ಜೂಡೊ ಕ್ರೀಡೆ ಪ್ರೋತ್ಸಾಹ ಯೋಜನೆ

Contributed bymahammed.arif@timesgroup.com|Vijaya Karnataka

ಭಾರತವು 2030ರ ಕಾಮನ್‌ವೆಲ್ತ್‌ ಮತ್ತು 2036ರ ಒಲಿಂಪಿಕ್ಸ್‌ನಲ್ಲಿ ಜೂಡೊದಲ್ಲಿ ಪದಕ ಗೆಲ್ಲುವ ಗುರಿಯೊಂದಿಗೆ ಕರ್ನಾಟಕವನ್ನು ದೇಶದ ಪ್ರಮುಖ ಜೂಡೊ ತಾಣವನ್ನಾಗಿ ರೂಪಿಸಲಾಗುತ್ತಿದೆ. ಇದಕ್ಕಾಗಿ ರಾಜ್ಯ ಸರ್ಕಾರಕ್ಕೆ ಸಮಗ್ರ ಪ್ರಸ್ತಾವನೆ ಸಲ್ಲಿಸಲಾಗಿದೆ. ಉಡುಪಿ-ಮಂಗಳೂರು ಮತ್ತು ಉತ್ತರ ಕರ್ನಾಟಕದಲ್ಲಿ ಅತ್ಯಾಧುನಿಕ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಯುವ ಕ್ರೀಡಾಪಟುಗಳಿಗೆ ತರಬೇತಿ, ಪ್ರಾಯೋಜಕತ್ವ ಮತ್ತು ಉದ್ಯೋಗ ಭದ್ರತೆ ಒದಗಿಸಲಾಗುವುದು.

new strategy for judo sports promotion

ವಿಕ ಸುದ್ದಿಲೋಕ ಮಂಗಳೂರು

2030ರಲ್ಲಿನಡೆಯಲಿರುವ ಕಾಮನ್ ವೆಲ್ತ್ ಮತ್ತು 2036ರಲ್ಲಿನಡೆಯುವ ಒಲಿಂಪಿಕ್ಸ್ ನಲ್ಲಿಭಾರತ ತಂಡ ಜೂಡೊ ಸ್ಪೋರ್ಟ್ಸ್ನಲ್ಲಿಪದಕ ಗೆಲ್ಲುವುದಕ್ಕೆ ಪೂರಕವಾಗಿ ಕರ್ನಾಟಕವನ್ನು ದೇಶದ ಜೂಡೊ ಶಕ್ತಿ ಕೇಂದ್ರವಾಗಿ ಪರಿವರ್ತಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ರಾಜ್ಯ ಸರಕಾರಕ್ಕೆ ಸಮಗ್ರ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅಂತಾರಾಷ್ಟ್ರೀಯ ರೆಫ್ರಿ ಮತ್ತು ಕರ್ನಾಟಕ ಸ್ಟೇಟ್ ಜೂಡೋ ಸ್ಪೋರ್ಟ್ಸ್ ಅಸೋಸಿಯೇಶನ್ ಅಧ್ಯಕ್ಷ ಯತೀಶ್ ನಾರಾಯಣ ಬಂಗೇರ ಹೇಳಿದರು.

ಸುದ್ದಿಗೋಷ್ಠಿಯಲ್ಲಿಗುರುವಾರ ಮಾತನಾಡಿ, ಜೂಡೊದಲ್ಲಿಭಾರತಕ್ಕೆ ಗರಿಷ್ಠ ಪದಕ ಗೆಲ್ಲಿಸುವ ಗುರಿಯೊಂದಿಗೆ ಈ ಆಂದೋಲನ ಆರಂಭಿಸಲಾಗಿದೆ. ಜೂಡೊ ಅಭಿವೃದ್ಧಿಗಾಗಿ ಕಾರ್ಯತಂತ್ರ ರೂಪಿಸಿ, ಅದನ್ನು ಸರಿಯಾದ ಹಾದಿಗೆ ಮರಳಿಸುವ ನಿಟ್ಟಿನಲ್ಲಿತಳಮಟ್ಟದಲ್ಲಿನಾನಾ ಉಪಕ್ರಮಗಳನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ ಎಂದರು.

ಉಡುಪಿ- ಮಂಗಳೂರು ಮತ್ತು ಉತ್ತರ ಕರ್ನಾಟಕ ಭಾಗದಲ್ಲಿಅತ್ಯಾಧುನಿಕ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಹಾಲಿ ಕ್ರೀಡಾಪಟುಗಳು ಆ ವೇಳೆ ನಿವೃತ್ತಿ ಅಂಚಿಗೆ ಬರುವುದರಿಂದ ಹೊಸದಾಗಿ ಕ್ರೀಡಾಪಟುಗಳಿಗೆ ತರಬೇತಿ ನೀಡಿ ಸಿದ್ಧಪಡಿಸಲಾಗುವುದು ಎಂದರು.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಸಹಕಾರದೊಂದಿಗೆ ಯುವ ಕ್ರೀಡಾಪಟುಗಳಿಗೆ ತರಬೇತಿ, ಕಾರ್ಪೊರೇಟ್ ಪ್ರಾಯೋಜಕತ್ವ ಮತ್ತು ಕ್ರೀಡಾಪಟುಗಳ ಕಲ್ಯಾಣ , ಅಡಾಪ್ಟ್ ಎ ಚಾಂಪಿಯನ್ , ಸಿಒಆರ್ ಉಪಕ್ರಮಗಳ ಮೂಲಕ ಕ್ರೀಡಾಪಟುಗಳ ಪೋಷಣೆ, ಸಲಕರಣೆ ಮತ್ತು ಕ್ರೀಡಾಪಟುಗಳ ಉದ್ಯೋಗ ಭದ್ರತೆ ಒದಗಿಸುವ ನಿಟ್ಟಿನಲ್ಲಿಕ್ರಮ ವಹಿಸಲಾಗುವುದು. ಎಲ್ಲಜಿಲ್ಲೆಗಳಿಗೆ ಭೇಟಿ ನೀಡಲಾಗುವುದು ಎಂದು ಹೇಳಿದರು.

ವಕೀಲ ಎ.ಪಿ.ಮೊಂತೇರೊ ಸುದ್ದಿಗೋಷ್ಠಿಯಲ್ಲಿಉಪಸ್ಥಿತರಿದ್ದರು.

ಓದಲೇ ಬೇಕಾದ ಸುದ್ದಿ