂತರ ವಿದ್ಯುತ್ ಸಂಪರ್ಕ ಒದಗಿಸಲು 2.8 ಕೋಟಿ ರೂ., ಪಶುಭಾಗ್ಯ ಯೋಜನೆ, ಚಾಪ್ ಕಟರ್ , ಕೌ ಮ್ಯಾಟ್ ಹಾಗೂ ಕುರಿ, ಮೇಕೆ ಸಾಗಾಣಿಕೆ ಯೋಜನೆಯಡಿ ಉಚಿತವಾಗಿ 800ಕ್ಕೂ ಅಧಿಕ ಕುಟುಂಬಗಳಿಗೆ ವೈಯಕ್ತಿಕ ಸೌಲಭ್ಯಕ್ಕೆ 1.5 ಕೋಟಿ ರೂ. ವಿನಿಯೋಗಿಸಲಾಗಿದೆ ಎಂದು ಶಾಸಕರು ತಿಳಿಸಿದರು.
ಹನಿ ನೀರಾವರಿ: ತೋಟಗಾರಿಕೆ ಇಲಾಖೆಯಿಂದ ಕ್ಷೇತ್ರದ ವಿವಿಧ ಗ್ರಾಮಗಳ 600 ರೈತರಿಗೆ ಹನಿ ನೀರಾವರಿ ಘಟಕಕ್ಕೆ ಸಹಾಯಧನ ವಿತರಣೆ, 200 ರೈತರಿಗೆ ತೋಟಗಾರಿಕಾ ಪ್ರದೇಶ ವಿಸ್ತರಣೆ, ಕೃಷಿ ಹೊಂಡಗಳು, ಪ್ಯಾಕ್ ಹೌಸ್ , ಈರುಳ್ಳಿ ಶೇಖರಣಾ ಘಟಕ ಹಾಗೂ ಯಂತ್ರೋಪಕರಣ ಕಾರ್ಯಕ್ರಮಗಳಿಗೆ 8 ಕೋಟಿ ರೂ. ವಿನಿಯೋಗಿಸಲಾಗಿದೆ.
ಜಲಾನಯನ ಅಭಿವೃದ್ಧಿ: ಕೃಷಿ ಇಲಾಖೆಯಿಂದ ಹುದುಗೂರು ಉಪ ಜಲಾನಯನ ಅಭಿವೃದ್ಧಿ ಘಟಕದಡಿ ಡಿ. ಪಾಳ್ಯ, ಹುದುಗೂರು, ಬಿ. ಬೊಮ್ಮಸಂದ್ರ, ಗುಲಗಿಂಜಲಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿಮಣ್ಣು ಮತ್ತು ನೀರು ಸಂರಕ್ಷಣಾ ಕಾಮಗಾರಿಗಳು ಮತ್ತು ರೈತರಿಗೆ ವೈಯಕ್ತಿಕ ಸೌಲಭ್ಯಗಳನ್ನು ಒದಗಿಸುವ ಕಾಮಗಾರಿ ಪ್ರಗತಿಯಲ್ಲಿದ್ದು 3.74 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದರು.
ಬಿತ್ತನೆ ಬೀಜ: ಕೃಷಿ ಇಲಾಖೆಯಿಂದ 8,000 ಕುಟುಂಬಗಳಿಗೆ ಬಿತ್ತನೆ ಬೀಜ, ಕೃಷಿ ಯಾಂತ್ರೀಕರಣ, ಹನಿ ಮತ್ತು ತುಂತುರು ನೀರಾವರಿ ಘಟಕ, ಪಿವಿಸಿ ಪೈಪ್ ವಿತರಣೆ, ರಸಗೊಬ್ಬರಗಳು, ಕೀಟನಾಶಕಗಳ ವಿತರಣೆಗೆ 2.33 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.
ಪ್ರೋತ್ಸಾಹ ಧನ: ರೈತರಿಗೆ ಚಾಕಿ ಖರೀದಿಗೆ ಪ್ರೋತ್ಸಾಹ ಧನ, 100 ಮೊಟ್ಟೆ ಖರೀದಿಗೆ 1000 ರೂ., ದ್ವಿತಳಿ ಗೂಡು ಉತ್ಪಾದನೆಗೆ ಸಹಾಯಧನ 1 ಕೆಜಿಗೆ 30 ರೂ., 700 ಕುಟುಂಬಗಳಿಗೆ ವೀಡರ್ , ಬ್ರಶ್ ಕಟರ್ , ನ್ಯಾಪ್ ಸ್ಯಾಕ್ ಸ್ಪ್ರೇಯರ್ , ಪ್ಲಾಸ್ಟಿಕ್ ಚಂದ್ರಿಕೆಗಳು, ಶೆಡ್ ನೆಟ್ ಇತ್ಯಾದಿ ಸಲಕರಣೆಗಳ ವಿತರಣೆಗೆ 5.5 ಕೋಟಿ ರೂ. ವಿತರಿಸಲಾಗಿದೆ ಎಂದರು.
ಸೇತುವೆ ನಿರ್ಮಾಣಕ್ಕೆ 6 ಕೋಟಿ ರೂ.: ಜಲಸಂಪನ್ಮೂಲ ಇಲಾಖೆಯಿಂದ ಹಳೇಊರು ಗ್ರಾಮದಲ್ಲಿಸೇತುವೆ ನಿರ್ಮಾಣ, ಮಟ್ಟಾವಲಹಳ್ಳಿ-ಬಂದಾರ್ಲಹಳ್ಳಿ ಕಲ್ವರ್ಟ್ ನಿರ್ಮಾಣ, ವಾಟದಹೊಸಹಳ್ಳಿ-ಚನ್ನರಾಯನಹಳ್ಳಿ, ಮೇಳ್ಯಾ ಕೆರೆ ಕೋಡಿಯ ಬಳಿ ಸೇತುವೆ ನಿರ್ಮಾಣಕ್ಕೆ 6 ಕೋಟಿ ರೂ. ವಿನಿಯೋಗಿಸಲಾಗಿದೆ.
ಕೋಟ್ ...
ಮಣ್ಣಿನ ಕಣ ಕಣದಲ್ಲೂಬೆವರ ಹನಿ ಬಸಿದು, ಹೊಟ್ಟೆ ಬಟ್ಟೆ ಕಟ್ಟಿ ಭೂಮಿ ತಾಯಿಯ ಹೆಸರು ನೆನೆದು, ನೆಲವೆಲ್ಲಹಸಿರಾಗಿ ಪೈರು ಪಚ್ಚೆಯಾಗುವ ತನಕ ದುಡಿದು, ದೇಶಕ್ಕೆ ಅನ್ನ ಕೊಡುವ ರೈತನೂ ಯೋಧ. ಅವನ ಅವಿರತ ಶ್ರಮಕ್ಕೆ ಬೆಲೆ ಕಟ್ಟಲಾಗದು.
- ಕೆ.ಎಚ್ . ಪುಟ್ಟಸ್ವಾಮಿಗೌಡ, ಶಾಸಕ, ಗೌರಿಬಿದನೂರು ಕ್ಷೇತ್ರ
ದೇಶದ ಜನರ ತುತ್ತಿನ ಚೀಲ ತುಂಬುವ ಕಾಯಕ ಯೋಗಿಗೆ ವಿಕ ಸೂಪರ್ ಸ್ಟಾರ್ ರೈತ ಪ್ರಶಸ್ತಿ ನೀಡಿ ಪುರಸ್ಕರಿಸುತ್ತಿರುವ ವಿಜಯ ಕರ್ನಾಟಕ ಪತ್ರಿಕೆಗೆ ರೈತರ ಮೇಲಿರುವ ಕಾಳಜಿ ಎತ್ತಿ ತೋರುತ್ತದೆ. ವಿಕಗೆ ಅನಂತ ಧನ್ಯವಾದಗಳು. ಪ್ರಶಸ್ತಿ ಸ್ವೀಕರಿಸುತ್ತಿರುವ ರೈತರಿಗೂ ಅಭಿನಂದನೆಗಳು.
-ಕೆ.ಎಚ್ . ಪುಟ್ಟಸ್ವಾಮಿಗೌಡ, ಶಾಸಕ, ಗೌರಿಬಿದನೂರು ಕ್ಷೇತ್ರ
ತಾಲೂಕಿನಲ್ಲಿರೈತರ ಸಮುದಾಯ ಭವನ ನಿರ್ಮಾಣ, ಮಣ್ಣು ಪರೀಕ್ಷಾ ಕೇಂದ್ರ ಸ್ಥಾಪನೆ, ಶೀಥಲೀಕರಣ ಘಟಕ ಸ್ಥಾಪಿಸುವ ಜತೆಗೆ ಜಲಾನಯನ ಯೋಜನೆಗೆ ಹೆಚ್ಚಿನ ಒತ್ತು ನೀಡುವ ಮೂಲಕ ಅಂತರ್ಜಲ ವೃದ್ಧಿಗೆ ಉತ್ತೇಜನ ನೀಡಲಾಗುವುದು.
-ಕೆ.ಎಚ್ . ಪುಟ್ಟಸ್ವಾಮಿಗೌಡ, ಶಾಸಕರು, ಗೌರಿಬಿದನೂರು ಕ್ಷೇತ್ರ
ಎತ್ತಿನಹೊಳೆ ನೀರು: 2027ಕ್ಕೆ ತಾಲೂಕಿಗೆ ಎತ್ತಿನಹೊಳೆ ನೀರನ್ನು ಕೆರೆಗಳಿಗೆ ತುಂಬಿಸುವ ಕೆಲಸ ಮಾಡಲಾಗುವುದು. ವಾಟದಹೊಸಹಳ್ಳಿ ಕೆರೆಗೂ ಎತ್ತಿನಹೊಳೆ ನೀರು ಹರಿಸಿ ನಂತರ ಅಮೃತ್ 2.0 ಯೋಜನೆ ಮೂಲಕ ನಗರಕ್ಕೆ ಕುಡಿಯುವ ನೀರು ತರಲಾಗುವುದು. ತಾಲೂಕಿನ ಜೀವನಾಡಿಯಾಗಿರುವ ಕೆರೆಗಳ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗುವುದು.
- ಕೆ.ಎಚ್ . ಪುಟ್ಟಸ್ವಾಮಿಗೌಡ, ಶಾಸಕರು, ಗೌರಿಬಿದನೂರು
ರೌಂಡ್ ಬಾಕ್ಸ್ :
ತಾಲೂಕಿನ ಸಮಗ್ರ ಅಭಿವೃದ್ಧಿಗೆ ನಾನು ಕಂಕಣಬದ್ಧನಾಗಿದ್ದೇನೆ. ಕ್ಷೇತ್ರದ ಕಟ್ಟಕಡೆಯ ವ್ಯಕ್ತಿಗೂ ಸರಕಾರದ ಸೌಲಭ್ಯಗಳು ಸಿಗುವಂತಾಗಬೇಕು ಎಂಬ ಉದ್ದೇಶದಿಂದ ಶ್ರಮ ವಹಿಸುತ್ತಿದ್ದೇನೆ. ಸೇವಾ ಮನೋಭಾವನೆಯಿಂದ ನಾನು ರಾಜಕಾರಣಕ್ಕೆ ಬಂದವನು, ಯಾವುದೇ ಸ್ವಾರ್ಥಕ್ಕಾಗಿ ಬಂದವನಲ್ಲ. ಕ್ಷೇತ್ರದ ಜನತೆ ನನ್ನನ್ನು ಆದರಿಸಿದ್ದಾರೆ, ಅವರ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವ ಮೂಲಕ ಅವರ ಋುಣ ತೀರಿಸುತ್ತೇನೆ. ಎಲ್ಲವರ್ಗಗಳಿಗೂ ಸರಿಸಮನಾಗಿ ಸ್ಪಂದಿಸುತ್ತಿದ್ದೇನೆ. ಚುನಾವಣೆಗಳು ಬರುತ್ತವೆ ಹೋಗುತ್ತವೆ, ಆದರೆ ನಾವು ಮಾಡುವ ಅಭಿವೃದ್ಧಿ ಕೆಲಸಗಳು ಶಾಶ್ವತವಾಗಿರುತ್ತವೆ.
- ಕೆ.ಎಚ್ . ಪುಟ್ಟಸ್ವಾಮಿಗೌಡ, ಶಾಸಕರು, ಗೌರಿಬಿದನೂರು ಕ್ಷೇತ್ರ
ಚಿತ್ರ 1ಜಿಬಿಡಿ-1
ಶಾಸಕ ಕೆ.ಎಚ್ . ಪುಟ್ಟಸ್ವಾಮಿಗೌಡರು ರೈತರೊಂದಿಗೆ ಸಂಕ್ರಾಂತಿ ಹಬ್ಬ ಆಚರಿಸಿರುವುದು.
ಚಿತ್ರ 1ಜಿಬಿಡಿ-2
ಈ ಹಿಂದೆ ತಾಲೂಕಿನಲ್ಲಿಮೈದುಂಬಿ ಹರಿದ ಉತ್ತರ ಪಿನಾಕಿನಿ ನದಿಗೆ ಶಾಸಕರು ಬಾಗಿನ ಸಮರ್ಪಿಸಿದರು.
ಚಿತ್ರ 1ಜಿಬಿಡಿ-3
ತಾಲೂಕಿನಲ್ಲಿಕುಸಮ್ -ಸಿ ಯೋಜನೆ ಉದ್ಘಾಟನೆ ಸಂದರ್ಭದಲ್ಲಿಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ಶಾಸಕ ಕೆ.ಎಚ್ . ಪುಟ್ಟಸ್ವಾಮಿಗೌಡರು ರೈತರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿರುವುದು.
ಚಿತ್ರ 1ಜಿಬಿಡಿ-4
ರೈತ ಮಹಿಳೆಯ ಆರ್ಥಿಕ ಸ್ವಾವಲಂಬನೆಗೆ ಉಚಿತವಾಗಿ ಕೋಳಿ ಮರಿಗಳ ವಿತರಣೆ.
ಚಿತ್ರ 1ಜಿಬಿಡಿ-5
ಗಂಗಾ ಕಲ್ಯಾಣ ಯೋಜನೆಯ ಫಲಾನುಭವಿ ರೈತರಿಗೆ ಪಂಪ್ ಮೋಟಾರ್ ವಿತರಣೆ.
ಚಿತ್ರ 1ಜಿಬಿಡಿ-6
ಕೆ.ಎಚ್ . ಪುಟ್ಟಸ್ವಾಮಿಗೌಡ, ಶಾಸಕರು

