(ಧಿಸೂಧಿಚನೆ ಇದೆ... ಮಸ್ಟ್ ಬಧಿಳಧಿಸಿ..ಧಿ) ನಗರದಲ್ಲಿಶ್ರದ್ಧಾ, ಭಕ್ತಿಯಿಂದ ನಡೆದ ಶಂಕರ ಜಯಂತಿ (ಫೋಟೊ ನೆನ್ನೆಯ ನ್ಯೂಸ್ ರಾರ ಯಪ್ ನಲ್ಲಿದೆ) * ಸಂದೇಶ ನೀಧಿಡಿದ ಖ್ಯಾತ ಜ್ಯೋತಿಷಿ ಬಿ.ಎಸ್ . ದ್ವಾರಕಾನಾಥ್ ಗುರೂಜಿ

Contributed bypunyavathi.hp@timesgroup.com|Vijaya Karnataka

ಬೆಂಗಳೂರಿನ ಎನ್.ಆರ್. ಕಾಲೊನಿಯಲ್ಲಿರುವ ಶ್ರೀ ಶಂಕರಾಚಾರ್ಯರ ದೇವಾಲಯದಲ್ಲಿ ಶಂಕರ ಜಯಂತಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಮಹಾಗಣಪತಿ ಪೂಜೆ, ಶತರುದ್ರಾಭಿಷೇಕ, ಫಲ ಪಂಚಾಮೃತ ಅಭಿಷೇಕ, ಸಹಸ್ರನಾಮ ಅರ್ಚನೆಗಳು ನಡೆದವು. ಜ್ಯೋತಿಷಿ ಬಿ.ಎಸ್. ದ್ವಾರಕಾನಾಥ್ ಗುರೂಜಿ ಅವರು ಶಂಕರಾಚಾರ್ಯರ ಕೊಡುಗೆಯನ್ನು ಸ್ಮರಿಸಿ, ತ್ರಿಮತಸ್ಥರು ಒಗ್ಗಟ್ಟಾಗಿ ದೇಶದ ಏಕತೆಗಾಗಿ ದುಡಿಯುವಂತೆ ಕರೆ ನೀಡಿದರು. ಕಮಲಾ ಮತ್ತು ಸಂಗಡಿಗರು ಸೌಂದರ್ಯ ಲಹರಿ, ದಕ್ಷಿಣ ಮೂರ್ತಿ ಅಷ್ಟಕ ಗಾಯನ ನಡೆಸಿಕೊಟ್ಟರು.

shankar jayanti celebrated with devotion and faith in the city

ವಿಕ ಸುದ್ದಿಲೋಕ ಬೆಂಗಳೂರು

ಎನ್ .ಆರ್ . ಕಾಲೊನಿಯ ಎಪಿಎಸ್ ಕಾಲೇಜಿನ ಮೈದಾನದ ಎದುರಿನ ಭ್ರಮರಾಂಬ ಸಹಿತ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಪ್ರತಿಷ್ಠಿತ ಶ್ರೀ ಶಂಕರಾಚಾರ್ಯರ ವಿಶೇಷ ದೇವಾಲಯದಲ್ಲಿಶಂಕರ ಜಯಂತಿಯ ಮಂಗಳಾಚರಣೆಯನ್ನು ಅತ್ಯಂತ ಶ್ರದ್ಧಾ, ಭಕ್ತಿಯಿಂದ ಆಚರಿಸಲಾಯಿತು.

ವಿದ್ವಾಂಸರೊಡಗೂಡಿ ಪ್ರಾತಃ ಕಾಲದಲ್ಲಿಮಹಾಗಣಪತಿ ಪೂಜೆ, ಗುರು ವಂದನೆ ಹಾಗೂ ಶತರುದ್ರಾಭಿಷೇಕ, ಫಲ ಪಂಚಾಮೃತ ಅಭಿಷೇಕ ಮತ್ತು ಸಹಸ್ರನಾಮ ಅರ್ಚನೆಗಳನ್ನು ನೆರವೇರಿಸಲಾಯಿತು. ಮಧ್ಯಾಹ್ನ ಮಹಾಮಂಗಳಾರತಿ ನಡೆಸಲಾಯಿತು.

ಶಂಕರ ಜಯಂತಿಯು ವೈಶಾಖ ಶುದ್ಧ ಪಂಚಮಿಯಂದು ಆರಂಭವಾಗಿ ದ್ವಾದಶಿಯಂದು ಅದನ್ನು ಸಂಪನ್ನಗೊಳಿಸಲಾಗಿದೆ. ಪ್ರತಿ ದಿನವೂ ಪ್ರಾತಃ ಕಾಲದಲ್ಲಿವಿಶೇಷ ಪೂಜೆಗಳನ್ನು ಕೈಗೊಂಡು ಶಂಕರಾಚಾರ್ಯರ ಅಷ್ಟೋತ್ತರ ಹಾಗೂ ರುದ್ರ ತ್ರಿಶತಿ, ಶಿವ ಸಹಸ್ರನಾಮಗಳನ್ನು ನಡೆಸಲಾಯಿತು. ಕೊನೆಯ ದಿನ ಮಂಗಳಾಚರಣೆಯನ್ನು ಮಾಡಿ ದೇವಸ್ಥಾನದ ಆವರಣದಲ್ಲೇ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ವಸ್ತ್ರ ದಾನಾದಿಗಳನ್ನು ಮಾಡಲಾಯಿತು.

ಶಂಕರ ಜಯಂತಿ ಯ ಸಂಪನ್ನ ಕಾರ್ಯಕ್ರಮದಲ್ಲಿಖ್ಯಾತ ಜ್ಯೋತಿಷಿ ಬಿ.ಎಸ್ . ದ್ವಾರಕಾನಾಥ್ ಗುರೂಜಿ ಅವರು ಪಾಲ್ಗೊಂಡು ಭಕ್ತರಿಗೆ ಆಶೀರ್ವಚನ ನೀಡುತ್ತಾ, ‘‘ಶಂಕರಾಚಾರ್ಯರು ಸನಾತನ ಧರ್ಮಕ್ಕೆ ದೊಡ್ಡ ಕೊಡುಗೆಯನ್ನು ಕೊಟ್ಟು ಹೋಗಿದ್ದಾರೆ. ಭಗವದ್ಗೀತೆ, ಬ್ರಹ್ಮಸೂತ್ರಗಳು ಮತ್ತು ಉಪನಿಷತ್ ಭಾಷ್ಯವನ್ನು ಬರೆದು ಮನುಷ್ಯನ ಜೀವನಕ್ಕೆ ಮಹದುಪಕಾರ ಮಾಡಿದ್ದಾರೆ. ಶಾಶ್ವತವಾಗಿ ಕಾಶ್ಮೀರದಲ್ಲಿಶಾರದೆಯನ್ನು ಸ್ಥಾಪಿಸಿ ಸರ್ವಜ್ಞ ಪೀಠಾರೋಹಣವನ್ನು ದಕ್ಷಿಣ ದ್ವಾರದಿಂದ ಮಾಡಿರುವ ಏಕೈಕ ಮಹನೀಯರು ಶ್ರೀ ಶಂಕರರು. ಮಧ್ವಾಚಾರ್ಯರು ಹಾಗೂ ರಾಮಾನುಜಾಚಾರ್ಯರು ಸಹ ಪ್ರಸ್ಥಾನ ತ್ರಯ ಭಾಷ್ಯವನ್ನು ಬರೆದರು. ಹಾಗಾಗಿ, ಆಚಾರ್ಯ/ಗುರು ಭೇದ ಭಾವವನ್ನು ನಾವು ಬೆಳೆಸಬಾರದು. ಶಂಕರ ಜಯಂತಿ ಆಚರಣೆಯಂತೆ ಮಧ್ವಾಚಾರ್ಯರ ಮತ್ತು ರಾಮಾನುಜಾಚಾರ್ಯರ ಜಯಂತಿಯನ್ನೂ ಆಚರಿಸಬೇಕು. ತ್ರಿಮತಸ್ಥರು ಎಲ್ಲರೂ ಸೇರಿ ದೇಶದ ಏಕತೆಗಾಗಿ ದುಡಿಯುವ ಸಮಯ ಬಂದಿದೆ,’ಧಿ’ ಎಂದರು.

ಇದೇ ವೇಳೆ ಕಮಲಾ ಮತ್ತು ಸಂಗಡಿಗರಿಂದ ಸೌಂದರ್ಯ ಲಹರಿ ದಕ್ಷಿಣ ಮೂರ್ತಿ ಅಷ್ಟಕ ಹಾಗೂ ಶಂಕರಾಚಾರ್ಯರು ರಚಿಸಿದ ಪದ್ಯ ರೂಪದ ಗೀತ ಗಾಯನ ನಡೆಸಿಕೊಟ್ಟರು.