ಮತ್ತೆ ಪಾಕ್ ಗೆ ಅರಾಘಚಿ

Contributed byshree vijendra|Vijaya Karnataka

ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘಚಿ ಅಮೆರಿಕದೊಂದಿಗೆ ಮಾತುಕತೆ ನಡೆಸಲು ಪಾಕಿಸ್ತಾನಕ್ಕೆ ಭೇಟಿ ನೀಡುತ್ತಿದ್ದಾರೆ. ಅವರು ರಷ್ಯಾಕ್ಕೂ ತೆರಳಿ ಅಧ್ಯಕ್ಷ ಪುಟಿನ್ ಅವರೊಂದಿಗೆ ಚರ್ಚಿಸಿದ್ದಾರೆ. ಹರ್ಮುಜ್ ಜಲಸಂಧಿ ವಿಚಾರ ಇನ್ನೂ ನಿರ್ಣಾಯಕವಾಗಿದೆ. ಕೊಲ್ಲಿ ರಾಷ್ಟ್ರಗಳು ಜೆಡ್ಡಾದಲ್ಲಿ ಸಭೆ ಸೇರಿ ಮುಂದಿನ ಪರಿಸ್ಥಿತಿಯ ಬಗ್ಗೆ ಚರ್ಚಿಸುತ್ತಿವೆ. ಇದು ರಾಷ್ಟ್ರಗಳ ನಾಯಕರ ಮೊದಲ ಮುಖಾಮುಖಿಯಾಗಿದೆ.

iran foreign ministers pakistan visit sparks intense talks behind closed doors

ಅಮೆರಿಕ ಜತೆಗಿನ ಎರಡನೇ ಸುತ್ತಿನ ಸಂಧಾನ ಸಭೆ ನಿಗದಿಯಾದ ಬಳಿಕ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘಚಿ ಪಾಕಿಸ್ತಾನದ ಇಸ್ಲಾಮಾಬಾದ್ ಗೆ ಮೂರು ಬಾರಿ ಭೇಟಿ ನೀಡಿದ್ದಾರೆ. ಶುಕ್ರವಾರ ಮಾತುಕತೆಗೆ ತೆರಳಿದ್ದ ಅರಾಘಚಿ ಅಮೆರಿಕ ನಿಯೋಗ ಬರುವ ಮೊದಲೇ ಒಮನ್ ಗೆ ತೆರಳಿದ್ದರು. ಶನಿವಾರ ರಷ್ಯಾಗೆ ತೆರಳುವ ಮಾರ್ಗ ಮಧ್ಯೆ ಇಸ್ಲಾಮಾಬಾದ್ ಗೆ ಮರಳಿ ಸಂಕ್ಷಿಪ್ತ ಮಾತುಕತೆ ನಡೆಸಿ, 3 ಹಂತದ ಸಂಧಾನ ಸೂತ್ರ ಮಂಡಿಸಿದ್ದರು. ರಷ್ಯಾದ ಸೇಂಟ್ ಪೀಟರ್ಸ್ಬರ್ಗ್ ಗೆ ತೆರಳಿ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜತೆ ಮಾತುಕತೆ ನಡೆಸಿದ ಬಳಿಕ ಟೆಹ್ರಾನ್ ಗೆ ತೆರಳುವ ಮಾರ್ಗ ಮಧ್ಯೆ ಇಸ್ಲಾಮಾಬಾದ್ ಗೆ ಮರಳಿದ್ದರು. ನೂರ್ ಖಾನ್ ವಾಯುನೆಲೆಯಲ್ಲಿಪಾಕ್ ನಾಯಕರ ಜತೆ ಔಪಚಾರಿಕ ಮಾತುಕತೆ ನಡೆಸಿದ್ದರು.

ಈ ಮಧ್ಯೆ, ಅಮೆರಿಕ ಜತೆಗಿನ ಸಂಧಾನ ಸಭೆ ವಿಚಾರದಲ್ಲಿಹರ್ಮುಜ್ ಜಲಸಂಧಿ ವಿಚಾರ ಇನ್ನೂ ನಿರ್ಣಾಯಕ ಅಂಶವಾಗಿ ಉಳಿದಿರುವುದರಿಂದ ಟೆಹ್ರಾನ್ ಇನ್ನೂ ಯುದ್ಧದ ಸ್ಥಿತಿಯಲ್ಲಿದೆ ಎಂದು ಇರಾನ್ ಸೇನೆ ಹೇಳಿದೆ.

ಇದರ ನಡುವೆ ಕೊಲ್ಲಿನಡುವೆ ಕೊಲ್ಲಿರಾಷ್ಟ್ರಗಳು ಜೆಡ್ಡಾದಲ್ಲಿಸಭೆ ನಡೆಸಿ, ಮುಂದಿನ ಸ್ಥಿತಿಗತಿಯ ಕುರಿತು ಚರ್ಚೆ ನಡೆಸುತ್ತಿದ್ದಾರೆ. ಸಂಘರ್ಷದಲ್ಲಿತಮ್ಮ ದೇಶಗಳು ಗುರಿಯಾದ ನಂತರ ಕೊಲ್ಲಿರಾಷ್ಟ್ರಗಳ ನಾಯಕರ ಮೊದಲ ಮುಖಾಮುಖಿ ಇದಾಗಿದೆ.