ಎಐ ಜತೆಗೆ ಸವಾಲುಗಳ ಎದುರಿಸಿ

Contributed bykeremane1964@gmail.com|Vijaya Karnataka

ಶೃಂಗೇರಿಯ ಮೆಣಸೆಯಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಸಿಎ ವಿಭಾಗದ ನೂತನ ಕಟ್ಟಡ ಉದ್ಘಾಟನೆಗೊಂಡಿತು. ಒಳಾಂಗಣ ಕ್ರೀಡಾಂಗಣ ಹಾಗೂ ಆಡಿಟೋರಿಯಂಗೆ ಶಂಕುಸ್ಥಾಪನೆ ನೆರವೇರಿತು. ಪದವಿ ಪಡೆದ ವಿದ್ಯಾರ್ಥಿಗಳಿಗೆ ಕೃತಕ ಬುದ್ಧಿಮತ್ತೆ (ಎಐ) ಸವಾಲಾಗಿದ್ದು, ಅದರೊಂದಿಗೆ ಬದುಕಲು ಸಿದ್ಧರಾಗಬೇಕು ಎಂದು ಪ್ರಾಂಶುಪಾಲರು ತಿಳಿಸಿದರು. ಶಾಸಕ ಟಿ.ಡಿ.ರಾಜೇಗೌಡ ಕಾಲೇಜಿನ ಅಭಿವೃದ್ಧಿಗೆ ಅನುದಾನ ನೀಡಲಾಗಿದೆ ಎಂದರು.

awareness about ai impact at bhadravati college

ಎಐ ಜತೆಗೆ ಸವಾಲುಗಳ ಎದುರಿಸಿ

- ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿಕಟ್ಟಡ ಉದ್ಘಾಟನೆ

ವಿಕ ಸುದ್ದಿಲೋಕ ಶೃಂಗೇರಿ

ಪದವಿ ಪಡೆದಿರುವ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿಕೃತಕ ಬುದ್ಧಿಮತ್ತೆ (ಎಐ) ಸವಾಲಾಗಿದ್ದು, ಅದರ ಜತೆಗೇ ಬದುಕಿ ಸಮಸ್ಯೆಗಳನ್ನು ಎದುರಿಸಬೇಕಿದೆ ಎಂದು ಭದ್ರಾವತಿ ಬಿಜಿಎಸ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಹರಿಣಾಕ್ಷಿ ಹೇಳಿದರು.

ಮೆಣಸೆಯಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿಬುಧವಾರ ಏರ್ಪಡಿಸಿದ್ದ ಬಿಸಿಎ ವಿಭಾಗದ ಕಟ್ಟಡ ಉದ್ಘಾಟನೆ, ಒಳಾಂಗಣ ಕ್ರೀಡಾಂಗಣ ಹಾಗೂ ಆಡಿಟೋರಿಯಂಗೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿಮಾತನಾಡಿದರು.

ಈಗಿನವರೆಗೂ ಸಾಫ್ಟ್ ವೇರ್ ಗೆ ಉತ್ತಮ ಉದ್ಯೋಗವಕಾಶ ನೀಡಿದ್ದು, ಜತೆಗೆ ಕೈತುಂಬ ಸಂಬಳವೂ ದೊರಕುತ್ತಿತ್ತು. ಇದೀಗ ಎಐ ನಿಂದ ಸಾಕಷ್ಟು ಉದ್ಯೋಗ ಕಳೆದುಕೊಳ್ಳುವ ಭೀತಿ ಉಂಟಾಗಿದೆ. ಇದುವರೆಗೂ ಕಲಾ ವಿಭಾಗವನ್ನು ಬಹುತೇಕ ವಿದ್ಯಾರ್ಥಿಗಳು ನಿರ್ಲಕ್ಷಿಸುತ್ತಿದ್ದರು. ಈಗ ಕಲಾ ವಿಭಾಗಕ್ಕೆ ಬೇಡಿಕೆ ಹೆಚ್ಚಿದೆ. ವಿದ್ಯಾರ್ಥಿ ಜೀವನವನ್ನು ಶೋಕಿಗಾಗಿ ಮಾಡದೆ, ಕಷ್ಟಪಟ್ಟು ಓದಿ ಯಶಸ್ಸುಗಳಿಸಿ. ಉಪನ್ಯಾಸಕ ವೃತ್ತಿಗೆ ಎಂದೂ ಭವಿಷ್ಯವಿದ್ದು, ಇದು ಕೊರೊನಾ ಕಾಲದಲ್ಲಿಸಾಬೀತಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಟಿ.ಡಿ.ರಾಜೇಗೌಡ, 2007ರಲ್ಲಿಆರಂಭಗೊಂಡ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅಭಿವೃದ್ಧಿಗೆ ಕಳೆದ ಐದು ವರ್ಷದಲ್ಲಿ6-7 ಕೋಟಿ ರೂ. ಅನುದಾನ ನೀಡಲಾಗಿದೆ. ಬಿಸಿಎ ತರಗತಿಗೆ ಇದೀಗ ಹೆಚ್ಚುವರಿ ಕೊಠಡಿ ಉದ್ಘಾಟಿಸಲಾಗಿದ್ದು, ಹೆಚ್ಚುವರಿ ಕಂಪ್ಯೂಟರ್ ನೀಡಲಾಗುತ್ತದೆ. ಶಿಕ್ಷಣ ಈಗ ಎಲ್ಲರಿಗೂ ಅಗತ್ಯವಾಗಿದ್ದು, ಕೂಲಿ ಕೆಲಸ ಮಾಡುವ ವ್ಯಕ್ತಿಗೂ ಕನಿಷ್ಠ ಶಿಕ್ಷಣ ಅಗತ್ಯವಾಗಿದೆ. ಪದವಿ ಶಿಕ್ಷಣ ಜೀವನದ ದಿಕ್ಕನ್ನು ತೋರಿಸುವ ಹಂತವಾಗಿದ್ದು, ದಾರಿ ತಪ್ಪದಂತೆ ಗುರಿಯೆಡೆಗೆ ಸಾಗಬೇಕು. ಸರಕಾರಿ ಕಾಲೇಜಿನಲ್ಲಿದೊರಕುತ್ತಿರುವ ಶಿಕ್ಷಣವನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಕಾಲೇಜಿನ ಸಾಂಸ್ಕೃತಿಕ ಚಟುವಟಿಕೆ ಸಮಾರೋಪ ಹಾಗೂ ವಿವಿಧ ವಿಭಾಗದಲ್ಲಿಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಇದೇ ಸಂದರ್ಭದಲ್ಲಿಪುರಸ್ಕರಿಸಲಾಯಿತು. ಪ್ರಾಂಶುಪಾಲರಾದ ಭಾರತಿ, ಸಮಿತಿ ಕಾರ್ಯಾಧ್ಯಕ್ಷ ತ್ರಿಮೂರ್ತಿ, ರವಿಶಂಕರ್ , ರಾಮಣ್ಣ, ಮಂಜುನಾಥ್ , ಉಪನ್ಯಾಸಕರಾದ ಆಶಾ, ಮಂಜುನಾಥ್ , ರಾಘವೇಂದ್ರ ರೆಡ್ಡಿ ಇತರರು ಇದ್ದರು.

29ಶ್ರೀ1-

ಶೃಂಗೇರಿಯ ಮೆಣಸೆಯಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿಬಿಸಿಎ ವಿಭಾಗದ ಕಟ್ಟಡ ಉದ್ಘಾಟನೆ, ಒಳಾಂಗಣ ಕ್ರೀಡಾಂಗಣ ಹಾಗೂ ಆಡಿಟೋರಿಯಂಗೆ ಶಾಸಕ ಟಿ.ಡಿ.ರಾಜೇಗೌಡ ಶಂಕುಸ್ಥಾಪನೆ ನೆರವೇರಿಸಿದರು.