ರಾಜ್ಯಮಟ್ಟದ ಸಾಹಿತ್ಯ ಸೌರಭ ಕಾರ ್ಯಕ್ರಮ

Contributed bysri.vknews@gmail.com|Vijaya Karnataka

ಮಾಸ್ತಿ ಗ್ರಾಮದಲ್ಲಿ ಜ್ಞಾನಗಂಗಾ ಸಾಹಿತ್ಯ ಹಾಗೂ ಸಾಂಸ್ಕೃತಿಕ ರಂಗ, ಈರಮ್ಮ ನಾಗರಾಜಪ್ಪ ಪ್ರತಿಷ್ಠಾನ, ಮಣ್ಣೆ ಮೋಹನ್‌ ಪುಸ್ತಕ ಮಾಲೆ ಮತ್ತು ಪರಿಮಳ ಪ್ರಕಾಶನ ವತಿಯಿಂದ ರಾಜ್ಯಮಟ್ಟದ ಸಾಹಿತ್ಯ ಸೌರಭ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಎಲೆಮರೆ ಕಾಯಿಯಂತಿರುವ ಕವಿ, ಸಾಹಿತಿಗಳನ್ನು ಗುರುತಿಸಿ ಅವರ ಸಾಹಿತ್ಯವನ್ನು ನಾಡಿಗೆ ಪರಿಚಯಿಸಲಾಯಿತು. ಉದಯೋನ್ಮುಖ ಬರಹಗಾರರಿಗೆ ವೇದಿಕೆ ಕಲ್ಪಿಸಿ, ಗ್ರಾಮೀಣ ಕಲೆ ಮತ್ತು ಪ್ರತಿಭೆಗಳನ್ನು ಪೋಷಿಸಲಾಯಿತು. ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಅನೇಕ ಕೃತಿಗಳನ್ನು ಲೋಕಾರ್ಪಣೆಗೊಳಿಸಲಾಯಿತು.

inauguration of state level literary aroma program

ರಾಜ್ಯಮಟ್ಟದ ಸಾಹಿತ್ಯ ಸೌರಭ ಕಾರ ್ಯಕ್ರಮ

ವಿಕ ಸುದ್ದಿಲೋಕ ಲಕ್ಕೂರು

ಜ್ಞಾನಗಂಗಾ ಸಾಹಿತ್ಯ ಹಾಗೂ ಸಾಂಸ್ಕೃತಿಕ ರಂಗ ಅಭಿಯಾನದ ಮೂಲಕ ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿಎಲೆಮರೆ ಕಾಯಿಯಂತಿರುವ ಕವಿಗಳು, ಸಾಹಿತಿಗಳ ಸಾಹಿತ್ಯವನ್ನು ವೇದಿಕೆಯ ಮೂಲಕ ನಾಡಿಗೆ ಪರಿಚಯಿಸುವ ಕೆಲಸ ಮಾಡಲಾಗುತ್ತಿದೆ ಎಂದು ಲೇಖಕ, ಚಿಂತಕ, ಅಂಕಣಕಾರ ಮಣ್ಣೆ ಮೋಹನ್ ಹೇಳಿದರು.

ಮಾಸ್ತಿ ಗ್ರಾಮದ ಡಾ.ಮಾಸ್ತಿ ವೆಂಕಟೇಶ ಅಯ್ಯಂಗಾರ್ ಪೆರಿಯಾತ್ ಗ್ರಂಥಾಲಯದ ಸಭಾಂಗಣದಲ್ಲಿಜ್ಞಾನಗಂಗಾ ಸಾಹಿತ್ಯ ಹಾಗೂ ಸಾಂಸ್ಕೃತಿಕ ರಂಗ, ಈರಮ್ಮ ನಾಗರಾಜಪ್ಪ ಪ್ರತಿಷ್ಠಾನ, ಮಣ್ಣೆ ಮೋಹನ್ ಪುಸ್ತಕ ಮಾಲೆ ಮತ್ತು ಪರಿಮಳ ಪ್ರಕಾಶನ ವತಿಯಿಂದ ರಾಜ್ಯಮಟ್ಟದ ಸಾಹಿತ್ಯ ಸೌರಭ ಕಾರ ್ಯಕ್ರಮವನ್ನು ಉದ್ಟಾಟಿಸಿ ಮಾತನಾಡಿದರು.

ಸಂಸ್ಥೆಯ ವತಿಯಿಂದ ಕವನ ಸ್ಪರ್ಧೆಗಳು ಹಾಗೂ ಸಾಹಿತ್ಯಿಕ ಕಾರ ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ಉದಯೋನ್ಮುಖ ಬರಹಗಾರರಿಗೆ ವೇದಿಕೆ ಕಲ್ಪಿಸುತ್ತದೆ. ಈ ಸಂಸ್ಥೆಯು ಸಾಹಿತ್ಯದ ಮೂಲಕ ಗ್ರಾಮೀಣ ಕಲೆ ಮತ್ತು ಪ್ರತಿಭೆಗಳನ್ನು ಪೋಷಿಸುವಲ್ಲಿನಿರತವಾಗಿದೆ ಎಂದರು.

ತಾ.ಕಸಾಪ ಅಧ್ಯಕ್ಷ ಎಂ.ವಿ.ಹನುಮಂತಪ್ಪ ಮಾತನಾಡಿದರು. ಕಾರ ್ಯಕ್ರಮವನ್ನು ಕುರಿತು ವಕೀಲ, ಸಾಹಿತಿ ರವೀಂದ್ರ ಬಿ.ಆರ್ .(ರಾಣಾ), ವಿ.ಜಿ.ಎಜುಕೇಶನ್ , ಲೈಫ್ ಸ್ಕಿಲ್ ಹಾಸ್ಪಿಟಾಲಿಟಿ ಮುಖ್ಯಸ್ಥ ಡಾ.ಪಿ.ಜಿ.ಗಿರಿ, ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ ಜಯಮಂಗಲ ಚಂದ್ರಶೇಖರ್ , ಬಂಡಾಯ ಸಾಹಿತಿ ಮಾಸ್ತಿ ಜಗನ್ನಾಥ್ , ಇಂಚರ ನಾರಾಯಣಸ್ವಾಮಿ ಇನ್ನಿತರರು ಮಾತನಾಡಿದರು.

ಕಾರ ್ಯಕ್ರಮದಲ್ಲಿಕವಿಗಳಾದ ಶ್ರೀನಾಥ್ , ಮೂರ್ತಿ, ಗುರುಸಿದ್ದಪ್ಪ, ಸಿ.ಡಿ.ಕೃಷ್ಣಮೂರ್ತಿ, ಶ್ವೇತ ನಾಗರಾಜ್ , ನಾನಿ, ಸುಮಲತಾ ಬನ್ನೂರು, ರತ್ನ ತುಮಕೂರು, ಲಲಿತಾ ಬಿಟ್ಟಿರಾ, ಸಿ.ಎಂ.ನಂಜುಂಡಪ್ಪ (ಪಾಸ್ವಾನ್ ), ಸಿದ್ದಗಂಗಪ್ಪ, ಪ್ರೇಮ್ ಕುಮಾರ್ , ರೇಣು ಬಾಶೆಟ್ಟಿಹಳ್ಳಿ, ಶಿವಪ್ಪ, ಹೂವಿಗಣ್ಣಾ ರಾಜು, ಚೈತ್ರ ದಾವಣಗೆರೆ, ನಂಜುಂಡಪ್ಪ, ಗಂಗಾಧರ್ , ರಾಮಣ್ಣ, ವಿನಾಯಕ ಹುನಗುಂದ, ಸೌಂದರ್ಯ, ರವಿಕುಮಾರ್ , ವರ್ಷ.ಎಂ, ಸುಚಿ ಹಾಜರಿದ್ದರು.

28 ಲಕ್ಕೂರು ಪೋಟೊ 2. ಮಾಲೂರು ತಾಲೂಕಿನ ಮಾಸ್ತಿ ಗ್ರಾಮದ ಡಾ.ಮಾಸ್ತಿ ವೆಂಕಟೇಶ ಅಯ್ಯಂಗಾರ್ ಪೆರಿಯಾತ್ ಗ್ರಂಥಾಲಯದ ಸಭಾಂಗಣದಲ್ಲಿಜ್ಞಾನಗಂಗಾ ಸಾಹಿತ್ಯ ಹಾಗೂ ಸಾಂಸ್ಕೃತಿಕ ರಂಗ, ಈರಮ್ಮ ನಾಗರಾಜಪ್ಪ ಪ್ರತಿಷ್ಠಾನ, ಮಣ್ಣೆ ಮೋಹನ್ ಪುಸ್ತಕ ಮಾಲೆ ಮತ್ತು ಪರಿಮಳ ಪ್ರಕಾಶನ ವತಿಯಿಂದ ರಾಜ್ಯಮಟ್ಟದ ಸಾಹಿತ್ಯ ಸೌರಭ ಕಾರ ್ಯಕ್ರಮವನ್ನು ಉದ್ಟಾಟಿಸಿದ ಗಣ್ಯರು ಹಲವು ಕೃತಿಗಳನ್ನು ಲೋಕಾರ್ಪಣೆ ಗೊಳಿಸಿದರು.