ಮುದಗಲ್ -ಪಾಳು ಬಿದ್ದ ತರಕಾರಿ ಮಾರುಕಟೆ:

Contributed bydnkodihal@gmail.com|Vijaya Karnataka

ಮುದಗಲ್‌ ಬಳಿಯ ಬಯ್ಯಾಪುರ ಮತ್ತು ನಾಗರಹಾಳ ಗ್ರಾಮಗಳ ತರಕಾರಿ ಮಾರುಕಟ್ಟೆಗಳು 12 ವರ್ಷಗಳಾದರೂ ದುರಸ್ತಿಯಾಗಿಲ್ಲ. ಶೆಡ್‌ಗಳು ಪಾಳು ಬಿದ್ದಿವೆ. ಗೋಡೆಗಳು ಬಿರುಕು ಬಿಟ್ಟಿವೆ. ತಗಡುಗಳು ಹಾರಿಹೋಗಿವೆ. ಮುಳ್ಳು ಕಂಟಿಗಳು ಬೆಳೆದಿವೆ. ವ್ಯಾಪಾರಿಗಳು ರಸ್ತೆ ಬದಿ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಆರೋಗ್ಯ ಮತ್ತು ಸಂಚಾರಕ್ಕೆ ತೊಂದರೆಯಾಗುತ್ತಿದೆ. ಅಧಿಕಾರಿಗಳು ಕೂಡಲೇ ದುರಸ್ತಿ ಮಾಡಬೇಕು.

mudgal pala vegetable market collapse what is the solution to traders problems

ಪಾಳು ಬಿದ್ದ ತರಕಾರಿ ಮಾರುಕಟ್ಟೆ

*ವ್ಯಾಪಾರಸ್ಥರಿಗೆ ತೊಂದರೆ

ವಿಕ ಸುದ್ದಿಲೋಕ ಮುದಗಲ್

ಸಮೀಪದ ಬಯ್ಯಾಪುರ ಹಾಗೂ ನಾಗರಹಾಳ ಗ್ರಾಮಗಳಲ್ಲಿಕಳೆದ 12 ವರ್ಷಗಳಿಂದ ನಿರ್ಮಿಸಲಾದ ತರಕಾರಿ ಮಾರುಕಟ್ಟೆಯ ಶೆಡ್ ಗಳು ಪಾಳು ಬಿದ್ದಿವೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

2011-12 ನೇ ಸಾಲಿನಲ್ಲಿಲಿಂಗಸುಗೂರು ಎಪಿಎಂಸಿಯ ಆರ್ ಐಡಿಎಫ್ ಯೋಜನೆಯಡಿ ನಾಗರಹಾಳ ಮತ್ತು ಬಯ್ಯಾಪುರ ಗ್ರಾಮಗಳಲ್ಲಿ5 ಲಕ್ಷ ರೂ. ವೆಚ್ಚದಲ್ಲಿನಿರ್ಮಿಸಲಾದ ತರಕಾರಿ ಮಾರುಕಟ್ಟೆ ಮಳಿಗೆಗಳು ವ್ಯಾಪಾರಸ್ಥರಿಗೆ ಉಪಯೋಗಕ್ಕೆ ಬಾರದತಂತಾಗಿವೆ. ಕಟ್ಟಡದ ಗೋಡೆಗಳು ಬಿರಕು ಬಿಟ್ಟಿವೆ. ಚಾವಣಿಗೆ ಬಳಸಲಾದ ತಗಡುಗಳು ಗಾಳಿಗೆ ಹಾರಿಹೋಗಿವೆ. ಶೆಡ್ಡಿನ ಸುತ್ತ ಬಳ್ಳಾರಿ ಜಾಲಿಗಿಡಗಳು ಹೆಮ್ಮರವಾಗಿ ಬೆಳೆದು ನಿಂತಿವೆ. ತರಕಾರಿ ವ್ಯಾಪಾರಸ್ಥರು ಗ್ರಾಮಗಳ ರಸ್ತೆ ಬದಿ ಮತ್ತು ಫುಟ್ ಪಾತ್ ಮೇಲೆ ತರಕಾರಿ ಮಾರಾಟ ಮಾರುತ್ತಿದ್ದಾರೆ. ಇದರಿಂದ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬಿರುತ್ತಿದೆ. ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಅಧಿಕಾರಿಗಳು ತರಕಾರಿ ಮಾರುಕಟ್ಟೆಯನ್ನು ದುರಸ್ತಿಗೊಳಿಸಿ, ವ್ಯಾಪಾರಸ್ಥರಿಗೆ ಅನುಕೂಲ ಮಾಡಿಕೊಡಬೇಕೆಂದು ಜನ ಆಗ್ರಹಿಸಿದ್ದಾರೆ.

---

ಆರ್ .ಸಿ.ಹೆಚ್ 29 ನಾಗರಹಾಳ-3 ಮುದಗಲ್ ಸಮೀಪದ ಬಯ್ಯಾಪುರ ಗ್ರಾಮದ ತರಕಾರಿ ಮಾರುಕಟ್ಟೆ ಅವ್ಯವಸ್ಥೆಯ ಆಗರವಾಗಿದ್ದು, ಮುಳ್ಳುಕಂಟಿಗಳು ಬೆಳೆದು ನಿಂತಿವೆ.

ಆರ್ .ಸಿ.ಹೆಚ್ 29ನಾಗರಹಾಳ-4) ಮುದಗಲ್ ಸಮೀಪದ ನಾಗರಹಾಳ ಗ್ರಾಮದ ತರಕಾರಿ ಮಾರುಕಟ್ಟೆ ಉಪಯೋಗಕ್ಕೆ ಬಾರದಂತಾಗಿದೆ.