ನೇಣು ಬಿಗಿದುಕೊಂಡು ಪಿಎಸ್ ಐ ಪತ್ನಿ ಆತ್ಮಹತ್ಯೆ
ವಿಕ ಸುದ್ದಿಲೋಕ ಬೀರೂರು (ಚಿಕ್ಕಮಗಳೂರು)
ಪಟ್ಟಣದ ಪೊಲೀಸ್ ಠಾಣೆಯ ಪಿಎಸ್ ಐ ಡಿ.ವಿ.ತಿಪ್ಪೇಶ್ ಅವರ ಪತ್ನಿ ಎಸ್ .ಜಿ.ಪದ್ಮಾವತಮ್ಮ(36) ಪಟ್ಟಣದ ರಾಜಾಜಿನಗರದ ಬಾಡಿಗೆ ಮನೆಯಲ್ಲಿಮಂಗಳವಾರ ರಾತ್ರಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಮೃತ ಪದ್ಮಾವತಮ್ಮ ಮೂಲತಃ ಚಿಕ್ಕಬಳ್ಳಾಪುರದ ಗೌರಿಬಿದನೂರಿನವರು. ದಾವಣಗೆರೆ ಮೂಲದ ಪಿಎಸ್ ಐ ಡಿ.ವಿ.ತಿಪ್ಪೇಶ್ ಅವರೊಂದಿಗೆ ಸುಮಾರು 15 ವರ್ಷಗಳ ಹಿಂದೆ ಪ್ರೇಮ ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದು, ಪತಿ ಕುಟುಂಬಕ್ಕೆ ಸಮಯ ಕೊಡುತ್ತಿಲ್ಲಎನ್ನುವ ಆಕ್ಷೇಪಣೆಗಳಿಂದ ಪದ್ಮಾವತಮ್ಮ ಮಾನಸಿಕವಾಗಿ ನೊಂದಿದ್ದರು ಎಂದು ಹೇಳಲಾಗಿದೆ.
ಪತಿ ಮಂಗಳವಾರ ರಾತ್ರಿ ಕರ್ತವ್ಯದ ಮೇಲೆ ತೆರಳಿದ್ದಾಗ 2.15ರ ಸುಮಾರಿಗೆ, ಮನೆಯ ಮೇಲಿನ ಕೊಠಡಿಗೆ ತೆರಳಿ ಚಾವಣಿ ಫ್ಯಾನ್ ಗೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಘಟನೆ ಮಾಹಿತಿ ತಿಳಿದು ಬುಧವಾರ ಬೆಳಗ್ಗೆ ಚಿಕ್ಕಮಗಳೂರು ಎಎಸ್ ಪಿ ಜಯಕುಮಾರ್ ಸ್ಥಳಕ್ಕೆ ಭೇಟಿ ನೀಡಿದರು. ತರೀಕೆರೆ ಡಿಎಸ್ ಪಿ ಪರಶುರಾಮಪ್ಪ ನೇತೃತ್ವದಲ್ಲಿಪರಿಶೀಲನೆ ನಡೆಸಿ ಮಧ್ಯಾಹ್ನ 12.30ರ ವೇಳೆಗೆ ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯಲ್ಲಿಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು.
ಮೃತ ಮಹಿಳೆಯ ತಾಯಿ ನೀಡಿದ ದೂರಿನ ಅನುಸಾರ ಬೀರೂರು ಠಾಣೆಯಲ್ಲಿಅಸ್ವಾಭಾವಿಕ ಸಾವು ಪ್ರಕರಣ ದಾಖಲಾಗಿದೆ.
29 dåಡಿOಡಿ ಟಿhತಿ*- 1 ಪದ್ಮಾವತಮ್ಮ

