ಮುಂಬಯಿ ಚಾಲೆಂಜ್ ಗೆದ್ದ ಹೈದರಾಬಾದ್

Contributed bymanjunath.gowda@timesgroup.com|Vijaya Karnataka

ಮುಂಬಯಿ ಇಂಡಿಯನ್ಸ್‌ ವಿರುದ್ಧ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ 6 ವಿಕೆಟ್‌ಗಳ ಅಂತರದಲ್ಲಿ ಗೆಲುವು ಸಾಧಿಸಿದೆ. ಟ್ರಾವಿಸ್‌ ಹೆಡ್‌ 76 ರನ್‌ ಮತ್ತು ಹೆನ್ರಿಚ್‌ ಕ್ಲಾಸೆನ್‌ 65 ರನ್‌ಗಳಿಸಿ ತಂಡದ ಗೆಲುವಿಗೆ ಕಾರಣರಾದರು. ಮುಂಬಯಿ ನೀಡಿದ್ದ 244 ರನ್‌ಗಳ ಗುರಿಯನ್ನು ಹೈದರಾಬಾದ್‌ 8 ಎಸೆತಗಳು ಬಾಕಿ ಇರುವಂತೆಯೇ ತಲುಪಿತು. ಈ ಗೆಲುವಿನೊಂದಿಗೆ ಹೈದರಾಬಾದ್‌ ಪ್ಲೇಆಫ್‌ ಪ್ರವೇಶವನ್ನು ಸುಗಮ ಮಾಡಿಕೊಂಡಿದೆ.

hyderabad team achieves remarkable victory in mumbai challenge

ರಿಕೆಲ್ಟನ್ ಶತಕದ ಹೋರಾಟಕ್ಕೆ ಸಿಗದ ಫಲ

ಮುಂಬಯಿ: ಟ್ರಾವಿಸ್ ಹೆಡ್ (76; 30 ಎಸೆತ, 4 ಫೋರ್ , 8 ಸಿಕ್ಸರ್ ) ಮತ್ತು ಹೆನ್ರಿಚ್ ಕ್ಲಾಸೆನ್ (65*; 30 ಎಸೆತ, 7 ಫೋರ್ , 4 ಸಿಕ್ಸರ್ ) ಅವರ ಸಿಡಿಲಬ್ಬರದ ಅರ್ಧ ಶತಕಗಳ ನೆರವಿನಿಂದ ಸನ್ ರೈಸರ್ಸ್ ಹೈದರಾಬಾದ್ ತಂಡ 6 ವಿಕೆಟ್ ಗಳಿಂದ ಮುಂಬಯಿ ಇಂಡಿಯನ್ಸ್ ತಂಡವನ್ನು ಮಣಿಸಿತು.

ವಾಂಖೆಡೆ ಕ್ರೀಡಾಂಗಣದಲ್ಲಿಬುಧವಾರ ನಡೆದ ಜಿದ್ದಾಜಿದ್ದಿನ ಪಂದ್ಯದಲ್ಲಿಮುಂಬಯಿ ಒಡ್ಡಿದ 244 ರನ್ ಗಳ ಕಠಿಣ ಗುರಿ ಬೆನ್ನಟ್ಟಿದ ಹೈದರಾಬಾದ್ , 8 ಎಸೆತಗಳು ಬಾಕಿ ಇರುವಂತೆಯೇ 4 ವಿಕೆಟ್ ಗೆ 249 ರನ್ ಪೇರಿಸಿ ವಿಜಯದ ನಗೆ ಬೀರಿತು. ಈ ಜಯದೊಂದಿಗೆ ಹೈದರಾಬಾದ್ ತನ್ನ ಪ್ಲೇಆಫ್ ಪ್ರವೇಶವನ್ನು ಮತ್ತಷ್ಟು ಸುಗಮ ಮಾಡಿಕೊಂಡಿತು. ಆದರೆ 5 ಬಾರಿಯ ಚಾಂಪಿಯನ್ ಮುಂಬಯಿ ಮುಂದಿನ ಹಂತವನ್ನು ಬಹುತೇಕ ದುರ್ಗಮ ಮಾಡಿಕೊಂಡಿತು.

ಇದಕ್ಕೂ ಮುನ್ನ ಮುಂಬಯಿ ಪರ ಇನಿಂಗ್ಸ್ ಆರಂಭಿಸಿದ ವಿಲ್ ಜಾಕ್ಸ್ ಮತ್ತು ರಯಾನ್ ಬಿರುಸಿನ ಬ್ಯಾಟಿಂಗ್ ನಡೆಸಿದರು. 4 ರನ್ ಗಳಿಂದ ಅರ್ಧ ಶತಕ ಗಳಿಸುವ ಅವಕಾಶವನ್ನು ಕೈಚೆಲ್ಲಿದ ಜಾಕ್ಸ್ , ಮೊದಲ ವಿಕೆಟ್ ಗೆ 93 ರನ್ ಗಳ ಪಾಲುದಾರಿಕೆ ಆಟಕ್ಕೆ ಸಾಕ್ಷಿಯಾದರು. ಬಳಿಕ ತನ್ನ ಬ್ಯಾಟಿಂಗ್ ಆರ್ಭಟವನ್ನು ತೀವ್ರಗೊಳಿಸಿದ ರಿಕೆಲ್ಟನ್ , ಕೇವಲ 44 ಎಸೆತಗಳಲ್ಲಿಚೊಚ್ಚಲ ಶತಕ ಸಿಡಿಸಿದರು. ಇದರೊಂದಿಗೆ ಮುಂಬಯಿ ಪರ ಅತಿ ವೇಗದ ಶತಕ ದಾಖಲಿಸಿದರು. 2008ರಲ್ಲಿಸನತ್ ಜಯಸೂರ್ಯ (45 ಎಸೆತ) ಮುಂಬಯಿ ಪರ ಅತಿ ವೇಗವಾಗಿ ಶತಕ ಗಳಿಸಿದ್ದರು. ಬಳಿಕ ವೈಯಕ್ತಿಕ ಮೊತ್ತವನ್ನು 123ಕ್ಕೆ ವಿಸ್ತರಿಸಿ ಔಟಾಗದೇ ಉಳಿದರು.

ಸನ್ ರೈಸರ್ಸ್ ಹೈದರಾಬಾದ್ : 18.4 ಓವರ್ ಗಳಲ್ಲಿ4 ವಿಕೆಟ್ ಗೆ 249 (ಟ್ರಾವಿಸ್ 76, ಕ್ಲಾಸೆನ್ 65*,ಅಭಿಷೇಕ್ 45; ಘಜನ್ ಫರ್ 51ಕ್ಕೆ 2).