ನಾಲ್ವರ ಸಾವಿಗೆ ಕಾರಣವಾಯಿತೆ ಕಲ್ಲಂಗಡಿ?

Contributed byBeeralinge gowda|Vijaya Karnataka

ಮುಂಬೈಯಲ್ಲಿ ಕಲ್ಲಂಗಡಿ ಹಣ್ಣು ಸೇವಿಸಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ಅಬ್ದುಲ್ಲಾ, ನಸ್ರೀನ್ ಮತ್ತು ಅವರ ಇಬ್ಬರು ಮಕ್ಕಳಲ್ಲಿ ಈ ದುರ್ಘಟನೆ ಸಂಭವಿಸಿದೆ. ಬಿರಿಯಾನಿ ಸೇವಿಸಿದ ಬಳಿಕ ಕಲ್ಲಂಗಡಿ ತಿಂದಿದ್ದರು. ನಂತರ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೆ ನಾಲ್ವರೂ ಸಾವನ್ನಪ್ಪಿದ್ದಾರೆ. ಮರಣೋತ್ತರ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ. ಸಾವಿಗೆ ನಿಖರ ಕಾರಣ ಇನ್ನಷ್ಟೇ ತಿಳಿಯಬೇಕಿದೆ.

suspicion of inhumane death of four due to consumption of snake fruit

ಮುಂಬಯಿ: ಕಲ್ಲಂಗಡಿ ಹಣ್ಣು ಸೇವಿಸಿ ಅನುಮಾನಸ್ಪದವಾಗಿ ಮೃತಪಟ್ಟ ಒಂದೇ ಕುಟುಂಬದ ನಾಲ್ವರ ಸಾವಿನ ಪ್ರಕರಣದ ನಿಗೂಢತೆ ಇನ್ನೂ ಮುಂದುವರಿದಿದೆ. ಪ್ರಾಥಮಿಕ ಮೂಲಗಳ ಪ್ರಕಾರ ಕಲ್ಲಂಗಡಿ ಹಣ್ಣಿನ ಫುಡ್ ಪಾಯ್ಸನ್ ನಿಂದ ಸಾವಿಗೀಡಾರುವ ಶಂಕೆ ವ್ಯಕ್ತವಾಗಿದೆ.

ನಾಲ್ವರ ಮರಣೋತ್ತರ ವರದಿ ನಿರೀಕ್ಷಿಸಲಾಗಿದ್ದು, ವರದಿ ಬಂದ ಬಳಿಕ ಸಾವಿನ ನಿಖರ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಏಪ್ರಿಲ್ 25 ರಂದು ಮನೆಯಲ್ಲಿನಡೆದ ಕಾರ್ಯಕ್ರಮ ಒಂದರಲ್ಲಿಮೃತ ಅಬ್ದುಲ್ಲಾ, ಪತ್ನಿ ನಸ್ರೀನ್ , ಮಕ್ಕಳಾದ ಆಯೇಷಾ, ಜೈನಾಬ್ ಅವರು ಬಿರ್ಯಾನಿ ಸೇವಿಸಿದ್ದರು. ರಾತ್ರಿ 10.30ರ ಬಳಿಕ ಕಲ್ಲಗಂಡಿ ಹಣ್ಣು ಸೇವಿಸಿ ಮಲಗಿದ್ದರು. ಏಪ್ರಿಲ್ 26ರ ಮುಂಜಾನೆ ವೇಳೆ ಅನಾರೋಗ್ಯಕ್ಕೆ ತುತ್ತಾಗಿದ್ದರು. ಕೂಡಲೇ ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ನೀಡಲಾಯಿತು. ಆದರೆ, ಚಿಕಿತ್ಸೆ ಫಲಿಸದೇ ನಾಲ್ವರು ಮೃತಪಟ್ಟಿದ್ದರು.