ವಿಕ ಸುದ್ದಿಲೋಕ ಶೃಂಗೇರಿ
ಬೆಂಗಳೂರಿನಲ್ಲಿಇತ್ತೀಚೆಗೆ ಸಿಇಟಿ ಪರೀಕ್ಷೆಗೆ ಹಾಜರಾಗುವ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿರುವುದನ್ನು ಖಂಡಿಸಿ ಮೇ 5ರಂದು ಪಟ್ಟಣದಲ್ಲಿಪ್ರತಿಭಟನೆ ಹಾಗೂ ಬಂದ್ ನಡೆಸಲಾಗುತ್ತದೆ ಎಂದು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಬಿ.ಎಲ್ .ರವಿಕುಮಾರ್ ಹೇಳಿದರು.
ಪಟ್ಟಣದ ವಿದ್ಯಾಭಾರತೀ ಭವನದಲ್ಲಿಮಂಗಳವಾರ ಬ್ರಾಹ್ಮಣ ಮಹಾಸಭಾ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿಮಾತನಾಡಿದರು.
ಬ್ರಾಹ್ಮಣರ ಬಗ್ಗೆ ಪದೇಪದೆ ಇಂತಹ ಅವಹೇಳನಕಾರಿ ಘಟನೆಗಳು ನಡೆಯುತ್ತಲೇ ಇವೆ. ಮುಂದಿನ ದಿನಗಳಲ್ಲಿಇಂತಹ ಘಟನೆ ನಡೆಯದಂತೆ ಕಠಿಣ ಕಾನೂನು ರೀತ್ಯಾ ಶಿಕ್ಷೆ ವಿಧಿಸಲು ಸರಕಾರ ಬದ್ಧವಾಗಿರಬೇಕು ಎಂದರು.
ಮುಖಂಡರಾದ ಅಂಬಲೂರು ರಾಮಕೃಷ್ಣರಾವ್ ಮಾತನಾಡಿ, ಘಟನೆಯನ್ನು ಇಡೀ ಬ್ರಾಹ್ಮಣ ಸಮುದಾಯ ಖಂಡಿಸುತ್ತದೆ ಎಂದರು.
ಮಹಾಬಲ ಭಿಡೆ ಮಾತನಾಡಿ, ಮೇ 5ರಂದು ನಡೆಯುವ ಪ್ರತಿಭಟನೆಗೆ ಎಲ್ಲಬ್ರಾಹ್ಮಣ ಸಮುದಾಯ ಸಂಘಟನೆ, ವಿಶ್ವಕರ್ಮ ಸಮಾಜ, ಆರ್ಯ ವೈಶ್ಯ ಸಮಾಜ, ಗೌಡ ಸಾರಸ್ವತ, ದೈವಜ್ಞ ಬ್ರಾಹ್ಮಣ ಹಾಗೂ ವಿವಿಧ ಮಹಿಳಾ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ವಿದ್ಯಾಭಾರತೀ ಭವನದಿಂದ ಪಟ್ಟಣದ ಪ್ರಮುಖ ಬೀದಿಯಲ್ಲಿಪ್ರತಿಭಟನಾ ಮೆರವಣಿಗೆ ತೆರಳಿ ನಂತರ ತಾಲೂಕು ಕಚೇರಿಯಲ್ಲಿತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಗುತ್ತದೆ ಎಂದರು.
ಸಭೆಯಲ್ಲಿಕೆ.ಎಂ.ರಮೇಶ್ ಭಟ್ . ಬಂಡ್ಲಾಪುರ ಶ್ರೀಧರರಾವ್ . ಬೆಟ್ಟಗದ್ದೆ ಸುಧೀಂದ್ರ, ಸುಮಂಗಲ ಆನಂದಸ್ವಾಮಿ, ವಿಶ್ವಕರ್ಮ ಸಮಾಜದ ಅಧ್ಯಕ್ಷ ದೇವರಾಜ್ ಮತ್ತಿತರರು ಇದ್ದರು.
28ಶ್ರೀ1
ಶೃಂಗೇರಿಯ ವಿದ್ಯಾಭಾರತಿ ಭವನದಲ್ಲಿಬ್ರಾಹ್ಮಣ ಮಹಾಸಭಾ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿಅಧ್ಯಕ್ಷ ಬಿ.ಎಲ್ ರವಿಕುಮಾರ್ ಮಾತನಾಡಿದರು.

