ಉನ್ನತ ಶಿಕ್ಷಣಕ್ಕೆ ಸ್ಕಾಲರಶಿಪ್ ಬಲ
ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯಬೇಕು ಎಂಬುದು ಹಲವರ ಕನಸು. ಪ್ರತಿಭಾವಂತರಾಗಿದ್ದರೂ ಹಲವು ವಿದ್ಯಾರ್ಥಿಗಳಿಗೆ ಆರ್ಥಿಕ ಸೌಲಭ್ಯದ ಕೊರತೆಯಿಂದ ಉನ್ನತ ಶಿಕ್ಷಣ ಪಡೆಯುವುದಕ್ಕೆ ಸಾಧ್ಯವಾಗುವುದಿಲ್ಲ. ಇನ್ನು ವಿದೇಶದಲ್ಲಿಉನ್ನತ ಶಿಕ್ಷಣ ಪಡೆಯುವುದು ಅಂದರೆ ಕನಸಿನ ಮಾತು. ಎಸ್ ಎಸ್ ಎಲ್ ಸಿನಲ್ಲಿ, ಪಿಯುನಲ್ಲಿಡಿಸ್ಟಿಂಕ್ಷನ್ ನಲ್ಲಿಉತ್ತೀರ್ಣರಾಗಿರುತ್ತಾರೆ, ಗ್ರಾಮೀಣ ಪ್ರದೇಶ ಆಗಿರುವುದರಿಂದ ಉನ್ನತ ಶಿಕ್ಷಣ ಪಡೆಯಬೇಕು ಅಂದರೆ ಹಾಸ್ಟೆಲ್ ನಲ್ಲಿದ್ದುಕೊಂಡೇ ಓದಬೇಕು. ಹಾಸ್ಟೆಲ್ ಖರ್ಚು, ಕಾಲೇಜು ಶುಲ್ಕ ಕಟ್ಟುವುದು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗೆ ಕಷ್ಟ ಸಾಧ್ಯ. ಮುಂದಿನ ವಿದ್ಯಾಭ್ಯಾಸಕ್ಕೆ ಹೋಗಬೇಕು ಅಂದ್ರೆ ಹಣ ಬೇಕು. ಅಷ್ಟೊಂದು ದುಡ್ಡು ಎಲ್ಲಿಂದ ರೋದು ಅಂತಂದುಕೊಂಡು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಮುಂದಿನ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸುತ್ತಾರೆ. ಆದರೆ ಈಗ ಚಿಂತಿಸಬೇಕಾಗಿಲ್ಲ.
ಪ್ರತಿಭಾವಂತ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಆಸೆಗೆ ಹಲವು ಸ್ಕಾಲರ್ ಶಿಪ್ ಗಳ ಆಸರೆ ಲಭ್ಯ. ಇಂದು ನಮ್ಮ ದೇಶದ ವಿಶ್ವವಿದ್ಯಾನಿಲಯಗಳು, ಶೈಕ್ಷಣಿಕ ಸಂಸ್ಥೆಗಳು, ಎನ್ ಜಿಒಗಳು ಸೇರಿದಂತೆ ವಿದೇಶೀ ವಿಶ್ವವಿದ್ಯಾನಿಲಯಗಳೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಕ್ಷಣದ ಸಂಪೂರ್ಣ ವೆಚ್ಚವನ್ನು ಭರಿಸಲು ಸಿದ್ಧವಿರುತ್ತದೆ.
ಸ್ಕಾಲರ್ ಶಿಪ… ಪಡೆಯುವುದು ಅಂದರೆ ವಿದ್ಯಾರ್ಥಿಗಳ, ಪೋಷಕರ ಮತ್ತು ಕಲಿಯುತ್ತಿರುವ ವಿದ್ಯಾಸಂಸ್ಥೆಗಳಿಗೆ ಹೆಮ್ಮೆಯ ವಿಷಯ. ಅನೇಕ ವಿದ್ಯಾಸಂಸ್ಥೆಗಳು, ಎನ್ ಜಿಒಗಳು, ವಿದೇಶೀ ವಿಶ್ವವಿದ್ಯಾಲಯಗಳು ಸ್ಕಾಲರ್ ಶಿಪ್ ನೀಡುವ ಮಾಹಿತಿ ಕಾಲೇಜು ಆಥವಾ ಶಿಕ್ಷಣ ಸಂಸ್ಥೆಯ ವೆಬ್ ಸೈಟ್ ನಿಂದ ಪಡೆದುಕೊಂಡು ಸ್ಕಾಲರ್ ಶಿಪ್ ಗೆ ಅರ್ಜಿ ಸಲ್ಲಿಸಬಹುದು.
ಶಿಕ್ಷಣ ಅಭಿವೃದ್ಧಿಯ ಅವಿಭಾಜ್ಯ ಅಂಗ
ಪ್ರತಿಯೊಂದು ರಾಷ್ಟ್ರದ ಸರ್ವತೋಮುಖ ಅಭಿವೃದ್ದಿಯು ಆ ರಾಷ್ಟ್ರದ ಶಿಕ್ಷಣದ ಗುಣಮಟ್ಟ, ಶಿಕ್ಷಿತರ ಪ್ರಮಾಣ, ಶಿಕ್ಷಣ ವ್ಯವಸ್ಥೆ, ಮಾನವ ಅಭಿವೃದ್ದಿಯ ಸೂಚ್ಯಂಕ ಮುಂತಾದ ವಿಷಯಗಳ ಮೇಲೆ ಅವಲಂಬಿತವಾಗಿರುತ್ತದೆ. ಶಿಕ್ಷಣವು ಪ್ರತಿಯೊಂದು ಕ್ಷೇತ್ರದ ಅಭಿವೃದ್ಧಿಯ ಅವಿಭಾಜ್ಯ ಅಂಗ. ಆದ್ದರಿಂದ ಯಾವುದೇ ರಾಷ್ಟ್ರದ ಸಮಗ್ರ ಅಭಿವೃದ್ದಿಗೆ ಅಲ್ಲಿನ ಶಿಕ್ಷಣ ಕ್ರಮವೇ ಕಾರಣವಾಗುತ್ತದೆ. ಅಲ್ಲದೇ ಪ್ರತಿಯೊಬ್ಬ ಮಾನವನಿಗೆ ಮಾನವೀಯತ್ವ ಪ್ರಾಪ್ತವಾಗಬೇಕಾದರೆ ಶಿಕ್ಷಣ ಅವಶ್ಯಕ. ಶಿಕ್ಷಣವು ಮಾನವನ ಮನಸ್ಸು, ಬುದ್ಧಿ, ದೇಹಗಳಿಗೆ ದೊರೆಯುವ ಒಂದು ಸಂಸ್ಕಾರ. ಈ ಸಂಸ್ಕಾರವು ಮನುಷ್ಯನಿಗೆ ಸಕಾಲದಲ್ಲಿಸಿಗದಿದ್ದರೆ ಆತನು ಸುಖ-ಸಂತೋಷದ ಜೀವನ ಪಡೆಯಲು ಸಾಧ್ಯವಿಲ್ಲ. ಅದಕೋಸ್ಕರವೇ ನಮ್ಮ ಈಶೋಪನಿಷತ್ತಿನಲ್ಲಿವಿದ್ಯೆಯಿಂದ ಅಮೃತವು ಪಾಪ್ತವಾಗುತ್ತದೆಯೆಂದು, ಭಗವದ್ಗೀತೆಯಲ್ಲಿನಹೀ ಜ್ಞಾನೇನ ಸದೃಶಂ ಪವಿತ್ರ ಮಿಹ ವಿದ್ಯತೇ. ಅಂದರೆ ಈ ಪ್ರಪಂಚದಲ್ಲಿಜ್ಞಾನಕ್ಕೆ ಸಮಾನವಾದುದು ಮತ್ತು ಪವಿತ್ರವಾದುದು ಮತ್ತೊಂದಿಲ್ಲಎನ್ನುವುದು ಸೂಕ್ತವಾಗಿದೆ. ಆದ್ದರಿಂದ ಯಾವುದೇ ವ್ಯಕ್ತಿ, ಸಮಾಜ, ರಾಷ್ಟ್ರಗಳ ಸಮಗ್ರ ಅಭಿವೃದ್ಧಿಯಲ್ಲಿಶಿಕ್ಷಣ ಮಹತ್ವದ ಸಾಧನವಾಗಿದೆ.
ಭಾರತದ ಆಧುನಿಕ ಶಿಕ್ಷಣ ಕ್ರಮವು 10+2+3 ಮಾದರಿಯದ್ದಾಗಿದ್ದು, ಇದು ಸಾಮಾನ್ಯ ಶಿಕ್ಷಣ, ಪದವಿ ಪೂರ್ವ, ಉನ್ನತ ಶಿಕ್ಷಣಗಳನ್ನೊಳಗೊಂಡಿದೆ. ಭಾರತದಲ್ಲಿಉನ್ನತ ಶಿಕ್ಷಣವು 12ನೇ ತರಗತಿಯ (+2 ಹಂತ) ನಂತರ ಪ್ರಾರಂಭವಾಗುತ್ತದೆ. +2 ಹಂತದ ನಂತರ ಬರುವ ಶಿಕ್ಷಣವೇ ಉನ್ನತ ಶಿಕ್ಷಣ. ಇದನ್ನು ವಿಶ್ವವಿದ್ಯಾಲಯದ ಶಿಕ್ಷಣವೆಂತಲೂ ಕರೆಯುತ್ತಾರೆ. ವಿಶ್ವವಿದ್ಯಾಲಯ ಎಂಬುದನ್ನು ಇಂಗ್ಲೀಷಿನಲ್ಲಿ ಎನ್ನುತ್ತಾರೆ. ಈ ಇಂಗ್ಲೀಷ್ ಪದ ಲ್ಯಾಟಿನ್ ಭಾಷೆಯ ಎಂಬ ಪದದಿಂದ ಬಂದಿದೆ. ಇದರ ಅರ್ಥ ಸಮುದಾಯ ಅಥವಾ ಒಟ್ಟುಗೂಡಿದ ಒಂದು ಅಂಗ ಅಂದರೆ ಯಾರು ಕಲಿಯುವ ಮತ್ತು ಕಲಿಸುವ ಪ್ರಕ್ರಿಯೆಯಲ್ಲಿನಿರತರಾಗಿರುವರೋ ಅಂತಹ ವಿದ್ಯಾರ್ಥಿ ಮತ್ತು ಶಿಕ್ಷಕರ ಸಮುದಾಯ ಎನ್ನಬಹುದು. ಉನ್ನತ ಶಿಕ್ಷಣವು ಮನುಕುಲವು ಎದುರಿಸುತ್ತಿರುವ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ನೈತಿಕ, ಆಧ್ಯಾತ್ಮಿಕ ವಿಷಯಗಳ ಬಗ್ಗೆ ಚಿಂತನ-ಮಂಥನ ಮಾಡಲು ಅವಕಾಶ ಮಾಡಿಕೊಟ್ಟು ವಿಶೇಷವಾದ ಜ್ಞಾನ ಮತ್ತು ಕೌಶಲ್ಯಗಳನ್ನು ಬೆಳೆಸುವುದರ ಮೂಲಕ ರಾಷ್ಟ್ರ ಮತ್ತು ಜಗತ್ತಿನ ಅಭಿವೃದ್ದಿಗೆ ತನ್ನ ಕಾಣಿಕೆಯನ್ನು ನೀಡುವ ಶಿಕ್ಷಣವಾಗಿದೆ.
ಉನ್ನತ ಶಿಕ್ಷಣವು 12ನೇ ತರಗತಿಯ (+2 ಹಂತ) ನಂತರ ಪ್ರಾರಂಭವಾಗಿ 3 ವರ್ಷದ ಬಿ.ಎ, ಬಿ.ಎಸ್ಸಿ, ಬಿ.ಕಾಂ, ಬಿ.ಬಿ.ಎಂ, ಬಿ.ಸಿ.ಎ ಮುಂತಾದ ಪದವಿಗಳು ಅಥವಾ 5 ವರ್ಷದ ಹಾನರ್ಸ್ ಪದವಿ ಪಡೆಯುವುದಾಗಿದೆ ಮತ್ತು 4ವರ್ಷದ ಇಂಜಿನಿಯರಿಂಗ್ 1 ವರ್ಷದ ಪ್ರಾಯೋಗಿಕ ತರಬೇತಿ ಕೋರ್ಸ್ , ಮೆಡಿಕಲ…, ಕಾನೂನು, ಕೃಷಿ, ತೋಟಗಾರಿಕೆ, ಬಹುಮಾಧ್ಯಮ ಮುಂತಾದ ಪದವಿಗಳ ಶಿಕ್ಷಣ ಅಲ್ಲದೇ 2 ವರ್ಷದ ಅವಧಿಯ ಸ್ನಾತ್ತಕೋತ್ತರ ಶಿಕ್ಷಣದ ನಂತರ ಎಂ.ಫಿಲ…, ಪಿಎಚ್ ಡಿ, ಡಿ.ಲಿಟ್ ಮುಂತಾದ ಶಿಕ್ಷಣಗಳನ್ನು ಪಡೆಯುವ ಶಿಕ್ಷಣವೂ ಸೇರಿದೆ. ಈ ಉನ್ನತ ಶಿಕ್ಷಣವು ದೂರ ಶಿಕ್ಷಣ ಮತ್ತು ರೆಗ್ಯುಲರ್ ಮಾದರಿಯಲ್ಲಿದೊರೆಯುತ್ತದೆ. ಇತ್ತೀಚೆಗೆ ಆನ್ ಲೈನ್ ಮಾದರಿಯ ಶಿಕ್ಷಣವೂ ಬಂದಿದೆ.

