(((ಗಮನಿಸಿ: 20 ಸಾವಿರ ರೂಪಾಯಿ ಜಾಹೀರಾತು ಬಂದಿದೆ))).
ವಿಕ ಸುದ್ದಿಲೋಕ ಉಪ್ಪಿನಂಗಡಿ
ತೀರ್ಥಂಕರರು ಬೋಧಿಸಿದ ಆರು ಕರ್ತವ್ಯಗಳನ್ನು ನಿಷ್ಠೆಯಿಂದ ಪಾಲಿಸಿ ಜೀವನ ಸಾರ್ಥಕ್ಯವನ್ನು ಕಾಣಬೇಕೆಂದು ಜೈನ ದಿಗಂಬರ ಪರಂಪರೆಯ ಪರಮಪೂಜ್ಯ 108 ಶ್ರೀ ವೀರಸಾಗರ ಮುನಿ ಮಹಾರಾಜರು ಹೇಳಿದರು.
ಅವರು ಬುಧವಾರ ಉಪ್ಪಿನಂಗಡಿ ಗಾಂಧಿಪಾರ್ಕ್ ಎಂಬಲ್ಲಿಹೆದ್ದಾರಿ ಪಾಶ್ರ್ವದಲ್ಲಿಪುನರ್ ನಿರ್ಮಿತ ಕದಿಕಾರು ಭಗವಾನ್ 1008 ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿಏಕಶಿಲಾ ಚತುರ್ಮುಖ ಮಾನಸ್ತಂಭೋಪರಿ ಶ್ರೀ ಜಿನಬಿಂಬಗಳ ಪಂಚಕಲ್ಯಾಣ ಹಾಗೂ ಧಾಮ ಸಂಪ್ರೋಕ್ಷಣಾಪೂರ್ವಕ ಭಗವಾನ್ 1008 ಶ್ರೀ ಚಂದ್ರನಾಥ ಸ್ವಾಮಿ ಹಾಗೂ ಮಹಾಮಾತೆ ಶ್ರೀ ಪದ್ಮಾವತೀ ದೇವಿ ಬಿಂಬಗಳ ಪುನರ್ ಪ್ರತಿಷ್ಠಾ ಮಹೋತ್ಸವದ ಮೊದಲ ದಿನದ ಕಾರ್ಯಕ್ರಮದಲ್ಲಿ ಮಂಗಲ ಪ್ರವಚನ ನೀಡಿದರು.
ದೇವಪೂಜೆ, ಗುರುಸೇವೆ, ಸ್ವ ಅಧ್ಯಾಯ, ಸಂಯಮ, ತಪ, ದಾನ ಇವು ಕಡ್ಡಾಯ ಅನುಷ್ಠಾನದ ವಿಧಿಗಳಾಗಿದ್ದು, ಇದರ ಬಗ್ಗೆ ಅಸಡ್ಡೆ ಸಲ್ಲದು, ತಾನೇ ಕಡ್ಡಾಯವಾಗಿ ಪಾಲ್ಗೊಳ್ಳುವುದೇ ಭಗವಂತನ ಪ್ರೀತಿಗೆ ಪಾತ್ರವಾಗುವುದಾಗಿದೆ ಎಂದರು.
ಶ್ರೀಕ್ಷೇತ್ರ ಕಂಬದಹಳ್ಳಿಯ ಪರಮಪೂಜ್ಯ ಸ್ವಸ್ತಿಶ್ರೀ ಭಾನುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು ಮಂಗಲ ಪ್ರವಚನ ನೀಡಿ, ಬಸದಿ ಕೇವಲ ಅಲ್ಲಿನ ಪುರೋಹಿತರಿಗಾಗಿಲ್ಲ. ಬದಲಾಗಿ ಅದು ಸಮಸ್ತ ಜಿನ ಭಕ್ತರದ್ದಾಗಿದೆ. ಅದಕ್ಕಾಗಿ ಬಸದಿಗೆ ದಿನ ನಿತ್ಯ ಭೇಟಿ ನೀಡಿ ತಿಳಿದೋ ತಿಳಿಯದೆಯೋ ಮಾಡಿದ ಪಾಪ ಕರ್ಮಗಳನ್ನು ಕಳೆಯಬೇಕು ಎಂದರು.
ಬಸದಿಯಲ್ಲಿಬುಧವಾರ ಮುಂಜಾನೆಯಿಂದಲೇ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆದಿದ್ದು, ಇಂದ್ರಪ್ರತಿಷ್ಠೆ, ತೋರಣ ಮುಹೂರ್ತ, ಪಂಚಕಲ್ಯಾಣ ಮಂಟಪ ಪ್ರವೇಶ, ಯಕ್ಷ ಪ್ರತಿಷ್ಠೆ, ವಿಮಾನ ಶುದ್ಧಿ ವಿಧಾನ, 81 ಕಲಶಗಳಿಂದ ಮಂದಿರ-ಮಾನಸ್ತಂಭ-ಶಿಖರ ಶುದ್ಧಿವಿಧಾನ, ಮುಖ ವಸ್ತ್ರ ಉದ್ಘಾಟನೆ, ಧ್ವಜಾರೋಹಣ, ನಾಂದಿ ಮಂಗಲ ಪೂಜಾ ವಿಧಾನ, ಆರಾಧನಾ ಪೂರ್ವಕ ಶ್ರೀ ಕ್ಷೇತ್ರಪಾಲ ಪ್ರತಿಷ್ಠಾ ವಿಧಾನ, ಪಂಚ ಕಲ್ಯಾಣ ಆರಾಧನಾ ವಿಧಾನ, ಯಾಗ ಮಂಡಲ ಆರಾಧನಾ ವಿಧಾನ, ಮೃತ್ತಿಕಾ ಸಂಗ್ರಹಣೆ, ಅಂಕುರಾರ್ಪಣೆ, ಪಂಚಕಲ್ಯಾಣ ಮಂಟಪದಲ್ಲಿಮಾತುರಾಹ್ವಾನಾದಿ ಕ್ರಿಯಾಯುಕ್ತ ಗರ್ಭಾವತರಣ ಕಲ್ಯಾಣ ಪೂರ್ವ ವಿಧಿ, ಭೇರಿತಾಡನ ವಿಧಿ, ಮಂಗಲ ಸೂತ್ರ ಬಂಧನ, ಶ್ರೀ ಸ್ವಾಮಿಗೆ ನವ ಕಲಶಾಭಿಷೇಕ, ಮಹಾಪೂಜೆ, ಮಹಾಮಂಗಳಾರತಿ, ಶ್ರೀ ಜಿನಗಂಧೋದಕ ವಿಧಿವಿಧಾನಗಳು ನಡೆದವು. ಪ್ರತಿಷ್ಠಾಚಾರ್ಯರಾಗಿ ಸೂರತ್ ಭಾಗವಹಿಸಿದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಜ್ರಕುಮಾರ್ ಜೈನ್ , ಕಾರ್ಯಾಧ್ಯಕ್ಷ ಧನ್ಯಕುಮಾರ್ ರೈ, ಪಂಚಕಲ್ಯಾಣ ಸಮಿತಿ ಅಧ್ಯಕ್ಷ ವಿಧ್ಯಾಧರ ಜೈನ್ , ಕಾರ್ಯದರ್ಶಿ ಶಾಂತಿಪ್ರಕಾಶ್ , ಸಮಿತಿಯ ಸದಸ್ಯರಾದ ಪ್ರಶಾಂತ್ ಜೈನ್ ಬಾರ್ಯ, ಅನುದೀಪ್ ರೈ, ನಿತೇಶ್ ಕುಮಾರ್ ಪುತ್ತಿಲ, ಪ್ರಭಾಕರ್ ರೈ, ರಕ್ಷಿತ್ ಕುಮಾರ್ ಪುತ್ತಿಲ, ಜಯರಾಜ್ ಜಾರಳಿಕೆ, ಸುಭಾಶ್ ಜೈನ್ , ನಿರಂಜನ್ ಕೊಂಡೆ, ಅರುಣಾ ಡಿ. ರೈ, ಪಾಶ್ರ್ವನಾಥ್ ನೆಲ್ಯಾಡಿ, ಸಮಂತ್ ನೆಲ್ಯಾಡಿ, ಪುನಿತ್ ನೆಲ್ಯಾಡಿ, ಉದಯ ಕುಮಾರ್ ಜೈನ್ , ಅಭಯ್ ಜೈನ್ , ವಿಜೇತ್ ಜೈನ್ , ಸಂಪತ್ ಕುಮಾರ್ ಅಲಂಕಾರು, ಸನ್ಮತಿ ಹೆಗ್ಡೆ, ಸತೀಶ್ ಪಡಿವಾಳ್ , ಮಹೇಶ್ ಪಡಿವಾಳ ಮತ್ತಿತರರು ಭಾಗವಹಿಸಿದ್ದರು. ಮಿತ್ರಸೇನ್ ಜೈನ್ ಕಾರ್ಯಕ್ರಮ ನಿರೂಪಿಸಿದರು.
ಪೋಟೋ-29ಯುಪಿಪಿಐ-ಬಸದಿಯಲ್ಲಿಕ್ಷೇತ್ರಪಾಲ ಪ್ರತಿಷ್ಠಾ ವಿಧಿ ನಡೆಯಿತು.
ಪೋಟೋ-29ಯುಪಿಪಿಐ-ಮುನಿಗಳು ಮಂಗಲ ಪ್ರವಚನ ನೀಡುತ್ತಿರುವುದು.

