4ರಂದು ಕುಂಭಕಾಶಿ ಶಂಕರಮಠಕ್ಕೆ ನೂತನ ರಥ ಸಮರ್ಪಣೆ

Contributed byjohn.dsouza@timesofindia.com|Vijaya Karnataka

ಆನೆಗುಡ್ಡೆಯ ಕುಂಭಕಾಶಿ ಶ್ರೀ ಶಂಕರ ಮಠಕ್ಕೆ ನೂತನ ರಥ ಸಮರ್ಪಣೆ ಕಾರ್ಯಕ್ರಮ ಮೇ 4 ರಂದು ಜರುಗಲಿದೆ. ಸುಮಾರು 20 ಲಕ್ಷ ರೂ. ವೆಚ್ಚದ ಆಕರ್ಷಕ ರಥವನ್ನು ಮೇ 3 ರಂದು ಕೋಟಿಲಿಂಗೇಶ್ವರ ದೇವಸ್ಥಾನದಿಂದ ಮೆರವಣಿಗೆಯಲ್ಲಿ ತರಲಾಗುವುದು. ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ತೀರ್ಥ ಮಹಾಸ್ವಾಮೀಜಿ ರಥವನ್ನು ಬರಮಾಡಿಕೊಳ್ಳುವರು. ಮೇ 4 ರಂದು ಜಗದ್ಗುರುಗಳ ಉಪಸ್ಥಿತಿಯಲ್ಲಿ ರಥ ಸಮರ್ಪಣೆ ನಡೆಯಲಿದೆ. ಧಾರ್ಮಿಕ ವಿಧಿವಿಧಾನಗಳು ಮೇ 2 ರಿಂದ 4 ರ ವರೆಗೆ ನಡೆಯಲಿವೆ.

new ratha inauguration at kumbhashi shankara math what are the various religious events

ವಿಕ ಸುದ್ದಿಲೊಕ ಕುಂದಾಪುರ

ಆನೆಗುಡ್ಡೆಯ ಕುಂಭಕಾಶಿ ಶ್ರೀ ಶಂಕರ ಮಠಕ್ಕೆ ನೂತನ ರಥ ಸಮರ್ಪಣೆ ಮೇ 4 ರಂದು ನಡೆಯಲಿದೆ ಎಂದು ಮಠದ ಟ್ರಸ್ಟಿ ಲಕ್ಷಿತ್ರ್ಮೕಶ ಅಡಿಗ ಬಡಾಕೆರೆ ಹೇಳಿದರು.

ಸುದ್ದಿಗೋಷ್ಠಿಯಲ್ಲಿಗುರುವಾರ ಮಾತನಾಡಿ, ದಾನಿ ಕೃಷ್ಣಮೂರ್ತಿ ಮಂಜರು ಸುಮಾರು 20 ಲಕ್ಷ ರೂ. ವೆಚ್ಚದಲ್ಲಿಆಕರ್ಷಕ ರಥವನ್ನು ಮಠಕ್ಕೆ ಕೊಡಮಾಡಿದ್ದು, ಮೇ 3ರಂದು ಸಂಜೆ 4.30 ಗಂಟೆಗೆ ನೂತನ ರಥವನ್ನು ಕೋಟಿಲಿಂಗೇಶ್ವರ ದೇವಳದಿಂದ ಮೆರವಣಿಗೆ ಮೂಲಕ ತರಲಾಗುತ್ತದೆ. ಸಂಜೆ 6.30 ಗಂಟೆಗೆ ಶೃಂಗೇರಿ ಜಗದ್ಗುರು ಶ್ರೀವಿಧುಶೇಖರ ಭಾರತೀ ತೀರ್ಥ ಮಹಾಸ್ವಾಮೀಜಿ ರಥವನ್ನು ಬರಮಾಡಿಕೊಳ್ಳುವರು. ನಂತರ ಅವರ ದಿವ್ಯ ಉಪಸ್ಥಿತಿಯಲ್ಲಿಶಾರದಾ ಶಂಕರ ದೀಪಾಂಜಲಿ, ರಾತ್ರಿ 8ಗಂಟೆಗೆ ಶ್ರೀಗಳಿಂದ ಚಂದ್ರಮೌಳೀಶ್ವರ ಪೂಜೆ ಜರುಗಲಿದೆ.

ಮೇ 4ರಂದು ಬೆಳಗ್ಗೆ 10.30 ಗಂಟೆಗೆ ಜಗದ್ಗುರುಗಳ ಉಪಸ್ಥಿತಿಯಲ್ಲಿನೂತನ ರಥ ಸಮರ್ಪಣೆ, ಮಧ್ಯಾಹ್ನ 12.30 ಗಂಟೆಗೆ ಧಾರ್ಮಿಕ ಸಭೆ, ರಾತ್ರಿ 8ಗಂಟೆಗೆ ಚಂದ್ರಮೌಳೀಶ್ವರ ಪೂಜೆ ನಡೆಯಲಿದೆ. ರಥ ಸಮರ್ಪಣೆ ನಿಮಿತ್ತ ಮೇ 2ರಿಂದ ಮೊದಲ್ಗೊಂಡು ಮೇ 4ರ ವರೆಗೆ ವೇದಮೂರ್ತಿ ನೀಲಾವರ ಕೃಷ್ಣ ಅಡಿಗ ನೇತೃತ್ವದಲ್ಲಿನಾನಾ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ ಎಂದು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿಮಠದ ಟ್ರಸ್ಟಿ ಪಿ.ಎನ್ .ಐತಾಳ್ , ಸಮಾಜಸೇವಕ ಪ್ರಭಾಕರ ಕುಂಭಾಸಿ ಉಪಸ್ಥಿತರಿದ್ದರು.

ಓದಲೇ ಬೇಕಾದ ಸುದ್ದಿ