ವಿಕ ಸುದ್ದಿಲೋಕ ಬೆಳ್ತಂಗಡಿ
ಚಿಕ್ಕಮಗಳೂರು-ದಕ ಜಿಲ್ಲೆಗಳನ್ನು ಸಂಪರ್ಕಿಸುವ ಚಾರ್ಮಾಡಿ ಘಾಟಿಯ 3ನೇ ತಿರುವಿನಲ್ಲಿಬುಧವಾರ ಒಂಟಿ ಸಲಗ ಕಾಣಿಸಿಕೊಂಡಿದ್ದು, ಪ್ರಯಾಣಿಕರಲ್ಲಿಆತಂಕ ಮೂಡಿಸಿದೆ.
ಘಾಟಿ ತಿರುವಿನ ಎತ್ತರದ ಪ್ರದೇಶದಲ್ಲಿನಿಂತಿದ್ದ ಕಾಡಾನೆ ರಸ್ತೆ ಕಡೆ ಇಳಿಯಲು ಜಾಗ ಹುಡುಕುತ್ತಿದ್ದು,ಕೆಳಗಿಳಿಯಲು ಹೆದರಿ ಕೆಲಕಾಲ ಅಲ್ಲೇ ನಿಂತಿತ್ತು. ಮೇಲ್ಭಾಗದಿಂದ ಬೀಳುವ ಭೀತಿಯಿಂದ ಸುರಕ್ಷಿತ ದಾರಿ ಹುಡುಕುತ್ತಿದ್ದ ಸಲಗವನ್ನು ಕಂಡು ವಾಹನ ಸವಾರರು ಭಯಗೊಂಡು ತಮ್ಮ ವಾಹನಗಳನ್ನು ನಿಲ್ಲಿಸಿದರು.
ಘಟನಾ ಸ್ಥಳದಲ್ಲಿಮೊಬೈಲ್ ನೆಟ್ವರ್ಕ್ ಸಮಸ್ಯೆಯಿಂದ ಅರಣ್ಯ ಇಲಾಖೆ ಅಥವಾ ಸಂಬಂಧಪಟ್ಟವರಿಗೆ ಮಾಹಿತಿ ನೀಡಲು ಪ್ರವಾಸಿಗರು ಪರದಾಡಿದರು.
ಚಾರ್ಮಾಡಿ ಘಾಟಿ ಮಾರ್ಗದಲ್ಲಿಸಂಚರಿಸುವವರು ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕು. ವಿಶೇಷÜವಾಗಿ ರಾತ್ರಿ ಹಾಗೂ ಮುಂಜಾನೆ ವೇಳೆಯಲ್ಲಿಹೆಚ್ಚು ಜಾಗ್ರತೆ ವಹಿಸುವಂತೆ ಅರಣ್ಯ ಇಲಾಖೆ ಸೂಚಿಸಿದೆ.
ಎಚ್ಚರ ಅಗತ್ಯ:
ಪ್ರಸ್ತುತ ಅರಣ್ಯ ಭಾಗದಲ್ಲಿಆಹಾರ, ಮತ್ತು ನೀರಿನ ಕೊರತೆಯಿದ್ದು ಕಾಡಾನೆಗಳು ಆಹಾರ ಅರಸುತ್ತಾ ರಸ್ತೆ ಬದಿ, ನದಿಗಳತ್ತ, ಜನ ವಾಸ್ತವ್ಯ ಪ್ರದೇಶಗಳತ್ತ ಬರುತ್ತಿವೆ.
ಚಾರ್ಮಾಡಿ ಘಾಟಿಯಲ್ಲಿಆಗಾಗ ಆನೆಗಳ ಸಂಚಾರ ಕಂಡುಬರುವುದು ಸಾಮಾನ್ಯ. ಕೆಲವೊಮ್ಮೆ ಕಾಡಾನೆಗಳು ರಸ್ತೆಯಲ್ಲೂಠಿಕಾಣಿ ಹೂಡುತ್ತವೆ. ಅಲ್ಲದೆ ರಸ್ತೆ ಬದಿ ಇರುವ ಪೊದೆಗಳಲ್ಲೂಅಡಗಿರುತ್ತವೆ. ಈ ಕಾರಣದಿಂದ ಘಾಟಿ ಭಾಗದಲ್ಲಿಸಂಚರಿಸುವಾಗ ಅಲ್ಲಲ್ಲಿವಾಹನಗಳನ್ನು ನಿಲ್ಲಿಸುವುದು ಅಪಾಯಕಾರಿ.
ಪ್ರಸ್ತುತ ರಜಾ ದಿನ, ಕಾರ್ಯಕ್ರಮಗಳ ಸಂಖ್ಯೆಯು ಅಧಿಕವಿದ್ದು ವಾಹನಗಳ ಭರಾಟೆ ಹೆಚ್ಚಿದೆ.
29ಎಂಜೆ ಆನೆ ಘಾಟಿ.
ಚಿತ್ರ ವಿವರ-
ಚಾರ್ಮಾಡಿ ಘಾಟಿಯ ಮೂರನೇ ತಿರುವಿನ ಪರಿಸರದಲ್ಲಿಕಂಡು ಬಂದ ಒಂಟಿ ಸಲಗ.

