2028ರ ವೇಳೆಗೆ ಕ್ವಾಂಟಮ್ ಸಿಟಿ ಪ್ರಗತಿ

Contributed byshashidhar.nandikal@timesgroup.com|Vijaya Karnataka

ಬೆಂಗಳೂರಿನಲ್ಲಿ ಕ್ವಾಂಟಮ್‌ ಸಿಟಿ ನಿರ್ಮಾಣ ಕಾರ್ಯ 2028ರೊಳಗೆ ಪೂರ್ಣಗೊಳ್ಳುವ ಗುರಿ ಹೊಂದಿದೆ. ಇದು ರಾಜ್ಯವನ್ನು ಕ್ವಾಂಟಮ್‌ ತಂತ್ರಜ್ಞಾನದ ಜಾಗತಿಕ ಕೇಂದ್ರವನ್ನಾಗಿಸಲಿದೆ. ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಸಂಶೋಧಕರು ಮತ್ತು ಉದ್ಯಮಿಗಳಿಗೆ ಬೆಂಬಲ ನೀಡಲಿದೆ. ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಯೋಜನೆ ರೂಪುಗೊಳ್ಳಲಿದೆ. ಇದು ರಾಜ್ಯದ ಆರ್ಥಿಕತೆಯನ್ನು ಬಲಪಡಿಸಲಿದೆ.

quantum city set for major development by 2028

ವಿಕ ಸುದ್ದಿಲೋಕ ಬೆಂಗಳೂರು ರಾಜ್ಯವನ್ನು ಕ್ವಾಂಟಮ್ ತಂತ್ರಜ್ಞಾನದ ಜಾಗತಿಕ ಕೇಂದ್ರವನ್ನಾಗಿಸುವ ನಿಟ್ಟಿನಲ್ಲಿಸ್ಥಾಪಿಸಧಿಲಾಗುತ್ತಿರುವ ‘ಕ್ವಾಂಟಮ್ ಸಿಟಿ’ ನಿರ್ಮಾಣ ಕಾರ್ಯದಲ್ಲಿ2028ರ ಒಳಗಾಗಿ ಗಮನಾರ್ಹ ಪ್ರಗತಿ ಸಾಧಿಸುವ ಗುರಿ ಹೊಂದಲಾಗಿದೆ. ಈ ಯೋಜನೆ 2035ರ ವೇಳೆಗೆ ರಾಜ್ಯದಲ್ಲಿ20 ಶತಕೋಟಿ ಡಾಲರ್ ಮೊತ್ತದ ಕ್ವಾಂಟಮ್ ಆರ್ಥಿಕತೆ ಸೃಷ್ಟಿಸುವ ಸರಕಾರದ ದೃಷ್ಟಿಕೋನವನ್ನು ಸಾಕಾರಗೊಳಿಸಲಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ, ಸಣ್ಣ ನೀರಾವರಿ ಸಚಿವ ಎನ್ . ಎಸ್ .ಬೋಸರಾಜು ತಿಳಿಸಿದ್ದಾರೆ. ಹೆಸರುಘಟ್ಟದ ಬಳಿ ಕ್ವಾಂಟಮ್ ಸಿಟಿಗಾಗಿ ಮಂಜೂರಾಗಿರುವ 6.23 ಎಕರೆ ಪ್ರದೇಶವನ್ನು ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿ ನಂತರ ಮಾತನಾಡಿದ ಅವರು, ‘‘ಕ್ವಾಂಟಮ್ ತಂತ್ರಜ್ಞಾನದಲ್ಲಿರಾಜ್ಯ ಈಗಾಗಲೇ ಮುಂಚೂಣಿಯಲ್ಲಿದೆ. ಉದ್ದೇಶಿತ ಕ್ವಾಂಟಮ್ ಸಿಟಿ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರಲಿದೆ. ಪೈಲೆಟ್ ಫ್ಯಾಬ್ರಿಕೇಶನ್ ಲೈನ್ಸ್ , ಕಾಮನ್ ಕಂಪ್ಯೂಟಿಂಗ್ ಮೂಲಸೌಕರ್ಯ, ಸಂಶೋಧನಾ ಪ್ರಯೋಗಾಲಯ ಹಾಗೂ ಸ್ಟಾರ್ಟ್ ಅಪ್ ಗಳಿಗಾಗಿ ವಿಶೇಷ ಕೆಲಸದ ಸ್ಥಳ ಮತ್ತು ಇನ್ ಕ್ಯುಬೇಶನ್ ಕೇಂದ್ರಗಳು ತಲೆ ಎತ್ತಲಿವೆ. ಈ ಮೂಲಕ ಸಂಶೋಧಕರಿಗೆ ಮತ್ತು ಉದ್ಯಮಿಗಳಿಗೆ ಒಂದೇ ಸೂರಿನಡಿ ಎಲ್ಲಾತಾಂತ್ರಿಕ ಬೆಂಬಲ ಲಭ್ಯವಾಗುವಂತೆ ಮಾಡಲಾಗುವುದು,’’ ಎಂದು ಮಾಹಿತಿ ನೀಡಿದರು. ‘‘ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮಾದರಿಧಿಯಲ್ಲಿಈ ಯೋಜನೆಯನ್ನು ಅಳವಡಿಸಿಧಿಕೊಳ್ಳುವ ಬಗ್ಗೆ ಐಐಎಸ್ ಸಿಯ ಪ್ರೊ.ಅರಿಂಧಮ್ ಘೋಷ್ ನೇತೃತ್ವದ ಟಾಸ್ಕ್ ಫೋರ್ಸ್ ಹಾಗೂ ಇತರ ಪಾಲುದಾರರೊಂದಿಗೆ ಶೀಘ್ರದಲ್ಲೆಸಮಾಲೋಚಿಸಲಾಗುವುದು. 2028ರ ಒಳಗಾಗಿ ಈ ಕೇಂದ್ರದ ನಿರ್ಮಾಣದಲ್ಲಿಭೌತಿಕಧಿವಾಗಿ ದೊಡ್ಡ ಮಟ್ಟದ ಬದಲಾವಣೆ ತರುವುದು ನಮ್ಮ ಆದ್ಯತೆಯಾಗಿದೆ,’’ ಎಂದು ಹೇಳಿದರು. ಭೂಮಿ ಪರಿಶೀಲನೆಯ ನಂತರ ಸಚಿವರು ಅಂತರಾಷ್ಟ್ರೀಯ ಸೈದ್ಧಾಂತಿಕ ವಿಜ್ಞಾನ ಕೇಂದ್ರದ ಕ್ಯಾಂಪಸ್ ಗೆ ಭೇಟಿ ನೀಡಿದರು. ಅಲ್ಲಿಕ್ವಾಂಟಮ್ ಸಂಶೋಧನೆಯಲ್ಲಿತೊಡಗಿರುವ ವಿಜ್ಞಾನಿಗಳೊಂದಿಗೆ ಮಾತುಕತೆ ನಡೆಸಿ ಭವಿಷ್ಯದ ತಾಂತ್ರಿಕ ಅಗತ್ಯಗಳ ಬಗ್ಗೆ ಮಾಹಿತಿ ಪಡೆದರು. ಈ ಕೇಂದ್ರವು ಕ್ವಾಂಟಮ್ ಸಿಟಿಯ ವೈಜ್ಞಾನಿಕ ಬೆಳವಣಿಗೆಯಲ್ಲಿಪ್ರಮುಖ ಪಾತ್ರ ವಹಿಸಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು. ಕೆಸ್ಟೆಫ್ಸ್ ವ್ಯವಸ್ಥಾಪಕ ನಿರ್ದೇಶಕ ಸದಾಶಿವ ಪ್ರಭು, ಐಸಿಟಿಎಸ್ ನಿರ್ದೇಶಕ ಪ್ರೊ.ರಾಜೇಶ್ ಗೋಪಕುಮಾರ್ , ಐಸಿಟಿಎಸ್ ಪ್ರಾಜೆಕ್ಟ್ ಹೆಡ್ ಪ್ರಸನ್ನ ಹಾಗೂ ಇಲಾಖೆಯ ಹಿರಿಯ

ಅಧಿಕಾರಿಗಳು ಪಾಲ್ಗೊಂಡಿದ್ದರು.