ಇಂದು, ನಾಳೆ ಗದ್ದುಗೆ ಜೀರ್ಣೋದ್ಧಾರ
* ಕುರುಬೂರು ಪಟ್ಟದ ಮಠದಲ್ಲಿಶ್ರೀ ಗುರು ಮಲ್ಲೇಶ್ವರ ಮೂರ್ತಿ ಪ್ರತಿಷ್ಠಾಪನೆ
ತಿ.ನರಸೀಪುರ: ತಾಲೂಕಿನ ಕುರುಬೂರು ಪಟ್ಟದ ಮಠದಲ್ಲಿಶ್ರೀ ಸದಾಶಿವ ಸ್ವಾಮೀಜಿ ಗದ್ದುಗೆ ಜೀರ್ಣೋದ್ಧಾರ, 15ನೇ ವರ್ಷದ ಸಂಸ್ಮರಣೋತ್ಸವ, ಶ್ರೀ ಗುರು ಮಲ್ಲೇಶ್ವರ ಮೂರ್ತಿ ಪ್ರತಿಷ್ಠಾಪನೆ ಹಾಗೂ ಐದನೇ ವರ್ಷದ ಪಟ್ಟಾಧಿಕಾರ ಮಹೋತ್ಸವವನ್ನು ಏ.29, 30ರಂದು ಆಯೋಜಿಸಲಾಗಿದೆ ಎಂದು ಮಠಾಧ್ಯಕ್ಷರಾದ ಶ್ರೀ ಮಲ್ಲಿನಾಥ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.
ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಶ್ರೀ ಸಿದ್ದಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಹಾಗೂ ಕನಕಪುರದ ಶ್ರೀ ದೇಗುಲ ಮಠದ ಡಾ.ಮುಮ್ಮಡಿ ನಿರ್ಮಾಣ ಸ್ವಾಮೀಜಿ ಸಮ್ಮುಖದಲ್ಲಿವಾಟಾಳು ಶ್ರೀ ಸೂರ್ಯಸಿಂಹಾಸನ ಮಠದ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಗುರುಮಲ್ಲೇಶ್ವರ ದಾಸೋಹ ಸಂಸ್ಥಾನ ಮಠದ ಶ್ರೀ ಮಹಾಂತ ಸ್ವಾಮೀಜಿ, ಡಾ.ಚನ್ನಬಸವ ಸ್ವಾಮೀಜಿ ಹಾಗೂ ಆದಿಚುಂಚನಗಿರಿ ಶಾಖಾಮಠದ ಶ್ರೀ ಸೌಮ್ಯನಾಥ ಸ್ವಾಮೀಜಿ ಉಪಸ್ಥಿತರಿರಲಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್ . ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಗದ್ದುಗೆ ಉದ್ಘಾಟನೆ ನೆರವೇರಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಸ್ .ಸಿ. ಮಹದೇವಪ್ಪ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಿದ್ದು, ಸಂಸದ ಸುನಿಲ್ ಬೋಸ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಶಾಸಕ ಎಚ್ .ಎಂ. ಗಣೇಶ್ ಪ್ರಸಾದ್ , ಮಾಜಿ ಶಾಸಕರಾದ ಎಂ. ಅಶ್ವಿನ್ ಕುಮಾರ್ , ನಿರಂಜನ್ ಕುಮಾರ್ , ಮುಖಂಡರಾದ ಎಂ. ಪ್ರದೀಪ್ ಕುಮಾರ್ , ಡಾ.ಎಂ. ರೇವಣ್ಣ, ಎಂ.ಜಿ. ಸುದೀಪ್ , ಎಂ. ರುದ್ರೇಶ್ , ಎಸ್ . ನಿಶಾಂತ್ , ಕೆ.ಪಿ. ಮಹದೇವಸ್ವಾಮಿ ಇತರರು ಭಾಗವಹಿಸಲಿದ್ದಾರೆ. ಇದೇ ವೇಳೆ ಅಂತರಾಷ್ಟ್ರೀಯ ಖೋ-ಖೋ ಕ್ರೀಡಾಪಟು ಕುಮಾರಿ ಚೈತ್ರ ಅವರನ್ನು ಸನ್ಮಾನಿಸಲಾಗುವುದು ಎಂದು ಪ್ರಕಟಣೆಯಲ್ಲಿತಿಳಿಸಿದ್ದಾರೆ.

