ಯಲ್ಲಾಪುರ

Contributed bynagarajmadguni@gmail.com|Vijaya Karnataka

ಯಲ್ಲಾಪುರದಲ್ಲಿ ಉತ್ತರ ಕನ್ನಡ ಜಿಲ್ಲಾ ಡಾ.ಬಿ.ಆರ್‌. ಅಂಬೇಡ್ಕರ್‌ ಮೆಮೊರಿಯಲ್‌ ಟ್ರಸ್ಟ್‌ ಉದ್ಘಾಟನೆಗೊಂಡಿತು. ಡಾ. ಅಂಬೇಡ್ಕರ್‌ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಶಾಸಕ ಶಿವರಾಮ ಹೆಬ್ಬಾರ್‌ ಅವರು ಅಂಬೇಡ್ಕರ್‌ ಕೇವಲ ವ್ಯಕ್ತಿಯಲ್ಲ, ಶಕ್ತಿ ಎಂದು ಬಣ್ಣಿಸಿದರು. ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಂವಿಧಾನದ ಆಶಯಗಳಂತೆ ಎಲ್ಲರೂ ಸಮಾನ ಹಕ್ಕು ಹೊಂದಿದ್ದಾರೆ ಎಂದು ತಿಳಿಸಲಾಯಿತು.

inauguration of the dr br ambedkar memorial trust against caste politics

ಡಾ.ಅಂಬೇಡ್ಕರ್ ಕೇವಲ ವ್ಯಕ್ತಿ¿ಲ್ಲ, ಶಕ್ತಿ

-ಉತ್ತರ ಕನ್ನಡ ಜಿಲ್ಲಾಡಾ.ಬಿ.ಆರ್ . ಅಂಬೇಡ್ಕರ್ ಮೆಮೊರಿಯಲ್ ಟ್ರಸ್ಟ್ ಉದ್ಘಾಟನೆ

ವಿಕ ಸುದ್ದಿಲೋಕ ಯಲ್ಲಾಪುರ

ಮಾನವ ಜಾತಿಯೇ ಮನುಷ್ಯ ಜಾತಿ ಎಂಬ ಸಂದೇಶ ಸಾರಿದ ಡಾ. ಬಿ.ಆರ್ ಅಂಬೇಡ್ಕರ್ ಕೇವಲ ವ್ಯಕ್ತಿಯಾಗಿರದೇ ಶಕ್ತಿಯಾಗಿದ್ದಾರೆ. ಸಾರ್ವಜನಿಕವಾಗಿ ಜಾತಿಯ ವಾಸನೆಯಿಂದ ದೂರವಾಗಿ ಎಲ್ಲರನ್ನೂ ಸಮಾನವಾಗಿ ಕಂಡಾಗ ಡಾ.ಬಿ.ಆರ್ ಅಂಬೇಡ್ಕರ್ ರಚಿತ ಸಂವಿಧಾನಕ್ಕೆ ಬೆಲೆ ನೀಡಿದಂತಾಗುತ್ತದೆ ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.

ಪಟ್ಟಣದಲ್ಲಿಉತ್ತರ ಕನ್ನಡ ಜಿಲ್ಲಾಡಾ.ಬಿ.ಆರ್ . ಅಂಬೇಡ್ಕರ್ ಮೆಮೊರಿಯಲ್ ಟ್ರಸ್ಟ್ ಉದ್ಘಾಟಿಸಿ, ಡಾ. ಅಂಬೇಡ್ಕರ್ ಜಯಂತಿ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.

‘‘ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಿದ ಅವರು ಈ ವೇದಿಕೆಯಲ್ಲಿಸನ್ಮಾನಿತರಾದರೆ ಸಾಲದು, ಸಮಾಜದ ಅನೇಕ ಸ್ತರಗಳಲ್ಲಿಸನ್ಮಾನಿತರಾಗಬೇಕು. 21ನೇ ಶತಮಾನ ಜಾತಿಯತೆಯ ಕಾಲವಲ್ಲ, ಪ್ರತಿಭೆಯ ಸನ್ಮಾನದ ಕಾಲ. ಪುಸ್ತಕದ ಜ್ಞಾನದ ಜೊತೆಗೆ ಸಮಾಜದ ಆಗುಹೋಗುಗಳ ಜ್ಞಾನ ಪಡೆಯಬೇಕು’’ ಎಂದು ಕರೆ ನೀಡಿದರು.

ಎಂಎಲ್ ಸಿ ಶಾಂತಾರಾಮ ಸಿದ್ದಿ ಮಾತನಾಡಿ, ‘‘ಸಮಾಜದಲ್ಲಿಸಮಾನವಾಗಿ ಬದುಕುತ್ತಿದ್ದೇವೆ ಎಂದರೆ ಅದಕ್ಕೆ ಅಂಬೇಡ್ಕರ್ ರಚಿತ ಸಂವಿಧಾನ ಕಾರಣವಾಗಿದೆ. ನಮ್ಮಜಾತಿಯನ್ನು ಹೇಳಿಕೊಳ್ಳಲು ಅಂಜಬಾರದು. ಇದು ಜಾತಿಯ ಸಂಘಟನೆಗೆ ಹೊಡೆತ ನೀಡುತ್ತದೆ’’ ಎಂದರು.

ಕೆಪಿಸಿಸಿ ಸದಸ್ಯ ವಿವೇಕ ಹೆಬ್ಬಾರ ಮಾತನಾಡಿ, ‘‘ಎಲ್ಲರೂ ಸಮಾನ ಹಕ್ಕು ಹೊಂದಿದ್ದು, ಡಾ.ಅಂಬೇಡ್ಕರ್ ಹಾಕಿಕೊಟ್ಟ ಹಾದಿಯಲ್ಲಿನಡೆಯುವ ಮೂಲಕ ಸಂವಿಧಾನದ ಆಶಯಗಳಿಗೆ ಸ್ಪಂದಿಸಬೇಕು’’ ಎಂದರು.

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ರಾಜ್ಯ ಸಂಚಾಲಕ ಎಸ್ .ಫಕೀರಪ್ಪ, ಯಲ್ಲಪ್ಪ ಹೊಸಮನಿ, ವಿಲ್ಸನ್ ಫರ್ನಾಂಡಿಸ್ ಮಾತನಾಡಿದರು. ಜಿಲ್ಲಾಧ್ಯಕ್ಷ ಈರಣ್ಣ ವಡ್ಡರ್ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಸುಬ್ರಾಯ ಬಿದ್ರೆಮನೆ, ವಿವಿಧ ಸಂಘಟನೆಗಳ

ಪ್ರಮುಖರಾದ ಎಸ್ .ಫಕೀರಪ್ಪ, ಚಿದಾನಂದ ಹರಿಜನ, ಭೀಮಶಿ ವಾಲ್ಮೀಕಿ, ಮಾರುತಿ ಬೋವಿವಡ್ಡರ್ , ನಾಗೇಶ ಬೋವಿವಡ್ಡರ್ , ದ್ಯಾಮಣ್ಣ ಬೋವಿವಡ್ಡರ್ , ಅರ್ಜುನ ಬೆಂಗೇರಿ, ಗಿರೀಶ ಎಸ್ .ಎಸ್ , ಸುಮನ್ .ಜಿ ಹರಿಜನ, ಹನುಮಂತಪ್ಪ, ಎಂ.ಡಿ ಮುಲ್ಲಾ, ರಾಮು ನಾಯ್ಕ, ಗಣೇಶ ಹೆಗಡೆ ಪಣತಗೇರಿ, ವಿ.ಎಸ್ ಭಟ್ಟ ಉಪಳೇಶ್ವರ ಇನ್ನಿತರರು ಇದ್ದರು. ಕೇಬಲ್ ನಾಗೇಶ ನಿರೂಪಿಸಿದರು.

29ವೈಎಲಪಿ1

ಉತ್ತರಕನ್ನಡ ಜಿಲ್ಲಾಅಂಬೇಡ್ಕರ್ ಮೆಮೊರಿಯಲ್ ಟ್ರಸ್ಟ್ ಉದ್ಘಾಟನಾ ಸಮಾರಂಭದಲ್ಲಿಪ್ರತಿಭಾನ್ವಿತ ವಿದ್ಯರ್ಥಿಗಳನ್ನು ಸನ್ಮಾನಿಸಲಾಯಿತು.