ಮೂಡುಬಿದಿರೆಯ ಹರ್ಷಿತಾ ಅಶ್ವಥ್ ಮುಡಿಗೆ ಸೌಂದರ್ಯ ಕಿರೀಟ
ವಿಕ ಸುದ್ದಿಲೋಕ ಕೈಕಂಬ
ಜೆಕೆ ಮೋಡಲ್ ಮ್ಯಾನೇಜ್ಮೆಂಟ್ ಪ್ರಾಯೋಜಕತ್ವದಲ್ಲಿಬೋಳೂರು ಸುಲ್ತಾನ್ ಬತ್ತೇರಿಯಲ್ಲಿನಡೆದ ಮಿಸ್ ಐಎಕ್ಸ್ ಇ-2026 ಸೌಂದರ್ಯ ಸ್ಪರ್ಧೆಯಲ್ಲಿ ಮೂಡುಬಿದಿರೆ ಯ ಹರ್ಷಿತಾ ಅಶ್ವಥ್ ಮೂಡುಬಿದಿರೆ ಮೂಡುಕೊಣಾಜೆ ವಿಜೇತ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಬೋಳೂರು ಸುಲ್ತಾನ್ ಬತ್ತೇರಿ ಪ್ರದೇಶದಲ್ಲಿನಡೆದ ಕಾರ್ಯಕ್ರಮದಲ್ಲಿಅನೇಕ ಸ್ಪರ್ಧಿಗಳು ಭಾಗವಹಿಸಿ ಪ್ರತಿಭೆ ಪ್ರದರ್ಶಿಸಿದರು. ಅಂತಿಮ ಸುತ್ತಿನಲ್ಲಿಆಯ್ಕೆಯಾದ ಹರ್ಷಿತಾ ಅಶ್ವಥ್ ನಿರ್ಣಾಯಕರ ಮೆಚ್ಚುಗೆಗೆ ಪಾತ್ರರಾಗಿ ಮಿಸ್ ಐಎಕ್ಸ್ ಇ-2026 ಪಟ್ಟ ಗೆದ್ದರು.
ಹರ್ಷಿತಾ ಅಶ್ವಥ್ ಮಿಜಾರಿನ ಧರ್ಮಣ ಕುಸುಮಾವತಿ ದಂಪತಿ ಪುತ್ರಿ. ಮೂಡುಕೊಣಾಜೆಯ ಅಶ್ವಥ್ ಅವರ ಪತ್ನಿ.

