ವಿಕ ಕರುನಾಡ ಸ್ವಾದದಲ್ಲಿಸಿಕ್ಕ ರುಚಿ ಖಜಾನೆ
-ಗ್ರ್ಯಾಂಡ್ ಫಿನಾಲೆಯಲ್ಲಿಚನ್ನಪಟ್ಟಣದ ಅಶ್ವಿನಿ ಸಿ. ಪ್ರಥಮ | ಉಡುಪಿಯ ಸಂಧ್ಯಾ ಬಿ.ಎಸ್ . ಮೊದಲ ರನ್ನರ್ ಅಪ್ | ಭದ್ರಾವತಿಯ ಪ್ರೇಮಲತಾ ಬಿ.ಎಂ. ದ್ವಿತೀಯ ರನ್ನರ್ ಅಪ್
-26 ಫೈನಲಿಸ್ಟ್ ಗಳಿಂದ ಕರುನಾಡಿನ ಕಳೆದುಹೋಗಿರುವ ಖಾದ್ಯಗಳ ಸುಂದರ ಪ್ರಸ್ತುತಿ
ಲವಲವಿಕೆ ಸುದ್ದಿಲೋಕ
ಕರುನಾಡಿನ ಕಳೆದುಹೋಗಿರುವ ಖಾದ್ಯ ವೈವಿಧ್ಯಗಳನ್ನು ಪರಿಚಯಿಸುವ ಮತ್ತು ಅಡುಗೆಯ ಹೊಸ ಕೋಚ್ ಹುಡುಕಾಟದ ಉದ್ದೇಶದಿಂದ ವಿಜಯ ಕರ್ನಾಟಕ ಆರಂಭಿಸಿದ್ದ ವಿಕ ಕರುನಾಡ ಸ್ವಾದ 2026 ಯಶಸ್ವಿಯಾಗಿ ಸಂಪನ್ನಗೊಂಡಿದೆ. ಬೆಂಗಳೂರಿನ ರಾಜಾಜಿನಗರ ಕೆಎಲ್ ಇ ಕಾಲೇಜ್ ನಲ್ಲಿಭಾನುವಾರ ನಡೆದ ಪ್ರತಿಷ್ಠಿತ ವಿಕ ಕರುನಾಡ ಸ್ವಾದ ಅಡುಗೆ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆಯಲ್ಲಿಚನ್ನಪಟ್ಟಣದ ಅಶ್ವಿನಿ ಸಿ. ಪ್ರಥಮ ವಿಜೇತರಾಗಿದ್ದಾರೆ. ಇವರು ಸ್ಥಳದಲ್ಲಿಯೇ ತಯಾರಿಸಿದ ಅನ್ನ ಮತ್ತು ಸೊಪ್ಪು ಬಸ್ಸಾರು, ಆವರಿಕೆ ಹೂವಿನ ಪಾಯಸ, ಸುಂಡಕ್ಕಾಯಿ ಪಕೋಡಾ (ಟರ್ಕಿ ಬೆರ್ರಿ) ಮಂಡ್ಯ ಕಡೆ ಈ ಹಿಂದೆ ಅಡುಗೆಯಲ್ಲಿಬಳಕೆಯಲ್ಲಿದ್ದ ಮತ್ತು ಮಧುಮೇಹಕ್ಕೆ ಅತ್ಯುತ್ತಮ ಎನ್ನಲಾಗಿರುವ ಆವರಿಕೆ ಹೂವು, ಸುಂಡಕ್ಕಾಯಿಯನ್ನು ಪರಿಚಯಿಸಿ ತೀರ್ಪುಗಾರರಿಂದ ಸೈ ಅನಿಸಿಕೊಂಡವು.
ಉಡುಪಿಯ ಸಂಧ್ಯಾ ಬಿ.ಎಸ್ . ದ್ವಿತೀಯ ವಿಜೇತರಾಗಿದ್ದು, ಇವರು ತಯಾರಿಸಿದ ಕೋಸ್ಟಲ್ ಪುಂಡಿ ಡಿಲೈಟ್ , ಆಮ್ ಮನೋಹರ ಮತ್ತು ನ್ಯೂಟ್ರಿಷಿಯನ್ ಸೋಯಾ ಖಾದ್ಯಗಳಲ್ಲಿತೀರ್ಪುಗಾರರಿಗೆ ಆಮ್ ಮನೋಹರ ಕಳೆದುಹೋಗಿರುವ ಖಾದ್ಯವೊಂದನ್ನು ಹಾಗೂ ಪುಂಡಿಯು ಕರಾವಳಿ ಭಾಗದ ರುಚಿ ಸೊಗಡನ್ನು ಪರಿಚಯಿಸಿದವು. ಭದ್ರಾವತಿಯ ಪ್ರೇಮಲತಾ ಬಿ.ಎಂ. ತೃತೀಯ ವಿಜೇತರಾಗಿದ್ದು, ಇವರು ನವಣೆ ಅಕ್ಕಿ ಹೆಸರಿನ ಕಿಚಡಿ, ಸಿಹಿ ಕುಂಬಳಗಾಯಿ ಸಾಮೆ ನುಚ್ಚಿನ ಹಬೆ ಕಡುಬು, ಮಸಾಲ ಬೆಂಡೆಕಾಯಿ ಸ್ಟಫ್ ್ಡ ಬಜ್ಜಿ ತಯಾರಿಸಿ ಹಿಂದಿನ ಕಾಲದ ಅಡುಗೆಯಲ್ಲಿಹೆಚ್ಚು ಬಳಕೆಯಲ್ಲಿದ್ದ ಹಾಗೂ ಇತ್ತೀಚಿನವರೆಗೂ ಮರೆತೇಹೋಗಿದ್ದ ಸಿರಿಧಾನ್ಯಗಳು ಈಗಿನವರಿಗೂ ಅತ್ಯಗತ್ಯ ಎಂದು ನಿರೂಪಿಸಿ ತೀರ್ಪುಗಾರರ ಗಮನ ಸೆಳೆದರು.
ವಿಕ ಕರುನಾಡ ಸ್ವಾದ ಗ್ರ್ಯಾಂಡ್ ಫಿನಾಲೆಗೆ ಕರ್ನಾಟಕದ ಹಲವಾರು ಪ್ರದೇಶಗಳಿಂದ ಒಟ್ಟು 26 ಸ್ಪರ್ಧಿಗಳು ಆಯ್ಕೆಯಾಗಿದ್ದರು. ಒಂದೂವರೆ ಗಂಟೆಗಳಲ್ಲಿಮೂರು ರೀತಿಯ ಪಾರಂಪರಿಕ ಖಾದ್ಯ ಅಂದರೆ ಸಿಹಿ, ಮೇನ್ ಡಿಶ್ ಹಾಗೂ ಎಣ್ಣೆಯಲ್ಲಿಕರಿದ ತಿಂಡಿ ತಯಾರಿಸುವ ಟಾಸ್ಕ್ ಅನ್ನು ಪ್ರತಿ ಸ್ಪರ್ಧಿಗಳು ಸವಾಲಾಗಿ ಸ್ವೀಕರಿಸಿ ಅತ್ಯಂತ ಚಾಕಚಕ್ಯತೆಯಿಂದ ಬಗೆಬಗೆಯ ಖಾದ್ಯಗಳನ್ನು ತಯಾರಿಸಿ ತೀರ್ಪುಗಾರರ ಮುಂದೆ ಸುಂದರವಾಗಿ ಪ್ರಸ್ತುತಪಡಿಸಿದರು. ಈ ಸ್ಪರ್ಧೆಯ ತೀರ್ಪುಗಾರರಾಗಿದ್ದ ಖ್ಯಾತ ಷೆಫ್ ಸುಜಯ್ ಶಿಂಧೆ, ಕೆಎಲ್ ಇ ಇನ್ಸಿ$್ಟಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ ಮೆಂಟ್ ಎಚ್ ಒಡಿ ಅಮಲನ್ ಇ. ಮತ್ತು ಪ್ರತಿ ಖಾದ್ಯಗಳ ರುಚಿ ನೋಡಿ ಅದರ ಮೂಲ, ಬಳಸಿದ ಸಾಮಗ್ರಿ, ಪೌಷ್ಟಿಕಾಂಶ ಇತ್ಯಾದಿ ಪರಿಶೀಲಿಸಿ ಸ್ಪರ್ಧಿಗಳಿಗೆ ಕೆಲವು ಅಡುಗೆ ಟಿಫ್ಸ್ ಗಳನ್ನೂ ಹೇಳಿದರು.
ಫ್ರೀಡಂ ಹೆಲ್ದಿ ಕುಕ್ಕಿಂಗ್ ಆಯ್ ್ಲಪ್ರಸ್ತುತಪಡಿಸಿರುವ ವಿಕ ಕರುನಾಡ ಸ್ವಾದ 2026 ಅಡುಗೆ ಸ್ಪರ್ಧೆಗೆ ಎಕ್ಸೊ, ವಿಜಯಲಕ್ಷಿ ಡೀರ್ ಬ್ರ್ಯಾಂಡ್ ಉರದ್ ದಾಲ್ , ಕೆಎಂಎಫ್ ಮತ್ತು ಕೆಎಲ್ ಇ ಕಾಲೇಜಿನ ಬಿಎಚ್ ಎಂ ವಿಭಾಗ ಪಾರ್ಟನರ್ ಗಳಾಗಿದ್ದವು.

