ಗೋ ಸೇವೆ ಪುಣ್ಯದ ಕೆಲಸ

Contributed byashok.kashetti@yahoo.co.in|Vijaya Karnataka

ಸವಣೂರಿನಲ್ಲಿ ಹಿಂದೂಪರ ಸಂಘಟನೆಗಳು ಗೋಮಾತೆಯ ಗೌರವಕ್ಕಾಗಿ ಮೌನ ಮೆರವಣಿಗೆ ನಡೆಸಿದವು. ಗೋಮಾತೆಯನ್ನು ರಕ್ಷಿಸುವುದು ನಮ್ಮ ಕರ್ತವ್ಯ ಎಂದು ಮಹೇಶ ಸಾಲಿಮಠ ಹೇಳಿದರು. ಹತ್ಯೆ ಮತ್ತು ಕಳ್ಳ ಸಾಗಾಣಿಕೆ ಮಾಡುವವರಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಒತ್ತಾಯಿಸಲಾಯಿತು. ರಾಷ್ಟ್ರಪತಿ, ರಾಜ್ಯಪಾಲ, ಪ್ರಧಾನಿ ಮತ್ತು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಅಭಿಯಾನದಲ್ಲಿ ಹಲವು ಮುಖಂಡರು ಪಾಲ್ಗೊಂಡಿದ್ದರು.

campaign for the respect of cow service what is the responsibility of society

ವಿಕ ಸುದ್ದಿಲೋಕ ಸವಣೂರು

ಹಿಂದೂ ಧರ್ಮ ಮತ್ತು ಸಂಸ್ಕೃತಿಯಲ್ಲಿಗೋಮಾತೆ ಅತ್ಯಂತ ಪವಿತ್ರವಾದ ಮತ್ತು ಪೂಜನೀಯಯವಾದ ಪ್ರಾಣಿ. ಗೋ ಸೇವೆಯು ಪುಣ್ಯದ ಕೆಲಸ. ಗೋಮಾತೆ ಪೋಷಿಸುವುದು ಮತ್ತು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ ಎಂದು ಹಿಂದೂ ಸಮಾಜದ ಹಿರಿಯ ಮುಖಂಡ ಮಹೇಶ ಸಾಲಿಮಠ ಹೇಳಿದರು.

ಗೋಮಾತೆಯ ಗೌರವದ ಅಭಿಯಾನದ ಅಂಗವಾಗಿ ಹಿಂದೂಪರ ಸಂಘಟನೆಗಳ ಪದಾಧಿಕಾರಿಗಳು ಪಟ್ಟಣದಲ್ಲಿಏರ್ಪಡಿಸಿದ್ದ ಮೌನ ಮೆರವಣಿಗೆ ಜಾಥಾ ಭರಮಲಿಂಗಶ್ವರ ವೃತ್ತದಿಂದ ಚಾಲನೆಗೊಂಡು ಮಾರುಕಟ್ಟೆಯ ಪ್ರಮುಖ ಬೀದಿಗಳಲ್ಲಿಸಂಚರಿಸಿ ತಹಸೀಲ್ದಾರ್ ಕಚೇರಿ ತಲುಪಿದ ಸಂದರ್ಭದಲ್ಲಿಮಾತನಾಡಿದರು.

ನಂತರ, ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಹಸೀಲ್ದಾರ್ ಮೂಲಕ ರಾಷ್ಟ್ರಪತಿ ಅವರಿಗೆ, ರಾಜ್ಯಪಾಲರಿಗೆ, ಪ್ರಧಾನ ಮಂತ್ರಿಯವರಿಗೆ ಹಾಗೂ ಮುಖ್ಯಮಂತ್ರಿ ಅವರಿಗೆ ಮನವಿಯನ್ನು ಸಲ್ಲಿಸಿದರು.

ಜಿಲ್ಲಾರೈತ ಮೋರ್ಚಾ ಅಧ್ಯಕ್ಷ ಗಂಗಾಧರ ಬಾಣದ ಮಾತನಾಡಿ, ‘‘ಗೋಮಾತೆಯನ್ನು ಮಾತೆ ಮತ್ತು ಕಾಮಧೇನು ಎಂದು ಕರೆಯುತ್ತೇವೆ. ಆದರೆ, ಗೋಮಾತೆಯನ್ನು ಹತ್ಯೆ ಮಾಡುವುದು, ಕಳ್ಳ ಸಾಗಾಣಿಕೆ ಮಾಡುತ್ತಿರುವುದು ಅಕ್ಷಮ್ಯ. ಅಂತವರಿಗೆ ಕಠಿಣ ಶಿಕ್ಷೆ ಆಗಬೇಕು. ಗೋವುಗಳನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯ’’ ಎಂದು ಹೇಳಿದರು.

ಬಿಜೆಪಿ ಮಂಡಲ ಅಧ್ಯಕ್ಷ ಶಿವುಪುತ್ರಪ್ಪ ಕಲಕೋಟಿ, ಪ್ರಮುಖರಾದ ಮೈಲಾರೆಪ್ಪ ತಳ್ಳಿಹಳ್ಳಿ, ಹನಮಂತಪ್ಪ ಲಮಾಣಿ, ಪ್ರವೀಣ ಬಾಲೆಹೊಸೂರ, ಮಹೇಶ ಮುದಗಲ, ಶ್ರೀನಿವಾಸ್ ಗಿತ್ತೆ, ಕಿರಣಕುಮಾರ ವಿವೇಕವಂಶಿ, ಬಸನಗೌಡ ಕೊಪ್ಪದ, ಮಹೇಶ ಜಡಿ, ಸಮೀತ ಕೆಮ್ಮಣ್ಣಕೇರಿ, ಹಿರಿಯ ಪತ್ರಕರ್ತ ಜಯತೀರ್ಥ ದೇಶಪಾಂಡೆ, ಅಶೋಕ ಯಲಿಗಾರ ಹಾಗೂ ಇತರರು ಪಾಲ್ಗೊಂಡಿದ್ದರು.

29ಎಸ್ ವಿಆರ್ 3

ಗೋಮಾತೆಯ ಗೌರವದ ಅಭಿಯಾನದ ಅಂಗವಾಗಿ ಸವಣೂರಲ್ಲಿಹಿಂದೂಪರ ಸಂಘಟನೆಗಳ ಪದಾಧಿಕಾರಿಗಳು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಹಸೀಲ್ದಾರ್ ಗೆ ಮನವಿ ಸಲ್ಲಿಸಿದರು.