ಟೋಪಿ

Contributed byshubha.hegde@timesgroup.com|Vijaya Karnataka

ಬೇಸಿಗೆಯಲ್ಲಿ ಸ್ಟೈಲಿಶ್‌ ಆಗಿ ಕಾಣಲು ಟೋಪಿಗಳು ಉತ್ತಮ ಆಯ್ಕೆ. ಇವು ಸೂರ್ಯನ ತಾಪದಿಂದ ರಕ್ಷಣೆ ನೀಡುತ್ತವೆ. ವಿವಿಧ ಶೈಲಿಗಳಲ್ಲಿ ಲಭ್ಯವಿರುವ ಟೋಪಿಗಳು ಉಡುಪಿಗೆ ಸೊಬಗು ನೀಡುತ್ತವೆ. ಹುಲ್ಲು ಮತ್ತು ಡೆನಿಮ್‌ನಿಂದ ಮಾಡಿದ ಟೋಪಿಗಳು ಸೂಕ್ತ. ಫ್ಯಾಷನ್‌ ಮತ್ತು ಆರೋಗ್ಯ ಎರಡನ್ನೂ ಗಮನಿಸಿ ಟೋಪಿ ಆರಿಸಿಕೊಳ್ಳಿ. ಸರಿಯಾದ ಗಾತ್ರದ ಟೋಪಿ ಧರಿಸುವುದು ಮುಖ್ಯ.

fashion fever this summer a comprehensive guide to hat styles

ಬೇಸಿಗೆಗೆ ಹಿತ ಟ್ರೆಂಡಿ ಟೋಪಿಗಳು

ಭಾರತಿ ಎ ಕೊಪ್ಪ

ಸ್ಲಗ್ : ಟ್ರೆಂಡಿ ಲುಕ್

ಬೇಸಿಗೆಗೆ ತಂಪು ನೀಡುವುದರ ಜತೆ ಸ್ಟೈಲಿಶ್ ಲುಕ್ ನೀಡುವ ವೈವಿಧ್ಯಮಯ ಟೋಪಿಗಳು ಟ್ರೆಂಡಿಂಗ್ ನಲ್ಲಿವೆ.

ಬೇಸಿಗೆಯ ವಿಹಾರಗಳಿಗೆ ಅತ್ಯಗತ್ಯವಾದ ಸನ್ ಹ್ಯಾಟ್ ಗಳು ವಿವಿಧ ಶೈಲಿಗಳಲ್ಲಿಬರುತ್ತವೆ ಮತ್ತು ಧರಿಸಿದ ಉಡುಪಿಗೆ ಸ್ವಲ್ಪ ಹೆಚ್ಚುವರಿ ಸೊಬಗು ನೀಡಲು ಟೋಪಿಗಳು ಇದ್ದರೆ ಚೆನ್ನ. ದೊಡ್ಡ, ಫ್ಲಾಪಿ ಸ್ಟ್ರಾ ಟೋಪಿಗಳು ಬಹಳಷ್ಟು ಸ್ಟೈಲಿಂಗ್ ಸಾಮರ್ಥ್ಯವನ್ನು ಹೊಂದಿವೆ. ಅಲಂಕಾರಿಕ ಟೋಪಿಗಳು ಹೆಚ್ಚಾಗಿ ಯುವತಿಯರನ್ನು ಸೆಳೆಯುತ್ತವೆ. ಈ ಟೋಪಿಗಳಲ್ಲಿರಿಬ್ಬನ್ ಗಳು, ಬಿಲ್ಲುಗಳು, ಗರಿಗಳು, ಹೂವುಗಳು ಅಥವಾ ಇತರ ಅಲಂಕಾರಗಳು ಸೇರಿವೆ. ಫ್ಯಾಷನ್ ಟೋಪಿಗಳು ತಲೆಯ ಮುಂಭಾಗದಲ್ಲಿಧರಿಸಿರುವ ಸಣ್ಣ ಟೋಪಿಗಳನ್ನು ಸಹ ಒಳಗೊಂಡಿರುತ್ತವೆ. ಇದನ್ನು ಫ್ಯಾಸಿನೇಟರ್ ಗಳು ಎಂದೂ ಕರೆಯುತ್ತಾರೆ. ಇಂದು ಹೆಚ್ಚಿನ ಮಹಿಳೆಯರು ಬೇಸ್ ಬಾಲ್ ಶೈಲಿಯ ಕ್ಯಾಪ್ ಗಳು ಮತ್ತು ಟೋಪಿಗಳನ್ನು ಧರಿಸುತ್ತಿದ್ದಾರೆ.

ಟೋಪಿಯ ಆಯ್ಕೆ

ಸೂರ್ಯನ ತಾಪಮಾನದಿಂದ ರಕ್ಷಣೆ ಜತೆಗೆ ಸ್ಟೈಲಿಶ್ ಲುಕ್ ಪಡೆಯಲು ವಿಭಿನ್ನ ಬಗೆಯ ಟೋಪಿಗಳನ್ನು ಹುಡುಗಿಯರು ಧರಿಸಲು ಇದು ಸಕಾಲ. ಆದರೆ ಈ ಟೋಪಿಗಳು ಮನಸ್ಸಿಗೆ ಖುಷಿಯಾಗಿ, ದೇಹಕ್ಕೆ ಹಿತವಾಗಬೇಕು. ಫ್ಯಾಷನಬಲ್ ಅಂದೆನಿಸಬೇಕು. ಹುಲ್ಲಿನಿಂದ ಮಾಡಿದ ಹಾಗೂ ಡೆನಿಮ್ ನಿಂದ ಸಿಂಗಾರಗೊಂಡ ಟೋಪಿ ಆಯ್ಕೆ ಒಳ್ಳೆಯದು. ಅತಿ ಗಾತ್ರದ ಟೋಪಿಗಳು ಮುಖಕ್ಕೆ ದೊಡ್ಡದಾಗಿ ಕಂಡರೂ ಟೋಪಿಯೇ ವ್ಯಕ್ತಿತ್ವಕ್ಕೆ ಮತ್ತಷ್ಟು ಮೆರಗು ನೀಡುತ್ತದೆ. ಕೇವಲ ಫ್ಯಾಷನ್ ಅಥವಾ ಕೆಲವೇ ಸಮಯಕ್ಕೆ ಅಂತಾದರೆ ಮಣಿ, ಲೇಸುಗಳಿಂದ ಅಲಂಕೃತವಾದ ಟೋಪಿಗಳನ್ನು ಟ್ರೈ ಮಾಡಿ. ಸೂರ್ಯನ ಬಿಸಿಲಿನಿಂದ ರಕ್ಷಣೆಗೆ ಬಟ್ಟೆ ಇರುವ ಕನಿಷ್ಠ 30 ರ ನೇರಳಾತೀತ ಸಂರಕ್ಷಣಾ ಅಂಶ ಹೊಂದಿರುವ ಟೋಪಿಗಳನ್ನು ಆರಿಸಿಕೊಳ್ಳುವುದು ಉತ್ತಮ. ತಲೆಯ ಸುತ್ತಲೂ ಸಂಪೂರ್ಣವಾಗಿ ಸುತ್ತುವ ಅಂಚುಗಳನ್ನು ಹೊಂದಿರುವ ಟೋಪಿಗಳು ರಕ್ಷಣಾತ್ಮಕವಾಗಿರುತ್ತವೆ. ಟೋಪಿಗಳ ಹೊಂದಾಣಿಕೆ ಮತ್ತು ಗಾಳಿಯಾಡುವಿಕೆಯನ್ನು ಪರೀಕ್ಷಿಸಿ ಖರೀದಿಸಬೇಕು. ಟೋಪಿಯು ರಕ್ಷಣಾತ್ಮಕ ಅಂಚನ್ನು ಹೊಂದಿರಬೇಕು. ಹಣೆಯ ಮಧ್ಯದಲ್ಲಿ, ಹುಬ್ಬುಗಳ ಮೇಲೆ ಆರಾಮವಾಗಿ ಕುಳಿತುಕೊಳ್ಳಬೇಕು. ಫಿಟ್ ಅನ್ನು ಪರೀಕ್ಷಿಸಲು ಉತ್ತಮ ಮಾರ್ಗವೆಂದರೆ ತಲೆ ಮತ್ತು ಕ್ಯಾಪ್ ನಡುವೆ ನಮ್ಮ ಬೆರಳನ್ನು ಇಡುವುದು. ಅದು ಸರಿಹೊಂದಿದರೆ ಸರಿಯಾದ ಗಾತ್ರವನ್ನು ಹೊಂದಿದೆ ಎಂದು ಅರ್ಥ. ಬಿಸಿಲಿನಿಂದ ಗರಿಷ್ಠ ರಕ್ಷಣೆಗಾಗಿ ಕಪ್ಪು, ನೀಲಿ ಅಥವಾ ಗಾಢ ನೀಲಿ ಬಣ್ಣಗಳು ಉತ್ತಮ. ಏಕೆಂದರೆ ಅವು ಹೆಚ್ಚು ನೇರಳಾತೀತ ಕಿರಣಗಳನ್ನು ಹೀರಿಕೊಂಡು ಚರ್ಮವನ್ನು ತಲುಪುವುದನ್ನು ತಡೆಯುತ್ತವೆ. ಫ್ಯಾಷನ್ ಮತ್ತು ಅರೋಗ್ಯ ಎರಡನ್ನೂ ಗಮನದಲ್ಲಿಟ್ಟುಕೊಂಡು ಎತ್ತರ, ನಿಲುವು, ಸ್ಟೈಲ್ ಗೆ ಅನುಗುಣವಾಗಿ ಟೋಪಿಯನ್ನು ಬೇಸಿಗೆ ಕಾಲದಲ್ಲಿಬಳಸಬಹುದು.