ವಿಕ ಸುದ್ದಿಲೋಕ ಮಂಗಳೂರು
ಇಂದಿನ ಮೆರವಣಿಗೆ ಉಡುಪಿಯಲ್ಲಿನಡೆಯುವ ಪರ್ಯಾಯ ಉತ್ಸವದ ಸಂಭ್ರಮವನ್ನು ಸ್ಮರಿಸುವಂತೆ ನಡೆದಿದೆ. ದೈವಜ್ಞ ಸಮಿತಿ ಹಾಗೂ ಸಮಾಜದ ಸಂಘಟಿತ ಪ್ರಯತ್ನವೇ ಇದಕ್ಕೆ ಕಾರಣ. ಸಜ್ಜನರ ಜೀವನದಲ್ಲಿಸಂಪತ್ತು ಮತ್ತು ಆಪತ್ತು ಸಹಜವಾಗಿ ಎದುರಾಗುತ್ತವೆ. ಇದಕ್ಕೆ ಮೂಲ ಪರಿಹಾರವೆಂದರೆ ಭಗವಂತನ ಪಾದಗಳಿಗೆ ಶರಣಾಗುವುದು. ಭಗವಂತನನ್ನು ಸ್ಮರಿಸುವವರ ಜೀವನದಲ್ಲಿಯಾವುದೇ ಕಷ್ಟಗಳು ಬರುವುದಿಲ್ಲ. ವಾದಿರಾಜ ಸ್ವಾಮಿಗಳು ತಮ್ಮ ವೃಂದಾವನವನ್ನು ತಾವೇ ನಿರ್ಮಿಸಿಕೊಂಡಿರುವುದು ಜಗತ್ತಿನಲ್ಲೇ ವಿಶಿಷ್ಟ ಸಂಗತಿ. ಸಮಾಜದಲ್ಲಿದ್ವೇಷವಿರಬಾರದು ಎಂಬ ಸಂದೇಶವನ್ನು ಅವರು ಪ್ರಾಣಿಗಳ ಮೂಲಕವೇ ತೋರಿಸಿಕೊಟ್ಟಿದ್ದಾರೆ. ಭಕ್ತರ ಇಚ್ಛೆಗಳನ್ನು ಈಡೇರಿಸುವ ಕಾಮಧೇನು ಸ್ವರೂಪರಾಗಿರುವ ವಾದಿರಾಜರನ್ನು ಸದಾ ಸ್ಮರಿಸುತ್ತಾ ಕೃತಜ್ಞತೆ ಸಲ್ಲಿಸುವುದು ಪ್ರತಿಯೊಬ್ಬರ ಕರ್ತವ್ಯ. ಸಮಾಜ ಇದಕ್ಕೆ ಧ್ವನಿಯಾಗಬೇಕು ಎಂದು ಸೋದೆ ಮಠಾಧೀಶ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು ಹೇಳಿದರು.
ಸೋದೆ ವಾದಿರಾಜ ಮಠದ ಪ್ರಮುಖ ಶಿಷ್ಯ ಸಮುದಾಯವಾದ ದೈವಜ್ಞ ಬ್ರಾಹ್ಮಣ ಶಿಷ್ಯ ವೃಂದದ ವತಿಯಿಂದ ಮಂಗಳೂರಿನ ಶರವು ಮಹಾಗಣಪತಿ ದೇವಸ್ಥಾನದ ಸಭಾಭವನದಲ್ಲಿಮಂಗಳವಾರ ನಡೆದ ದೈವಜ್ಞ ಗುರುವಂದನಾ ಮಹೋತ್ಸವದಲ್ಲಿಅವರು ಆಶೀರ್ವಚನ ನೀಡಿದರು.
ಪ್ರಾರಂಭದಲ್ಲಿಭೂತರಾಜರ ಪೂಜೆ ನಡೆದು, ಬಳಿಕ ನಾನಾ ಪೂಜಾ ಕಾರ್ಯಗಳು, ಮಾಲಾರ್ಪಣೆ, ಸಮಿತಿ ವತಿಯಿಂದ ಪಾದಪೂಜೆ, ಪುಷ್ಪಾರ್ಚನೆ, ಕನಕಾಭಿಷೇಕ ಬಳಿಕ ಭಿನ್ನವತ್ತಳೆ ಪ್ರದಾನ ಮಾಡಲಾಯಿತು. ನಂತರ ಪ್ರಸಾದ ವಿತರಣೆಯಾಗಿ, ಅನ್ನಸಂತರ್ಪಣೆ ಜರುಗಿತು.
ಶರವು ದೇವಸ್ಥಾನದ ಶಿಲೆಶಿಲೆ ಆಡಳಿತ ಮೊಕ್ತೇಸರ ಶರವು ರಾಘವೇಂದ್ರ ಶಾಸ್ತ್ರಿ, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಬಿಜೆಪಿ ಹಿರಿಯ ಮುಖಂಡ ನಾಗರಾಜ್ ಶೆಟ್ಟಿ ಭಾಗವಹಿಸಿದ್ದರು.
ಕಾರ್ಯದರ್ಶಿ ಎಸ್ .ವಿನೋದ್ ಕುಮಾರ್ ಶೇಟ್ , ಕೋಶಾಧಿಕಾರಿ ಚಂದ್ರಕಾಂತ ಪಿ. ಸಾನು, ಜತೆ ಕಾರ್ಯದರ್ಶಿ ಅನಿಲ್ ಸದಾನಂದ ಶೇಟ್ , ಕಾರ್ಯನಿರ್ವಾಹಕ ಎಂ.ಪ್ರಶಾಂತ್ ಶೇಟ್ , ಜತೆ ಕಾರ್ಯನಿರ್ವಾಹಕ ಎಂ.ನಿಶಾಂತ್ ಶೇಟ್ , ಜತೆ ಕೋಶಾಧಿಕಾರಿ ಗಣೇಶ್ ಕೆ.ಕೆ.ಆರ್ . ಶೇಟ್ , ಜತೆ ಕಾರ್ಯನಿರ್ವಾಹಕ ಕೆ.ಧೀರಜ್ ಜಿ.ಶೇಟ್ ಮತ್ತಿತರರು ಉಪಸ್ಥಿತರಿದ್ದರು.
ದೈವಜ್ಞ ಬ್ರಾಹ್ಮಣ ಶಿಷ್ಯ ವೃಂದದ ಅಧ್ಯಕ್ಷ ರವೀಂದ್ರ ಶೇಟ್ ಸ್ವಾಗತಿಸಿದರು. ಮಾರ್ಗದರ್ಶಕ ಸುಧಾಕರ ರಾವ್ ಪೇಜಾವರ ಕಾರ್ಯಕ್ರಮ ನಿರೂಪಿಸಿದರು.
ಬಾಕ್ಸ್
ಡೊಂಗರಕೇರಿ ಕೆನರಾ ಹೈಸ್ಕೂಲ್ ವೃತ್ತದಿಂದ ಶ್ರೀ ಶರವು ಮಹಾಗಣಪತಿ ದೇವಸ್ಥಾನದವರೆಗೆ ಶೋಭಾಯಾತ್ರೆ ನಡೆಯಿತು. ಮೆರವಣಿಗೆ ಸಾಗಿಬಂದ ಹಾದಿಯಲ್ಲಿನಾನಾ ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರು ಸ್ವಾಮೀಜಿಯವರನ್ನು ಗೌರವಿಸಿ, ಆಶೀರ್ವಾದ ಪಡೆದುಕೊಂಡರು. ಶೋಭಾಯಾತ್ರೆಯಲ್ಲಿಲಕ್ಷ್ಮೇನಾರಾಯಣ ದೇವರು, ಹಯಗ್ರೀವ ದೇವರು, ವಾದಿರಾಜ ಗುರು ಸಾರ್ವಭೌಮ, ವೇದಘೋಷ, ಸ್ವಾಮೀಜಿಯವರಿದ್ದ ಟ್ಯಾಬ್ಲೋ ಸೇರಿದಂತೆ ನಾನಾ ಸ್ತಬ್ಧ ಚಿತ್ರಗಳು, ಆನೆ ಹಾಗೂ ಕುದುರೆಗಳು, ನಾನಾ ದೇವರ ವೇಷಗಳನ್ನು ಹಾಕಿದ್ದ ಮಕ್ಕಳು ವಿಶೇಷ ಆಕರ್ಷಣೆಯಾಗಿತ್ತು. ಚೆಂಡೆ ಮೇಳ, ಭಜನಾ ತಂಡಗಳು, ಪೂರ್ಣಕುಂಭ ಹಿಡಿದ ಸುಮಂಗಲೆಯರು ಹಾಗೂ ಬೃಹತ್ ಸಂಖ್ಯೆಯಲ್ಲಿಸಮಾಜ ಬಾಂಧವರು ಭಾಗವಹಿಸಿದ್ದರು.
ಫೊಟೋ: 7ಎ-ಸೋದೆ1
ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿಯವರಿಗೆ ದೈವಜ್ಞ ಗುರುವಂದನೆ ಮಾಡಲಾಯಿತು.
ಫೊಟೋ: 7ಎ-ಸೋದೆ 2, 3, 4, 5
ಶೋಭಾಯಾತ್ರೆಯ ನಾನಾ ಚಿತ್ರಗಳು

