ದಿನಭವಿಷ್ಯ 30 ಏಪ್ರಿಲ್ 2026

Contributed bynetravati.krishnamurthy@timesgroup.com|Vijaya Karnataka

ಏಪ್ರಿಲ್ 30, 2026 ರಂದು ಮೇಷ ರಾಶಿಯ ವಿದ್ಯಾರ್ಥಿಗಳು ಪ್ರಗತಿ ಸಾಧಿಸುವರು. ವೃಷಭ ರಾಶಿಯವರಿಗೆ ಅವಕಾಶಗಳು ಬರಲಿವೆ. ಮಿಥುನ ರಾಶಿಯವರು ಒತ್ತಡ ನಿಭಾಯಿಸುವರು. ಕಟಕ ರಾಶಿಯವರು ಎಚ್ಚರದಿಂದ ಇರಬೇಕು. ಸಿಂಹ ರಾಶಿಯವರಿಗೆ ಸಂತಾನ ಭಾಗ್ಯದ ಸುದ್ದಿ ಬರಲಿದೆ. ಕನ್ಯಾ ರಾಶಿಯವರು ಭಿನ್ನಾಭಿಪ್ರಾಯ ದೂರ ಮಾಡುವರು. ತುಲಾ ರಾಶಿಯವರು ಮಾತಿನಿಂದ ಕಾರ್ಯ ಸಾಧಿಸುವರು. ವೃಶ್ಚಿಕ ರಾಶಿಯವರು ಬದಲಾವಣೆ ಮಾಡಿಕೊಳ್ಳುವರು. ಧನು ರಾಶಿಯವರಿಗೆ ನಾಯಕತ್ವದ ಅವಕಾಶ ಸಿಗಲಿದೆ. ಮಕರ ರಾಶಿಯವರು ದಾನ-ಧರ್ಮ ರೂಢಿಸಿಕೊಳ್ಳುವರು. ಕುಂಭ ರಾಶಿಯವರಿಗೆ ಪ್ರತಿಫಲ ದೊರೆಯಲಿದೆ.

spiritual daily horoscope april 30 2026

ದಿನಭವಿಷ್ಯ 30 ಏಪ್ರಿಲ್ 2026

ಶ್ರೀಪತಿ ಭಟ್ | ಬೆಂಗಳೂರು

(ಕಟಕ, ಧನು, ಮಕರ-ಈ ರಾಶಿಯವರಿಗೆ ಮನೆ ದೇವರ ದರ್ಶನ ಪ್ರಾಪ್ತಿ ಯೋಗ)

-----------------------

ಮೇಷ : ವಿದ್ಯಾರ್ಥಿಗಳ ಅಧ್ಯಯನದಲ್ಲಿಪ್ರಗತಿ ಇರಲಿದೆ. ಹಿರಿಯರ ಅಥವಾ ಗುರುಗಳ ಸಲಹೆಗಳನ್ನು ಸ್ವೀಕರಿಸಿ. ಅಧಿಕಾರಿಗಳ ಖಾಸಗಿ ಸಂಪರ್ಕದಿಂದ ಕೆಲಸಗಳಿಗೆ ಪುಷ್ಟಿ ದೊರೆಯಲಿದೆ.

(ಶುಭ ಸಂಖ್ಯೆ : 2, ಅದೃಷ್ಟ ಬಣ್ಣ : ಹಸಿರು)

----------

ವೃಷಭ : ಅವಕಾಶಗಳು ಆರಿಸಿ ಬಂದರೂ ಸರಿಯಾದುದನ್ನು ಆಯ್ಕೆ ಮಾಡುವುದರಲ್ಲಿದುಡುಕುವ ಲಕ್ಷಣಗಳಿವೆ. ನಿಶ್ಚಿತ ರೂಪದಲ್ಲಿಸಮಯಕ್ಕೆ ಸರಿಯಾಗಿ ಕೆಲಸಗಳು ಜರುಗಲಿವೆ. ಕೃಷಿ ಉತ್ಪನ್ನಗಳಿಂದ ಉತ್ತಮ ಆದಾಯವಿದೆ.

(ಶುಭ ಸಂಖ್ಯೆ : 2, ಅದೃಷ್ಟ ಬಣ್ಣ : ಗುಲಾಬಿ)

--------------

ಮಿಥುನ: ಅಡ್ಡಿ-ಆತಂಕ, ಭೀತಿ ಮತ್ತು ಮನೋವ್ಯಾಕುಲಗಳಿಗೆ ಹೆದರುವ ಅವಶ್ಯಕತೆ ಇಲ್ಲ. ಮದುವೆ ವಿಷಯಗಳತ್ತ ಗಮನ ಹರಿಸುವಂತೆ ಮನೆಯವರಿಂದ ಒತ್ತಡ ಬರಲಿದೆ. ಕುಟುಂಬದಲ್ಲಿಪರಿಸ್ಥಿತಿ ನಿಭಾಯಿಸುವಿರಿ.

(ಶುಭ ಸಂಖ್ಯೆ : 4, ಅದೃಷ್ಟ ಬಣ್ಣ : ಆಕಾಶ ನೀಲಿ)

----------

ಕಟಕ : ವ್ಯವಹಾರಕ್ಕೆ ಸಂಬಂಧಿಸಿದಂತೆ ಔದಾರ್ಯ ಬುದ್ಧಿಯನ್ನು ತೋರಿದಲ್ಲಿವಂಚನೆಗೆ ಒಳಗಾಗುವ ಸನ್ನಿವೇಶಗಳಿವೆ. ಯಂತ್ರೋಪಕರಣಗಳ ಮಾರಾಟದಿಂದ ಮತ್ತು ಅದರ ಸೇವೆಯಿಂದ ಲಾಭ ಪಡೆಯುವಿರಿ.

(ಶುಭ ಸಂಖ್ಯೆ : 4, ಅದೃಷ್ಟ ಬಣ್ಣ : ಕಪ್ಪು)

-------------

ಸಿಂಹ : ದೈವಾನುಗ್ರಹದಿಂದ ಸಂತಾನ ಭಾಗ್ಯದ ಸುದ್ದಿ ಕೇಳುವಿರಿ. ಅದರ ಫಲವಾಗಿ ಮನೆಯಲ್ಲಿಸಡಗರದ ವಾತಾವರಣ ಸೃಷ್ಟಿಯಾಗಲಿದೆ. ಯೋಗ ಕಲಿಸಿಕೊಡುವವರಿಗೆ ಕೀರ್ತಿ ಸಂಪಾದನೆಯಾಗಲಿದೆ.

(ಶುಭ ಸಂಖ್ಯೆ : 1, ಅದೃಷ್ಟ ಬಣ್ಣ : ಹಳದಿ)

--------------

ಕನ್ಯಾ : ಪರಿಸ್ಥಿತಿಗೆ ಹೊಂದಿಕೊಂಡು ಹೋಗುವ ಗುಣದಿಂದ ವಿವಾಹಕ್ಕೆ ಸಂಬಂಧಪಟ್ಟ ಭಿನ್ನಾಭಿಪ್ರಾಯವನ್ನು ದೂರ ಮಾಡಿಕೊಳ್ಳುವಿರಿ. ಒಳ್ಳೆಯ ಸ್ನೇಹಪರ ವರ್ತನೆಯಿಂದ ಅಕ್ಕ-ಪಕ್ಕದವರಲ್ಲಿಬಾಂಧವ್ಯ ಬೆಳೆಯಲಿದೆ.

(ಶುಭ ಸಂಖ್ಯೆ : 7, ಅದೃಷ್ಟ ಬಣ್ಣ : ಕೆಂಪು)

----------

ತುಲಾ : ಮಾತಿನಿಂದ ಕಾರ್ಯ ಸಾಧಿಸುವ ಗುಣದಿಂದ ಅನುಕೂಲಕರ ವಾತಾವರಣ ಕಾಣುವಿರಿ. ಶ್ರೀ ಆಂಜನೇಯ ಸಹಿತ ಶ್ರೀ ರಾಮಚಂದ್ರನನ್ನು ಮನಪೂರ್ವಕವಾಗಿ ಪೂಜಿಸಿದರೆ ಫಲ ಪ್ರಾಪ್ತಿ.

(ಶುಭ ಸಂಖ್ಯೆ : 3, ಅದೃಷ್ಟ ಬಣ್ಣ : ನೀಲಿ)

--------------

ವೃಶ್ಚಿಕ :ಆಂತರಿಕ ಸಮಸ್ಯೆ ಬಗೆಹರಿಯಬೇಕಾದರೆ ಸಣ್ಣ-ಪುಟ್ಟ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುವುದು. ದಾಂಪತ್ಯದಲ್ಲಿಆಗಾಗ ಸಮಸ್ಯೆಗಳು ತೋರಿಬಂದರೂ ಮುಂದಿನ ದಿನಗಳಲ್ಲಿಸಂತಸವಿದೆ.

(ಶುಭ ಸಂಖ್ಯೆ :5, ಅದೃಷ್ಟ ಬಣ್ಣ : ಕೇಸರಿ)

--------------

ಧನು : ಹಿರಿಯರ ಆರೋಗ್ಯದಲ್ಲಿಚೇತರಿಕೆ ಕಂಡುಬರುವುದು. ನಾಯಕತ್ವದ ಗುಣಗಳನ್ನು ಪ್ರದರ್ಶಿಸಲು ವೇದಿಕೆ ಸಿಗಲಿದೆ. ಏರುಪೇರಾಗಿದ್ದ ವ್ಯವಹಾರಗಳನ್ನು ಉತ್ತಮ ರೀತಿಯಲ್ಲಿಸರಿಪಡಿಸಿಕೊಳ್ಳಿ.

(ಶುಭ ಸಂಖ್ಯೆ :6, ಅದೃಷ್ಟ ಬಣ್ಣ : ಬಿಳಿ)

------------

ಮಕರ : ದವಸ ಧಾನ್ಯಗಳ ವ್ಯಾಪಾರಸ್ಥರು ಎಚ್ಚರಿಕೆಯಿಂದ ಇದ್ದರೆ ಬಂಡವಾಳದ ಮೂಲಧನವನ್ನು ಕಾಪಾಡಿಕೊಳ್ಳಲು ಸಾಧ್ಯ. ದಾನ-ಧರ್ಮ ಪ್ರವೃತ್ತಿಯನ್ನು ರೂಢಿಸಿಕೊಳ್ಳುವುದರಿಂದ ಶುಭ ಫಲಗಳು ಅನುಭವಕ್ಕೆ ಬರಲಿವೆ.

(ಶುಭ ಸಂಖ್ಯೆ : 2, ಅದೃಷ್ಟ ಬಣ್ಣ : ಖಾಕಿ)

---------------

ಕುಂಭ :ಪರಿಶ್ರಮಕ್ಕೆ ಮತ್ತು ಪರೋಪಕಾರದ ವ್ಯಕ್ತಿತ್ವಕ್ಕೆ ತಕ್ಕ ಪ್ರತಿಫಲ ಹೊಂದುವಿರಿ. ಸಂಗೀತದಲ್ಲಿನ ಆಸಕ್ತಿಗೆ ಮನೆಯವರಿಂದ ಪ್ರೋತ್ಸಾಹ ಸಿಗಲಿದೆ. ಸಂಪಾದನೆ ಕಡಿಮೆ ಇದ್ದರೂ ಚಿಂತೆ ಇರದು.

(ಶುಭ ಸಂಖ್ಯೆ :8, ಅದೃಷ್ಟ ಬಣ್ಣ : )

-------------

ಮೀನ : ಪೆಟ್ರೋಲಿಯಂದ ಉತ್ಪನ್ನಗಳ ಮಾರಾಟದಿಂದ ಆದಾಯದ ಜತೆಯಲ್ಲಿಸಾಗಣಿಕೆಯಲ್ಲಿಸಮಸ್ಯೆಗಳೂ ಕಾಣಬಹುದು. ಗೃಹ ನಿರ್ಮಾಣದ ಕೆಲಸವನ್ನು ಆರಂಭಿಸಲು ಸೂಕ್ತ ಸಮಯವನ್ನು ತಿಳಿದುಕೊಳ್ಳುವಿರಿ.

(ಶುಭ ಸಂಖ್ಯೆ : 1, ಅದೃಷ್ಟ ಬಣ್ಣ : ಆಲೀವ್ )