ಚುರುಮುರಿ 30042026

Contributed byKiran Mr. Kumar|Vijaya Karnataka

ನಟಿ ಜಾಕ್ವೆಲಿನ್‌ ಫರ್ನಾಂಡಿಸ್‌ಗೆ ನಟ ಅಕ್ಷಯ್‌ ಕುಮಾರ್‌ ತಮಾಷೆ ಮಾಡಿದ್ದಾರೆ. ನಟಿ ಸಾಯಿ ಪಲ್ಲವಿ ಹಿಂದಿ ಭಾಷೆಯ ಬಗ್ಗೆ ಟ್ರೋಲ್‌ ಆಗಿದ್ದಾರೆ. ನಟಿ ಪೂಜಾ ಹೆಗ್ಡೆ ತಮ್ಮ ತವರಿಗೆ ಭೇಟಿ ನೀಡಿದ್ದಾರೆ. ಅಲ್ಲಿನ ದೇಗುಲಗಳಿಗೆ ಭೇಟಿ ನೀಡಿ, ಕುಟುಂಬದೊಂದಿಗೆ ಸಮಯ ಕಳೆದಿದ್ದಾರೆ. ಈ ಘಟನೆಗಳು ಇತ್ತೀಚೆಗೆ ನಡೆದಿವೆ.

akshay kumar pranked jacqueline fernandez

ಜಾಕ್ವೆಲಿನ್ ರನ್ನು ಕಾಡಿದ ಅಕ್ಷಯ್

ನಟಿ ಜಾಕ್ವೆಲಿನ್ ಫರ್ನಾಂಡಿಸ್ ತಮ್ಮ ಹಾಡಿನ ಚಿತ್ರೀಕರಣದಲ್ಲಿದ್ದಾಗ ಶೂಟಿಂಗ್ ಸೆಕ್ಯೂರಿಟಿಗೆ ಬಂದಿದ್ದ ಪೊಲೀಸರನ್ನು ತೋರಿಸಿ, ಅವರು ಏನೋ ತಪ್ಪು ಮಾಡಿರುವ ಕಾರಣ ಕರೆದೊಯ್ಯಲು ಬಂದಿದ್ದಾರೆ ಎಂದು ಹೇಳಿ ನಟ ಅಕ್ಷಯ್ ಕುಮಾರ್ ಪ್ರಾಂಕ್ ಮಾಡಿದ್ದರಂತೆ. ಆ ಶೂಟಿಂಗ್ ಮುಗಿದು ಎಷ್ಟೋ ದಿನ ಕಳೆದರೂ ಅದೇ ಭಯದಲ್ಲಿಇದ್ದರಂತೆ ಜಾಕ್ವೆಲಿನ್ . ಅಕ್ಷಯ್ ಕೊನೆಯಲ್ಲಿನಟಿಯ ಕ್ಷಮೆ ಕೇಳಿದ್ದರಂತೆ.

----

ಸಾಯಿ ಪಲ್ಲವಿ ಹಿಂದಿ ಟ್ರೋಲ್

ನಟಿ ಸಾಯಿ ಪಲ್ಲವಿ ತಮ್ಮ ಚೊಚ್ಚಲ ಹಿಂದಿ ಸಿನಿಮಾ ‘ಏಕ್ ದಿನ್ ’ ಸಿನಿಮಾದ ಪ್ರಚಾರದ ವೇಳೆ ಸರಿಯಾಗಿ ಹಿಂದಿಯಲ್ಲಿಮಾತನಾಡಿಲ್ಲಎಂಬ ಕಾರಣಕ್ಕೆ ಟ್ರೋಲ್ ಆಗಿದ್ದಾರೆ. ಈ ಸಿನಿಮಾ ಸಂದರ್ಭದಲ್ಲೇ ಸರಿಯಾಗಿ ಹಿಂದಿಯಲ್ಲಿಮಾತನಾಡಿಲ್ಲ, ಇನ್ನು ‘ರಾಮಾಯಣ’ದಂಥ ದೊಡ್ಡ ಬಾಲಿವುಡ್ ಸಿನಿಮಾ ಪ್ರಚಾರದ ವೇಳೆ ಅವರ ಹಿಂದಿ ಹೇಗಿರಬಹುದು ಎಂದವರು ಟೀಕೆಗೊಳಗಾಗಿದ್ದಾರೆ. ಆದರೆ ಸೌತ್ ಸಿನಿಮಾದಲ್ಲಿಸಾಯಿ ಪಲ್ಲವಿ ತಮ್ಮ ನಟನೆ ಮೂಲಕ ಪಡೆದುಕೊಂಡಿರುವ ಜನಪ್ರಿಯತೆಯೆ ಬಾಲಿವುಡ್ ನ ದೊಡ್ಡ ದೊಡ್ಡ ಸಿನಿಮಾಗಳ ಅವಕಾಶ ದಕ್ಕಿಸಿಕೊಟ್ಟಿದೆ ಎನ್ನುತ್ತಿದ್ದಾರೆ ಫ್ಯಾನ್ಸ್ .

---

ತವರಿನಲ್ಲಿಪೂಜಾ ಹೆಗ್ಡೆ

ಸೌತ್ ಸಿನಿಮಾದ ಸೂಪರ್ ಹಿಟ್ ಸಿನಿಮಾಗಳ ಬೇಡಿಕೆಯ ನಟಿ ಪೂಜಾ ಹಗ್ಡೆ ಮೂಲತಃ ಕನ್ನಡದ ಕರಾವಳಿ ತೀರದವರು. ಸದ್ಯ ಬಾಲಿವುಡ್ ನ ಹೇ ಜವಾನಿ ತೋ ಇಷ್ ್ಕ ಹೋನಾ ಹೈ, ಜನನಾಯಗನ್ , ಕಾಂಚನಾ-4 ಸಿನಿಮಾಗಳ ಶೂಟ್ ಮುಗಿಸಿ ರಿಲೀಸ್ ಗೆ ಕಾಯುವ ಸಮಯದಲ್ಲಿತವರಿಗೆ ಭೇಟಿ ನೀಡಿದ್ದಾರೆ. ಕರಾವಳಿಯ ಪ್ರಸಿದ್ಧ ದೇಗುಲಗಳಲ್ಲಿದೇವರ ದರ್ಶನ ಪಡೆದು, ಫ್ಯಾಮಿಲಿ ಜತೆ ಕಾಲ ಕಳೆಯುವ ಜತೆಗೆ ಮನೆಯ ದೈವಗಳ ವಿಶೇಷ ಪೂಜಾ ಕಾರ್ಯಗಳಲ್ಲಿಭಾಗಿಯಾಗಿದ್ದಾರೆ.