ಎಸ್ ಬಿ ಶೇರಿಕಾರ ಪ್ರೌಢ ಶಾಲೆಗೆ ಪ್ರತಿಶತ ಫಲಿತಾಂಶ

Contributed byvkkrpanchal@gmail.com|Vijaya Karnataka

ಚಿಟಗುಪ್ಪ ತಾಲೂಕಿನ ಮನ್ನಾಎಖೇಳ್ಳಿ ಗ್ರಾಮದ ಶ್ರೀ ಎಸ್.ಬಿ. ಶೇರಿಕಾರ ಪ್ರೌಢ ಶಾಲೆಯು 2026ರ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಸಾಧಿಸಿದೆ. ಒಟ್ಟು 48 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಎಲ್ಲರೂ ಉತ್ತೀರ್ಣರಾಗಿದ್ದಾರೆ. ಅರ್ಚನಾ, ಸೈಯಧಾ ಫರಾ, ವೈಷ್ಣವಿ.ವಿ ಅವರು ಉತ್ತಮ ಅಂಕಗಳೊಂದಿಗೆ ಶಾಲೆಯ ಗೌರವ ಹೆಚ್ಚಿಸಿದ್ದಾರೆ. ಸಂಸ್ಥೆಯ ಪದಾಧಿಕಾರಿಗಳು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

sb sherikara high school achieves 100 result in 2026 sslc examination

ಚಿತ್ರ27ಎಂಎನಕೆ2

ಎಸ್ ಬಿ ಶೇರಿಕಾರ ಪ್ರೌಢಶಾಲೆಯ ಮಕ್ಕಳು.

****

ಎಸ್ ಬಿ ಶೇರಿಕಾರ ಪ್ರೌಢ ಶಾಲೆಗೆ ಪ್ರತಿಶತ ಫಲಿತಾಂಶ

ವಿಕ ಸುದ್ದಿಲೋಕ ಚಿಟಗುಪ್ಪ

ತಾಲೂಕಿನ ಮನ್ನಾಎಖೇಳ್ಳಿ ಗ್ರಾಮದ ಶ್ರೀ ಎಸ್ ಬಿ ಶೇರಿಕಾರ ಪ್ರೌಢ ಶಾಲೆ 2026ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿಪ್ರತಿಶತ ಫಲಿತಾಂಶ ಬಂದಿದೆ.

ಒಟ್ಟು 48 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಎಲ್ಲರೂ ಉತ್ತೀರ್ಣರಾಗಿದ್ದಾರೆ. ಇವರಲ್ಲಿ10 ಮಂದಿ ಅಗ್ರಶೇಣಿ, 31 ಮಂದಿ ಪ್ರಥಮ ಶ್ರೇಣಿ, 6 ಮಂದಿ ದ್ವಿತೀಯ ಶ್ರೇಣಿ ಹಾಗೂ 1 ವಿದ್ಯಾರ್ಥಿ ತೃತೀಯ ಶ್ರೇಣಿಯಲ್ಲಿಉತ್ತೀರ್ಣರಾಗಿದ್ದಾರೆ. ಶಾಲೆಯ ವಿದ್ಯಾರ್ಥಿಗಳಾದ ಅರ್ಚನಾ (ಶೇ.93.76), ಸೈಯಧಾ ಫರಾ ಶೇ.92.80, ಮತ್ತು ವೈಷ್ಣವಿ.ವಿ ಶೇ.91.68 ಉತ್ತಮ ಅಂಕ ಪಡೆದು ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಗೌರವಾಧ್ಯಕ್ಷ ನಾಡೋಜ ಡಾ. ಬಸವಲಿಂಗ ಪಟ್ಟಾದೇವರು, ಭಾಲ್ಕಿ ಹಿರೇಮಠದ ಶ್ರೀಗುರುಬಸವ ಪಟ್ಟದ್ದೇವರು, ಅಧ್ಯಕ್ಷೆ ಮಾತೆ ಮೈತ್ರಾದೇವಿ ತಾಯಿ, ನಿರ್ದೇಶಕರಾದ ಡಾ. ನೀತಾ, ಡಾ. ಶೈಲೆಂದ್ರ ಬೆಲ್ದಾಳೆ, ನಾಗರಾಜ ಶೇರಿಕಾರ, ಆಡಳಿತಾಧಿಕಾರಿ ಶಾರದಾ ಪಾಟೀಲ್ , ಮುಖ್ಯಗುರು ಗುರುಲಿಂಗಪ್ಪ ಉಳ್ಳಾಗಡ್ಡಿ ಸೇರಿ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.

****

ಸಂಸ್ಥೆಯ ಗೌರವಾಧ್ಯಕ್ಷರಾದ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಹಾಗೂ ಭಾಲ್ಕಿಯ ಶ್ರೀಗುರುಬಸವ ಪಟ್ಟದೇವರ ಸಲಹೆ ಮಾರ್ಗದರ್ಶನದಂತೆ ನಮ್ಮ ಶಾಲೆಯ ವಿದ್ಯಾರ್ಥಿಗಳು ನಿರಂತರ ಪರಿಶ್ರಮ ಮತ್ತು ಶಿಕ್ಷಕರ ಮಾರ್ಗದರ್ಶನದಿಂದ ಈ ಬಾರಿಯು ಶೇ.100 ಫಲಿತಾಂಶ ಸಾಧಿಸಿದ್ದಾರೆ.

- ಮಾತೆ ಮೈತ್ರಾದೇವಿ ತಾಯಿ, ಸಂಸ್ಥೆ ಅಧ್ಯಕ್ಷರು