ಟಿಕೆಟ್ ಕೇಳಿದ್ದಕ್ಕೆ ಕಂಡಕ್ಟರ್ ಮೇಲೆ ಹಲ್ಲೆ

Contributed byamareshhiremath72@gmail.com|Vijaya Karnataka

ಶಹಾಪುರದಲ್ಲಿ ಘಟನೆ ನಡೆದಿದೆ. ಟಿಕೆಟ್ ಕೇಳಿದ್ದಕ್ಕೆ ಕಂಡಕ್ಟರ್‌ ಶಿವಪ್ಪ ತಳವಾರ ಮೇಲೆ ಪ್ರಯಾಣಿಕ ಮಲ್ಲಪ್ಪ ಜಾಯಿ ಹಲ್ಲೆ ಮಾಡಿದ್ದಾನೆ. ಮಹಲರೋಜಾ ಗ್ರಾಮದಿಂದ ಶಹಾಪುರಕ್ಕೆ ಹೋಗುತ್ತಿದ್ದ ಬಸ್‌ನಲ್ಲಿ ಈ ಘಟನೆ ನಡೆದಿದೆ. ಕಂಡಕ್ಟರ್‌ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ ಮಾಡಿದ್ದಾನೆ ಎಂದು ದೂರು ದಾಖಲಾಗಿದೆ. ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

attack on conductor for asking ticket in shahapur

ಶಹಾಪುರ: ಧಿಬಧಿಸ್ ಧಿನಲ್ಲಿಟಿಕೆಟ್ ಪಡೆಯುವ ವಿಚಾರವಾಗಿ ತಕರಾರು ನಡೆದು ಕಂಡಕ್ಟರ್ ಮೇಲೆ ಪ್ರಯಾಣಿಕರೊಧಿಬ್ಬರು ಸೋಮವಾರ ಹಲ್ಲೆಮಾಡಿದ ಘಟನೆ ನಡೆದಿದೆ. ತಾಲೂಕಿನ ಸಗರ(ಬಿ) ಗ್ರಾಮದ ಮಲ್ಲಪ್ಪ ಜಾಯಿ ಹಲ್ಲೆಮಾಡಿದ ಯುವಕ. ಶಹಾಪುರ ಸಾರಿಗೆ ಘಟಕದ ಚಾಲಕಂ ನಿರ್ವಾಹಕ ಶಿವಪ್ಪ ತಳವಾರ ಹಲ್ಲೆಗೆ ಒಳಗಾದವರು. ತಾಲೂಕಿನ ಮಹಲರೋಜಾ ಗ್ರಾಮದಿಂದ ಸಗರ(ಬಿ) ಗ್ರಾಮದ ಮಾರ್ಗವಾಗಿ ಶಹಾಪುರಕ್ಕೆ ಬಸ್ ಧಿಹೋಗುತ್ತಿತ್ತು. ಬಸ್ ನಲ್ಲಿಪ್ರಯಾಣಿಸುತ್ತಿದ್ದ ಮಲ್ಲಪ್ಪನಿಗೆ ಕಂಡಕ್ಟರ್ ಟಿಕೆಟ್ ತೆಗೆದುಕೊಳ್ಳುವಂತೆ ತಿಳಿಸಿದಾಗ ಇಬ್ಬರು ನಡುವೆ ತಕರಾರು ನಡೆಯಿತು. ಆಗ ಮಲ್ಲಪ್ಪ ನನ್ನ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆಮಾಡಿದ ಎಂದು ಕಂಡಕ್ಟರ್ ಶಿವಪ್ಪ ದೂರಿನಲ್ಲಿತಿಳಿಸಿದ್ದಾರೆ. ಶಹಾಪುರ ಪೊಧಿಲೀಸ್ ಠಾಣೆಯಲ್ಲಿಮಂಗಳವಾರ ದೂರು ದಾಖಲಾಗಿದೆ.